ಕಲಾ ಸಂಭ್ರಮ ಮತ್ತು ಸಾಧಕರಿಗೆ ಸನ್ಮಾನ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭ

ಕಲಾ ಸಂಭ್ರಮ ಮತ್ತು ಸಾಧಕರಿಗೆ ಸನ್ಮಾನ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭ

ಕಲಾ ಸಂಭ್ರಮ ಮತ್ತು ಸಾಧಕರಿಗೆ ಸನ್ಮಾನ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭ 

ಶಹಾಬಾದ : - ಕರ್ನಾಟಕ ರಾಜ್ಯೋತ್ಸವದ 69ನೇ ಸಂಭ್ರಮಾಚರಣೆಯ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಕಲಾ ಸಂಭ್ರಮ ಮತ್ತು ಸಾಧಕರಿಗೆ ಸನ್ಮಾನ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭ ರವಿವಾರ ದಿನಾಂಕ 15 /12 /2024 ರಂದು ಹಮ್ಮಿಕೊಳ್ಳಲಾಗಿದೆ ಎಂದು ಕರವೇ ತಾಲ್ಲೂಕಾಧ್ಯಕ್ಷ ಯಲ್ಲಾಲಿಂಗ ಹೈಯಾಳಕರ ಹೇಳಿದರು. 

ಅವರು ಪತ್ರಿಕಾ ಮಾಧ್ಯಮಗಳ ಜೊತೆ ಮಾತನಾಡಿ, ಅಂದು ಸಹಾರಾ ಫಂಕ್ಷನ್ ಹಾಲ್ ನಲ್ಲಿ ಬೆಳಗ್ಗೆ 10 ಗಂಟೆಗೆ ಸಮಾರಂಭ ಪ್ರಾರಂಭವಾಗಲಿದೆ. 

ಕಾರ್ಯಕ್ರಮದ ದಿವ್ಯಾ ಸಾನಿಧ್ಯ ವನ್ನ ತಾಲ್ಲೂಕಿನ ತೋನಸನಹಳ್ಳಿ ಗ್ರಾಮದ ಅಲ್ಲಮಪ್ರಭು ಸಂಸ್ಥಾನ ಪೀಠದ ಪೂಜ್ಯರಾದ ಧರ್ಮ ರತ್ನ ಡಾ. ಮಲ್ಲಣ್ಣಪ್ಪ ಮಹಾಸ್ವಾಮಿಗಳು ಹಾಗೂ ಸಾವಿರ ಗ್ರಾಮದ ಸಿದ್ಧಲಿಂಗೇಶ್ವರ ಸಂಸ್ಥಾನ ಪೀಠದ ಪೂಜ್ಯರಾದ ಮ. ನಿ.ಪ್ರ.ಸ್ವ ಸಿದ್ದಲಿಂಗ ಮಹಾಸ್ವಾಮಿಗಳು ವಹಿಸಿಕೊಳ್ಳುವರು. 

ಕಲಾ ಸಂಭ್ರಮದ ಕಾರ್ಯಕ್ರಮವನ್ನು ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕರಾದ ಬಸವರಾಜ ಮತ್ತಿಮಡು ರವರು ಉದ್ಘಾಟಿಸುವರು. 

ಸಭೆಯ ಅಧ್ಯಕ್ಷತೆಯನ್ನು ಕರವೇ ಜಿಲ್ಲಾಧ್ಯಕ್ಷ ಆನಂದ ದೊಡ್ಡಮನಿ ವಹಿಸಿಕೊಳ್ಳುವರು. 

ಕಾರ್ಯಕ್ರಮದ ಧ್ವಜಾರೋಹಣ ವನ್ನು ಶಾಮ ನಾಟೀಕಾರ,ಗುಂಡಣ್ಣ ಡಿಗ್ಗಿ, ನೆರವೇರಿಸುವರು, ಜ್ಯೋತಿ ಬೆಳಗಿಸುವರು ನರೇಂದ್ರ ವರ್ಮಾ, ಕನ್ನಡಾಂಬೆಗೆ ಪೂಜೆ ಸಲ್ಲಿಸುವರು ರಾಜಕುಮಾರ ಕಪನೂರ, ಮೆರವಣಿಗೆ ಉದ್ಘಾಟನೆ ವಿಜಯಕುಮಾರ ಹಳ್ಳಿ ಮಾಡುವರು. 

ವಿಶೇಷ ಆಹ್ವಾನಿತರಾಗಿ ತಾಲ್ಲೂಕ ತಹಶೀಲ್ದಾರ್ ಜಗದೀಶ ಚೌರ, ನಗರ ಪೊಲೀಸ್ ಠಾಣೆಯ ಸಿಪಿಐ ನಟರಾಜ ಲಾಡೆ, ನಗರ ಸಭೆ ಪೌರಾಯುಕ್ತ ಡಾ. ಕೆ. ಗುರಲಿಂಗಪ್ಪ, ಅಧ್ಯಕ್ಷೆ ಶ್ರೀಮತಿ ಚಂಪಾಬಾಯಿ ರಾಜು ಮೇಸ್ತ್ರಿ, ತಾಲೂಕ ಪಂಚಾಯಿತ ಇ. ಒ ಮಲ್ಲಿನಾಥ ರಾವೂರ ಜೊತೆ ಅಥಿತಿಗಳಾಗಿ ಕರವೇ ರಾಜ್ಯ ಕಾರ್ಯದರ್ಶಿ ಮಹೇಶ ಕಾಶಿ, ದಸಂಸ ರಾಜ್ಯ ಸಂ. ಸಂಚಾಲಕ ಮರಿಯಪ್ಪ ಹಳ್ಳಿ, ಬಿಜೆಪಿ ಅಧ್ಯಕ್ಷ ನಿಂಗಪ್ಪ ಹುಳಗೋಳಕರ, ಕಾಡಾ ಅಧ್ಯಕ್ಷ ಡಾ. ಎಂಎ ರಶೀದ, ಗುಂಡಪ್ಪ ಸೀರಡೋಣ, ಮತೀನ ಪಟೇಲ್, ಅಪ್ಪುಗೌಡ ತರನಳ್ಳಿ, ಶರಣು ಪಗಲಾಪೂರ, ರಾಜೇಶ ಯನಗುಂಟಿಕರ, ಡಾ. ಅಹ್ಮದ ಪಟೇಲ, ಶರಣಗೌಡ ಪಾಟೀಲ, ಡಿಸಿ ಹೋಸಮನಿ, ಜಹೀರ್ ಅಹ್ಮದ ಪಟವೇಗಾರ ರವರು ಉಪಸ್ಥಿತರಿರುವರು ಎಂದರು. 

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಗುವದು ಎಂದು ತಿಳಿಸಿದರು.

ಶಹಾಬಾದ ಸುದ್ದಿ ನಾಗರಾಜ್ ದಂಡಾವತಿ