ವಿದ್ಯಾರ್ಥಿಗಳ ಆರೋಗ್ಯಕ್ಕೆ ಸಂಜೀವಿನಿ ನೀಡಿದ ಹೈ ಕ ಶಿಕ್ಷಣ ಸಂಸ್ಥೆ ಡಾ ಆಕಾಶ ಶಂಕರ್
ವಿದ್ಯಾರ್ಥಿಗಳ ಆರೋಗ್ಯಕ್ಕೆ ಸಂಜೀವಿನಿ ನೀಡಿದ ಹೈ ಕ ಶಿಕ್ಷಣ ಸಂಸ್ಥೆ ಡಾ ಆಕಾಶ ಶಂಕರ್
ಕಲ್ಯಾಣ ಕರ್ನಾಟಕದ ಕಲಬುರ್ಗಿ ಜಿಲ್ಲೆಯ ವಿದ್ಯಾರ್ಥಿಗಳ ಭವಿಷ್ಯದ ಆರೋಗ್ಯಕ್ಕೆ ಶಾಲಾ ಸಂಜೀವಿನಿ ಎಂಬ ವಿನೂತನ ಭಾಗ್ಯ ನೀಡಿದ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರಾದ ಡಾ ಆಕಾಶ ಶಂಕರ್ ಅಭಿಪ್ರಾಯ ಪಟ್ಟರು
ಅವರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಮಹಾದೇವಪ್ಪ ರಾಂಪೂರೆ ಮೆಡಿಕಲ್ ಕಾಲೇಜಿನ ನೇತೃತ್ವದಲ್ಲಿ ಜಾರಿಗೆ ತಂದಿರುವ ಕಲಬುರ್ಗಿ ಜಿಲ್ಲೆಯ ಶಾಲಾ ವಿದ್ಯಾರ್ಥಿಗಳಿಗಾಗಿ ಶಾಲಾ ಸಂಜೀವಿನಿ ಎಂಬ ವಿನೂತನ ಆರೋಗ್ಯ ಭಾಗ್ಯ ಯೋಜನೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಸುಮಾರು 16000 ಶಾಲೆಗಳಿವೆ ಅದರಲ್ಲಿ 9247 ಸರ್ಕಾರಿ ಶಾಲೆಗಳಿದ್ದು ಪ್ರತಿಶತ 50 ಕ್ಕಿಂತಲೂ ಹೆಚ್ಚು ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಆದರೆ ಒಂದು ವರದಿಯ ಪ್ರಕಾರ 6 ರಿಂದ 16 ವರ್ಷದ ಒಳಗಿನ ಸುಮಾರು 48000 ಮಕ್ಕಳು ಶಾಲೆಯಿಂದ ದೂರ ಉಳಿದಿದ್ದಾರೆ ಇದಕ್ಕೆ ಕಾರಣ ಅವರ ಅನಾರೋಗ್ಯ ಅವರ ಕುಟುಂಬದ ಅನಾರೋಗ್ಯವು ಸಹ ಒಂದು ಕಾರಣವಾಗಿದೆ ಎಂದು ಹೇಳಿದರು
ಇಂದು ಶಾಲೆಯ ಮಕ್ಕಳು ಆರೋಗ್ಯವಾಗಿ ಸದೃಢವಾಗಿರಲು ಬಿಸಿಯೂಟ, ಮೊಟ್ಟೆ, ಬಾಳೆಹಣ್ಣು,ಚಿಕ್ಕಿಯಂತ ಪ್ರೋಟಿನ್ ವಿಟಮಿನ್ ಯುಕ್ತ ಆಹಾರಗಳನ್ನು ನೀಡುತ್ತಿದ್ದರು ಈ ಭಾಗದಲ್ಲಿ ಶಾಲಾ ಮಕ್ಕಳು ಉತ್ಸಾಹದಿಂದ ಬರುತ್ತಿಲ್ಲ ಆದರೆ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯು ಶಾಲಾ ವಿದ್ಯಾರ್ಥಿಗಳ ಆರೋಗ್ಯ ರಕ್ಷಣೆಯ ಯೋಜನೆಗೆ ಚಾಲನೆ ನೀಡಿರುವುದು ಮುಂಬರುವ ದಿನಗಳಲ್ಲಿ ಶಾಲಾ ಮಕ್ಕಳ ಸಂಖ್ಯೆಯು ಹೆಚ್ಚಾಗಬಹುದೆಂದು ಅಭಿಪ್ರಾಯ ಪಟ್ಟರು.
ಈ ಬಾಗದಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ಕಾಮಾಲೆ, ಹೆಪಾಟೈಟಿಸ್ ರೋಗಗಳ ಬಗ್ಗೆ ಸ್ವಲ್ಪ ನಿಷ್ಕಾಳಜಿ ವಹಿಸಲಾಗುತ್ತಿದೆ ಅದಕ್ಕಾಗಿ ಸಂಸ್ಥೆಯು ಜಾಗೃತಿ ಮೂಡಿಸುವುದು ಅವಶ್ಯಕವಾಗಿದೆ ಎಂದು ಹೇಳಿದರು. ಈಗಾಗಲೇ ಸಂಸ್ಥೆಯ ಕಾಮಾಲೆ ರೋಗಿಗಳಿಗೆ ಉಚಿತ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಂಡಿರುವುದು ಒಳ್ಳೆಯ ಕಾರ್ಯ ಎಂದು ಹೇಳಿದರು. ಒಟ್ಟಾರೆ ಈ ಸಂಸ್ಥೆ ನಮ್ಮ ಇಲಾಖೆಯೊಂದಿಗೆ ಕೈ ಜೋಡಿಸಿ ವಿದ್ಯಾರ್ಥಿಗಳ ಭವಿಷ್ಯದ ಆರೋಗ್ಯದ ಆರೋಗ್ಯಕ್ಕೆ ಈ ಯೋಜನೆ ತಂದು ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ತೊಡಗಿರುವ ದಕ್ಕೆ ಸಂಸ್ಥೆಯ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯನ್ನು ಕೊಂಡಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ ನಮೋಶಿ ಮಾತನಾಡಿ 2002 ರಲ್ಲಿ ಅಂದಿನ ಮುಖ್ಯಮಂತ್ರಿಗಳಾದ ಎಸ್ ಎಂ ಕೃಷ್ಣ ರವರು ಬಿಸಿಯೂಟ ಜಾರಿಗೆ ತಂದರು ಆದರೂ ಶಾಲೆ ಬಿಟ್ಟ ಮಕ್ಕಳನ್ನು ಆಕರ್ಷಿಸಲು ಸಾಧ್ಯವಾಗಿಲ್ಲ ಒಂದು ಅಂದಾಜಿನ ಪ್ರಕಾರ ನಮ್ಮ ರಾಜ್ಯದಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲೆಗಳಿಂದ ದೂರ ಉಳಿದಿದ್ದಾರೆ ಇದಕ್ಕೆ ಮೂಲ ಕಾರಣ ವಿದ್ಯಾರ್ಥಿಗ ಆರೋಗ್ಯ ಸಮಸ್ಯೆಯು ಒಂದು ಕಾರಣ ಎಂದು ತಿಳಿದು ನಮ್ಮ ಸಂಸ್ಥೆಯ ಎಲ್ಲಾ ಆಡಳಿತ ಮಂಡಳಿಯವರು ಚರ್ಚಿಸಿ ನಮ್ಮ ಭಾಗದ ವಿದ್ಯಾರ್ಥಿಗಳ ಆರೋಗ್ಯ ರಕ್ಷಣೆಯ ಜವಾಬ್ದಾರಿ ತೆಗೆದುಕೊಳ್ಳಬೇಕೆಂದು ನಿರ್ಧರಿಸಿ ಈ ಯೋಜನೆ ಇಂದು ಜಾರಿಗೆ ತರುತ್ತಿದ್ದೇವೆ ಎಂದು ಹೇಳಿದರು. ಇದು ಸರ್ಕಾರಿ, ಅನುದಾನಿತ,ಅನುದಾನರಹಿತ ಶಾಲೆಗಳ ವಿದ್ಯಾರ್ಥಿಗಳು ಉಚಿತ ಆರೋಗ್ಯ ತಪಾಸಣೆ, ಚಿಕಿತ್ಸೆಯನ್ನು ಪಡೆಯಬಹುದಾಗಿದೆ ಎಂದು ಹೇಳಿದರು. ಈಗಾಗಲೇ ಶಾಲಾ ವಿದ್ಯಾರ್ಥಿಗಳಿಗಾಗಿ ಅನೇಕ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತಿದೆ. ಪ್ರತಿ ಶಿಬಿರದಲ್ಲಿ 100 ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಇದರ ಲಾಭ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು. ನಮ್ಮ ಸಂಸ್ಥೆಯು ಉಚಿತ ತಪಾಸಣೆ ಜೋತೆ ಉಚಿತ ಚಿಕಿತ್ಸೆ ಉಚಿತ ಔಷಧೋಪಚಾರ ನೀಡುತ್ತಿದೆ ಎಂದು ಹೇಳಿದರು.ಕಲಬುರಗಿ ಹಾಗೂ ಸುತ್ತಮುತ್ತಲಿನ ಸುಮಾರು 50 ಕಿಮಿ ವ್ಯಾಪ್ತಿಯಲ್ಲಿನ ವಿಧ್ಯಾರ್ಥಿಗಳು ಈ ಶಾಲಾ ಸಂಜೀವಿನಿ ಯೋಜನೆ ಲಾಭ ಪಡೆಯಲಿದ್ದಾರೆ 50 ಕಿಮಿ ವ್ಯಾಪ್ತಿಯಲ್ಲಿನ ಊರುಗಳಿಗೆ ನಮ್ಮ ಸಂಸ್ಥೆಯಿಂದ ಉಚಿತ ಬಸ್ ವ್ಯವಸ್ಥೆ ಮಾಡಲಾಗುತ್ತದೆ ಒಟ್ಟಾರೆ ಈ ಶಾಲಾ ಸಂಜೀವಿನಿ ಯೋಜನೆ ವಿದ್ಯಾರ್ಥಿಗಳ ಭವಿಷ್ಯದ ಆರೋಗ್ಯಕ್ಕೆ ಸಂಜೀವಿನಿಯಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ಪ್ರಾರಂಭವಾಗಿದೆ ಎಂದು ಹೇಳಿದರು.ನಮ್ಮ ಆಸ್ಪತ್ರೆಯ ತಜ್ಞ ವೈದ್ಯರು ಈ ಯೋಜನೆಯ ಲ್ಲಿ ಕೈಜೋಡಿಸಿ ಇದನ್ನು ಯಶಸ್ವಿಗೊಳಿಸಲಿದ್ದಾರೆ ಎಂದು ಹೇಳಿದರು.
ವೇದಿಕೆಯ ಮೇಲೆ ಸಂಸ್ಥೆಯ ಉಪಾಧ್ಯಕ್ಷರಾದ ರಾಜಾ ಭಿ ಭೀಮಳ್ಳಿ ಕಾರ್ಯದರ್ಶಿಗಳಾದ ಉದಯಕುಮಾರ್ ಚಿಂಚೋಳಿ ಜಂಟಿ ಕಾರ್ಯದರ್ಶಿಗಳಾದ ಡಾ ಕೈಲಾಸ ಪಾಟೀಲ್ ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಮಹಾವಿದ್ಯಾಲಯದ ಸಂಚಾಲಕರು ಆಡಳಿತ ಮಂಡಳಿ ಸದಸ್ಯರಾದ ಡಾ ಎಸ್ ಆರ್ ಹರವಾಳ ಬಸವೇಶ್ವರ ಆಸ್ಪತ್ರೆಯ ಸಂಚಾಲಕರು ಹಾಗೂ ಆಡಳಿತ ಮಂಡಳಿ ಸದಸ್ಯರಾದ ಡಾ ಕಿರಣ್ ದೇಶಮುಖ್ ಹಾಗೂ ಅರುಣಕುಮಾರ ಪಾಟೀಲ್,ಡಾ ಮಹಾದೇವಪ್ಪ ರಾಂಪೂರೆ, ಸಾಯಿನಾಥ ಪಾಟೀಲ್, ನಾಗಣ್ಣ ಘಂಟಿ,ಡಾ ಅನಿಲಕುಮಾರ ಪಟ್ಟಣ, ಅನಿಲಕುಮಾರ ಮರಗೋಳ ನಿಶಾಂತ್ ಎಲಿ ,ಡಾ ಶಿವಾನಂದ ಮೇಳಕುಂದಿ ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ ಶರಣಗೌಡ ಪಾಟೀಲ್ ವೈಸ್ ಡೀನ್ ಡಾ ವಿಜಯಕುಮಾರ್ ಕಪ್ಪಿಕೇರಿ, ಪ್ರಾಚಾರ್ಯ ಡಾ ವಿ ಬಿ ನಂದ್ಯಾಳ ಬಸವೇಶ್ವರ ಆಸ್ಪತ್ರೆಯ ವೈದ್ಯಾಧಿಕಾರಿ ಡಾ ಆನಂದ ಗಾರಂಪಳ್ಳಿ ಆಡಳಿತಾಧಿಕಾರಿ ಡಾ ಎಂ ಆರ್ ಪೂಜಾರಿ ಉಪಸ್ಥಿತರಿದ್ದರು.
ರೋಟರಿ ಕ್ಲಬ್ ಶಾಲೆಯ ಮಕ್ಕಳು ಹಾಜರಿದ್ದರು