ಸಹಕಾರ ಸಂಘದ ೧೬ನೇ ವಾರ್ಷಿಕ ಮಹಾಸಭೆ

ಸಹಕಾರ ಸಂಘದ ೧೬ನೇ ವಾರ್ಷಿಕ ಮಹಾಸಭೆ
ಶಹಾಬಾದ : - ಶಹಾಬಾದ್ ಪತ್ತಿನ ಸಹಕಾರ ಸಂಘದ ೨೦೨೪-೨೫ನೇ ಸಾಲಿನ 16ನೇ ವಾರ್ಷಿಕ ಮಹಾಸಭೆ ಕಚೇರಿಯ ಆಭರಣದಲ್ಲಿ ಅರ್ಥಪೂರ್ಣವಾಗಿ ಜರುಗಿತು.
ಅಥಿತಿಗಳಾಗಿ ಆಗಮಿಸಿದ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕನಕಪ್ಪ ದಂಡಗುಲಕರ ಮಾತನಾಡಿ, ಈ ಪತ್ತಿನ ಸಹಕಾರ ಸಂಘವು ಸುಮಾರು ೧೬ ವರ್ಷಗಳಿಂದ ಯಶಸ್ವಿಯಾಗಿ ನಡೆದುಕೊಂಡು ಬಂದಿದೆ, ನಾವೆಲ್ಲರೂ ಸೇರಿ ಇದನ್ನು ಉಳಿಸಿ ಬೆಳೆಸುವ ಕೆಲಸ ಮಾಡೋಣ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಸಂಘದ ಅಧ್ಯಕ್ಷ ಸದಾನಂದ ಕುಂಬಾರ ಮಾತನಾಡಿ, ಈ ವರ್ಷದ ಸಾಲಿನ ಅತ್ಯಲ್ಪ ಲಾಭಾಂಶ ಬಂದಿದೆ, ಮುಂಬರುವ ದಿನಗಳಲ್ಲಿ ಸದೃಡ ಆರ್ಥಿಕ ಭದ್ರತೆ ಕಡೆಗೆ ತೆಗೆದು ಕೊಂಡು ಹೋಗಲು ಎಂದು ತಿಳಿಸಿದರು.
ಸಂಘದ ಉಪಾಧ್ಯಕ್ಷ ಲೋಹಿತ್ ಕಟ್ಟಿ, ಸದಸ್ಯರಾದ ನಿಂಗಪ್ಪ ಹುಳುಗೋಳ್ಕರ, ಶರಣು ವಸ್ತ್ರದ, ಶಿವಾನಂದ ಪಾಟೀಲ, ನಾಗನಗೌಡ ಪಾಟೀಲ, ನಾರಾಯಣ್ ರೆಡ್ಡಿ, ಜಗದೀಶ್ ಪಾಟೀಲ, ಶರಣು ಜೋಗುರ, ಕಾರ್ಯದರ್ಶಿ ಶರಣು ತುಂಗಳ, ಸಿಬ್ಬಂದಿ
ಶಾರದಾ ಸೇರಿದಂತೆ ನೂರಾರು ಜನ ಉಪಸ್ಥಿತರಿದ್ದರು.
ಶರಣು ವಸ್ತ್ರದ ಸ್ವಾಗತಿಸಿದರು, ಲೋಹಿತ ಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಶರಣು ತುಂಗಳ ವಾರ್ಷಿಕ ವರದಿ ಓದಿದರು, ಶಿವಾನಂದ ಪಾಟೀಲ ವಂದಿಸಿದರು.
ಶಹಾಬಾದ್ ಸುದ್ದಿ ನಾಗರಾಜ್ ದಂಡಾವತಿ