ಮತಾಧಿಕಾರ ನಿರ್ಭಯವಾಗಿ ನೈತಿಕವಾಗಿ ಚಲಾಯಿಸಿ : ಡಾ ಎಚ್.ಎಸ್.ಹೊಸಮನಿ
ಮತಾಧಿಕಾರ ನಿರ್ಭಯವಾಗಿ ನೈತಿಕವಾಗಿ ಚಲಾಯಿಸಿ : ಡಾ ಎಚ್.ಎಸ್.ಹೊಸಮನಿ
ಆಳಂದ:ಹೈ.ಕ. ಶಿಕ್ಷಣ ಸಂಸ್ಥೆಯ ಎ.ವ್ಹಿ. ಪಾಟೀಲ ಪದವಿ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಮತದಾರರ ದಿನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು . ಕಾರ್ಯಕ್ರಮದ ಅಧ್ಯಕ್ಷತೆ ಸ್ಥಾನ ವಹಿಸಿದ ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಎಸ್. ಹೊಸಮನಿಯವರು
ಮಾತನಾಡಿ ರೌಂಡ ಟೇಬಲ ಕಾನ್ಫರೆನ್ಸ್ ನಲ್ಲಿಮತದಾನದ ಹಕ್ಕು ಕೇವಲ ಪದವಿಧರರಿಗೆ. ತೆರಿಗೆ ಕಟ್ಟುವವರಿಗೆ . ಜಮಿನ್ದಾರರಿಗೆ ನೀಡ ಬೇಕೆಂದು ಹಲವರು ಪಟ್ಟುಹಿಡಿದಿದ್ದರು. ಡಾ.ಬಾಬಾಸಾಹೇಬ ಅಂಬೇಡ್ಕರ ಅದನ್ನು ವಿರೋಧಿಸಿ ದೇಶದಪ್ರತಿಯೊಬ್ಬ 21 ವರ್ಷದ ನಾಗರಿಕರಿಗೆ ಮತದಾನದ ಹಕ್ಕನ್ನು ತಾವು ರಚಿಸಿದ ಭಾರತ ಸಂವಿಧಾನ ಮೂಲಕ ನಮಗೆ ನೀಡಿದ್ದಾರೆ 1989ರಲ್ಲಿ ಪ್ರಧಾನಿ ರಾಜೀವ ಗಾಂಧಿಯವರು ಸಂವಿಧಾನದ 61ನೇ ತಿದ್ದುಪಡಿ ಮಾಡುವ ಮೂಲಕ ಮತದಾರರ ವಯಸ್ಸು 21 ರಿಂದ 18ಕ್ಕೆ ಇಳಿಸಿದರು. ಮತದಾನ ನಮ್ಮೆಲ್ಲರಿಗೆ ಕೊಟ್ಟಂತಹ ಶಕ್ತಿ" ಆ ಹಕ್ಕನ್ನು ದುರ್ಬಳಕೆ ಮಾಡಿಕೊಳ್ಳದೆ ಒಳ್ಳೆಯ ಅಭ್ಯರ್ಥಿಯನ್ನು ಆಯ್ಕೆ ಮಾಡಿ ನಮ್ಮ ಪ್ರತಿನಿಧಿಯಾಗಿ ಕಳಿಸುವ ಹಕ್ಕನ್ನು ನಮಗೆ ಕೊಟ್ಟಿದೆ. ಆದ್ದರಿಂದ ಪ್ರತಿಯೊಬ್ಬ ನಾಗರಿಕರು ಅದನ್ನು ಅರಿತುಕೊಂಡು ಮತವನ್ನು ನಿರ್ಭಯವಾಗಿ, ನೈತಿಕವಾಗಿ ಚಲಾಯಿಸಿದಾಗ ಮಾತ್ರ ಉತ್ತಮ ಸುಭದ್ರ ಸರಕಾರ ರಚಿಸಿ ಸದೃಢ ದೇಶವನ್ನು ಕಟ್ಟಲು ಸಾಧ್ಯವಾಗುತ್ತದೆ ಯಾವ ಸಮಾಜ ಮತಗಳನ್ನು ಮಾರಾಟ ಮಾಡಿಕೊಳ್ಳುತ್ತದೆಯೋ ಆ ಸಮಾಜದಲ್ಲಿಮಾರಾಟವಾಗುವ ನಾಯಕನೆ ಹುಟ್ಟುತ್ತಾನೆ ಎಂದು ನುಡಿದರು.
ವೇದಿಕೆ ಮೇಲೆ ಮುಖ್ಯ ಅತಿಥಿಗಳಾಗಿ ಡಾ. ರಮೇಶ ಮಸರೂಬ, ಹಾಗೂ
ಗೌರವ ಉಪಸ್ಥಿತಿಯಲ್ಲಿ ಪ್ರೂ.ಎಸ್.ಎಸ್.ಕಮ್ಮಾರ ಡಾ.ರಾಜಶೇಖರ ಬಾಬನೂರ, ಡಾ. ಟೀಕಪ್ಪ ಹಾಗೂ
ಡಾ. ವೆಂಕಟೇಶ ಪೂಜಾರಿ ರವರು ಎಲ್ಲರಿಗೂ ಮತದಾರರ ಪ್ರತಿಜ್ಞೆಯನ್ನು ವಾಚನ ಮಾಡಿಸುವುದರ ಮೂಲಕ ಕಾರ್ಯಕ್ರಮವನ್ನು ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ
ಶ್ರೀ ಸಿದ್ದರಾಮ ಬಿಜಾಪುರ, ಡಾ.ಜೈಪ್ರಕಾಶ. ಬಾವಿಮನಿ, ಬಸವರಾಜ ಶೃಂಗೇರಿ, ಹಾಗೂ ಎಲ್ಲಾ ಬೋಧಕ ಸಿಬ್ಬಂದಿ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರಾದ ಬಸವರಾಜ ಪಾಟೀಲ ವಾಮನ ದೇವಿ ಮತ್ತು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದ ನಿರೂಪಣೆಯನ್ನು ಡಾ.ಬಬ್ರುವಾಹನ ಮಾಡಿದರು. ಅತಿಥಿ ಗಣ್ಯರನ್ನು ಸಂಗಮೇಶ ಸ್ವಾಮಿ ಸ್ವಾಗತಿಸಿದರು, ಅಂಬರೀಶ ವಂದಿಸಿದರು.
ವರದಿ ಡಾ ಅವಿನಾಶ S ದೇವನೂರ