ತೋನಸನಹಳ್ಳಿ : ಗ್ರಾ. ಪಂ ಅಧ್ಯಕ್ಷರಾಗಿ ಮುತ್ತಮ್ಮ ಮರತೂರ, ಉಪಾಧ್ಯಕ್ಷರಾಗಿ ಅಫ್ರೋಜ ಬೇಗಂ ಆಯ್ಕೆ :

ತೋನಸನಹಳ್ಳಿ : ಗ್ರಾ. ಪಂ ಅಧ್ಯಕ್ಷರಾಗಿ ಮುತ್ತಮ್ಮ ಮರತೂರ, ಉಪಾಧ್ಯಕ್ಷರಾಗಿ ಅಫ್ರೋಜ ಬೇಗಂ ಆಯ್ಕೆ :

ತೋನಸನಹಳ್ಳಿ : ಗ್ರಾ. ಪಂ ಅಧ್ಯಕ್ಷರಾಗಿ ಮುತ್ತಮ್ಮ ಮರತೂರ, ಉಪಾಧ್ಯಕ್ಷರಾಗಿ ಅಫ್ರೋಜ ಬೇಗಂ ಆಯ್ಕೆ :

ಶಹಾಬಾದ : - ತಾಲೂಕಿನ ತೋನಸನಹಳ್ಳಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾಗಿದ್ದ ನೀರ್ಮಲ ಶಿವರಾಜ ಮತ್ತು ಉಪಾಧ್ಯಕ್ಷರಾಗಿದ್ದ ಸಿದ್ದು ಸಜ್ಜನ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಮುತ್ತಮ್ಮ ಶಿವರಾಯ ಮರತೂರ ಮತ್ತು ಉಪಾಧ್ಯಕ್ಷರಾಗಿ ಆಫ್ರೋಜ ಬೇಗಂ ಮೀರ ಅಲಿ ನಾಗೂರೆ ಅವಿರೋಧವಾಗಿ ಆಯ್ಕೆಯಾದರು. 

ತೋನಸನಹಳ್ಳಿ ಗ್ರಾಮ ಪಂಚಾಯಿತಿಮುಂದಿನ ಅವದಿಗೆ ಪ. ಜಾ (ಮಹಿಳೆ) ಅಧ್ಯಕ್ಷ ಸ್ಥಾನ ಮತ್ತು ಸಾಮಾನ್ಯ ವರ್ಗಕ್ಕೆ ಉಪಾಧ್ಯಕ್ಷ ಮೀಸಲಾಗಿಸಿದ ಸ್ಥಾನ ಕ್ಕೆ ಚುನಾವಣೆ ಜರುಗಿತು.

ತೋನಸನಹಳ್ಳಿ ಗ್ರಾಮ ಪಂಚಾಯಿತ ವ್ಯಾಪ್ತಿಗೆ ಸೇರಿದ ತೋನಸನಹಳ್ಳಿ, ತರನಳ್ಳಿ ಮತ್ತು ಗೋಳಾ (ಕೆ) ಗ್ರಾಮಕ್ಕೆ ಸೇರಿದ ಒಟ್ಟು 22 ಸದಸ್ಯರು ಉಪಸ್ಥಿತರಿದ್ದರು. 

ಅಧ್ಯಕ್ಷ ಸ್ಥಾನಕ್ಕೆ ತೋನಸನಹಳ್ಳಿ ಗ್ರಾಮದ ಶ್ರೀಮತಿ ಮುತ್ತಮ್ಮ ಶಿವರಾಯ ಮರತೂರ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ತರನಳ್ಳಿ ಗ್ರಾಮದ ಶ್ರೀಮತಿ ಅಫ್ರೋಜ ಬೇಗಂ ಮೀರ ಅಲಿ ನಾಗೂರೆ ಯವರು ಇಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದರು. 

ಪ್ರತಿ ಸ್ಪರ್ಧಿಯಾಗಿ ಯಾರು ನಾಮಪತ್ರ ಸಲ್ಲಿಸದ ಕಾರಣ ಅಧ್ಯಕ್ಷರಾಗಿ ಶ್ರೀಮತಿ ಮುತ್ತಮ್ಮ ಶಿವರಾಯ ಮರತೂರ ಹಾಗೂ ಉಪಾಧ್ಯಕ್ಷರಾಗಿ ತರನಳ್ಳಿ ಗ್ರಾಮದ ಶ್ರೀಮತಿ ಅಫ್ರೋಜ ಬೇಗಂ ಮೀರ ಅಲಿ ನಾಗೂರೆ ಯವರು ಅವಿರೋಧವಾಗಿ ಆಯ್ಕೆಯಾದರು.

ತಾಲ್ಲೂಕ ತಹಶೀಲ್ದಾರ್ ಜಗದೀಶ ಚೌರ ರವರು ಚುನಾವಣಾಧಿಕಾರಿ ಯಾಗಿ ಆಗಮಿಸಿ ಚುನಾವಣೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹೆಸರು ಘೋಷಣೆ ಮಾಡಿದರು. 

ಈ ಸಂಧರ್ಭದಲ್ಲಿ ಮರಿಯಪ್ಪ ಹಳ್ಳಿ, ಅಪ್ಪುಗೌಡ ತರನಳ್ಳಿ, ಮರಲಿಂಗ ಗಂಗಬೊ, ಮಹಾಲಿಂಗ ಮದ್ದರಕಿ ಪೂಜಾರಿ, ಹಣಮಂತ ಕೊಂಡಯ್ಯ, ಬಸವರಾಜ ಖಣದಾಳ, ಉಮರ್ ಪಟೇಲ, ಕೃಷ್ಣಪ್ಪ ಕರಣಿಕ, ಹಾಷಮ ಖಾನ, ರಾಜೇಶ ಯನಗುಂಟಿಕರ, ಸಿದ್ರಾಮ ಉದಯಕರ, ಮಲ್ಲಿಕಾರ್ಜುನ ಕಟ್ಟಿಮನಿ, ನಾಗರಾಜ ಕರಣಿಕ, ಮ. ಜಾವೀದ ಮತ್ತು ಗ್ರಾಮ ಪಂಚಾಯತ್ ಸದಸ್ಯರು ಸೇರಿದಂತೆ ಅನೇಕರು ಇದ್ದರು. 

ಗ್ರಾಮ ಪಂಚಾಯತ್ ಸುತ್ತಮುತ್ತ ಬಿಗುವಿನ ವಾತಾವರಣ ನಿರ್ಮಾಣ ವಾಗಿ ಪಿಎಸ್ಐ ಚಂದ್ರಕಾಂತ ಮಕಾಲೆ ಮತ್ತು ಎಎಸ್ಐ ಸಾತಲಿಂಗಪ್ಪ ಸಾಗರ ನೇತೃತ್ವದಲ್ಲಿ ಬೀಗಿ ಪೋಲಿಸ್ ಬಂದೋಬಸ್ತ್ ಮಾಡಲಾಗಿತ್ತು.