ಕಾಶಪ್ಪ ಬಾಲಕಿಲೆ ಅವರ ಅಭಿನಂದನೆ ಕೃತಿ ಬರಲಿ

ಕಾಶಪ್ಪ ಬಾಲಕಿಲೆ ಅವರ ಅಭಿನಂದನೆ ಕೃತಿ ಬರಲಿ

ಕಾಶಪ್ಪ ಬಾಲಕಿಲೆ ಅವರ ಅಭಿನಂದನೆ ಕೃತಿ ಬರಲಿ

ಬಸವಕಲ್ಯಾಣ: ಕಾಶಪ್ಪ ಬಾಲಕಿಲೆ ಅವರ ಬದುಕು ಸಾಮಾಜಿಕ ಸೇವೆ ಅನನ್ಯ. ಶತಮಾನದ ಅಂಚಿನಲ್ಲಿರುವ ಅವರ ಬಗೆಗೆ ಅಭಿನಂದನಾ ಕೃತಿ ಬರಬೇಕು ಎಂದು ಕಲಬುರ್ಗಿಯ ನಿವೃತ್ತ ಪ್ರಾಚಾರ್ಯೆ ಡಾ. ನೀಲಾಂಬಿಕಾ ಪೋಲಿಸ್ ಪಾಟೀಲ ಹೇಳಿದರು.

ನಗರದ ಬಿಕೆಡಿಬಿ ಯಾತ್ರಿ ನಿವಾಸದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾಶಪ್ಪ ಬಾಲಕಿಲೆ ಅವರು ಬರೆದ 'ದಲಿತೋದ್ಧಾರಕ ಬಸವಣ್ಣನವರು' ಮತ್ತು 'ಕಲ್ಯಾಣದ ಕರ್ಮಭೂಮಿಯಲ್ಲಿ' ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಎರಡೂ ಕೃತಿಗಳು ಬಿಡುಗಡೆ ಮಾಡಿ ಮಾತನಾಡಿದ ಅವರು 

 ಕಾಶಪ್ಪನವರು ಹಠಮಾರಿ ಜಾಯಮಾನದವರು. ಬಡತನದ ಬೆಂಕಿಯಲ್ಲಿ ಅರಳಿದ ಹೂವು ಎಂದರು.

ಪುಸ್ತಕದಲ್ಲಿ ಬರೆದ ಸಂಗತಿಗಳಿಗಿಂತ ಅವರ ಸಂಘರ್ಷದ ಬದುಕು ದೊಡ್ಡದು. ವಾರದ ಬಾಬಾಸಾಹೇಬರು ಬಸವಕಲ್ಯಾಣಕ್ಕೆ ತಂದು ಕೊಟ್ಟ ಅಸ್ಮಿತೆ, ಅಧ್ಯಾಪಕ ವೃತ್ತಿ, ಕಲ್ಯಾಣದಲ್ಲಿ ಬಸವನ ಜಗತ್ತು ತಮ್ಮ ಕಾಲದಲ್ಲಿ ಕಟ್ಟಿದ ಬಗೆ ಕಲ್ಯಾಣದ ಕರ್ಮಭೂಮಿಯಲ್ಲಿ ಕೃತಿಯಲ್ಲಿ ಬರೆದಿದ್ದಾರೆ ಎಂದರು. 

ಸಮಾನತೆ, ಪ್ರಜಾಪ್ರಭುತ್ವ, ಜಾತ್ಯತೀತ ಸಮಾಜಕ್ಕಾಗಿ ಶ್ರಮಿಸಿದ ಬಸವಣ್ಣವರ ಬಗೆಗೆ ದಲಿತೋದ್ಧಾರಕ ಬಸವಣ್ಣನವರು ಕೃತಿಯಲ್ಲಿದೆ.

ಬಸವಣ್ಣನವರನ್ನು ತಾವು ಕಂಡುಕೊಂಡಂತೆ ಚರಿತ್ರೆ ಮತ್ತು ಚಾರಿತ್ರೆಯ ಕಟ್ಟಿಕೊಡಲು ಸರಳವಾಗಿ ಬರೆದಿದ್ದಾರೆ.ಕಾಶಪ್ಪನವರದು ಆಪ್ತವಾದ ಬರಹ ಎಂದರು.

ನಿವೃತ್ತ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಡಾ. ಎಲ್. ಭೈರಪ್ಪ ಅವರು

ಕೃತಿಗಳು ಬಿಡುಗಡೆ ಮಾಡಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನಿವೃತ್ತರು ಎದುರಿಸುವ ಸಮಸ್ಯೆ ಮತ್ತು ಸವಾಲುಗಳು ನೀಗಿಸುವ ಕೆಲಸ ಮಾಡಲಿ.ನಿವೃತ್ತಿಯ ನಂತರ ನಿವೃತ್ತರಿಗೆ ಕುಟುಂಬ ನಿರ್ವಹಣೆಗೆ ಬೇಕಾದ ಆರ್ಥಿಕವಾಗಿ ಸಹಾಯವಾಗುವ ನೀತಿ ಸರ್ಕಾರ ತರಲಿ ಎಂದರು.

ಹಳೆಯ ಮತ್ತು ಹೊಸ ಪಿಂಚಣಿಯಲ್ಲಿರುವ ವ್ಯತ್ಯಾಸ ದೂರ ಮಾಡಲು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ನೀಡಲಾಗಿದೆ. ಆಯಾ ಕಾಲಕ್ಕೆ ಆಯಾ ಸರ್ಕಾರಗಳು ಈ ರಾಜ್ಯದ ಶ್ರೀಸಾಮಾನ್ಯನ ಬಗ್ಗೆ, ನಾಡಿನ ಕಟ್ಟ ಕಡೆಯವರ ಬಗೆಗೆ ತೆಗೆದುಕೊಳ್ಳುವ ತೀರ್ಮಾನ ಬಹು ಮುಖ್ಯವಾಗಿರುತ್ತವೆ ಎಂದರು.

ಕಾಶಪ ಬಾಲಕಿಲೆ ಅವರು ಈ ಭಾಗದ ಕಾಯಕ ನಿಷ್ಠೆರು. ಬಸವ ಪರಂಪರೆಯ ಹಿನ್ನೆಲೆಯಲ್ಲಿ ಬಂದವರು. ಅವರು ಬದುಕಿದ ಬಗೆ, ಅವರಲ್ಲಿ ಸಮಾಹಿತವಾದ ಬಸವಾದಿ ಶರಣರ ತತ್ವಗಳು ಎರಡು ಕೃತಿ ರೂಪ ತಾಳಿ ಬಂದಿವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಡಾ. ಸೋಮನಾಥ ಯಾಳವಾರ ಮಾತನಾಡಿ, 

ತಮ್ಮ ಆತ್ಮಕತೆಯ ಸ್ವರೂಪದಲ್ಲಿರುವ ಕಲ್ಯಾಣದ ಕರ್ಮಭೂಮಿಯಲ್ಲಿ ಕೃತಿಯಲ್ಲಿ ತಮ್ಮ ಸೇವಾನುಭವದ ಜೊತೆಗೆ ನೋವಿನ ಅನುಭವವು ಅಡಗಿದೆ. ಶರಣ ಸಾಹಿತ್ಯ ಪರಿಷತ್ತು, ಬಸವ ತತ್ವದ ಲೋಕವನ್ನು ಕಲ್ಯಾಣದಲ್ಲಿ ಕಟ್ಟಿದ ಬಗೆ ದಾಖಲಿಸಿದ್ದಾರೆ.

ಜಗತ್ತಿನಲ್ಲಿ ದಲಿತರನ್ನು ಉದ್ದಾರಿಸಿದ್ದು ಬಸವಣ್ಣ. ಹಾಗಾಗಿಯೇ ದಲಿತೋದ್ಧಾರಕ ಬಸವಣ್ಣನವರು ಕೃತಿಗೆ ಕಾಶಪ್ಪನವರು ಇಟ್ಟಿದ್ದಾರೆ ಎಂದರು.

ಸಾನಿಧ್ಯ ವಹಿಸಿದ ಹರಳಯ್ಯ ಪೀಠದ ಡಾ. ಗಂಗಾಂಬಿಕಾ ಅಕ್ಕನವರು ಮಾತನಾಡಿ, ಅಪ್ಪಟ ಬಸವ ಅನುಯಾಯಾದ ಕಾಶಪ್ಪ ಬಾಲಕಿಲೆ ಅವರು ಶತಮಾನದ ಹೊಸ್ತಿಲಲ್ಲಿ ಇದ್ದಾರೆ. ಅವರನ್ನು ಕುರಿತು ಅಭಿನಂದನಾ ಕೃತಿ ಬರಬೇಕು ಎಂದರು. 

ಕಲಬುರ್ಗಿಯ ತಹಸೀಲ್ದಾರ್ ಸಾವಿತ್ರಿ ಶರಣು ಸಲಗರ, 

ಬೀದರ ವಿಶ್ವವಿದ್ಯಾಲಯದ ನಿವೃತ್ತ ಡೀನ್ ಪ್ರೊ. ಜಗನ್ನಾಥ ಹೆಬ್ಬಾಳೆ, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಶಂಭುಲಿಂಗ ಕಾಮಣ್ಣ, ಶಿವರಾಜ ಬಾಲಕಿಲೆ , ನಾಗೇಂದ್ರ ರೊಳೆ, ಸತೀಶ ಸಾವಳೆ, ಎಸ್.ಜಿ. ಹುಡೇದ, ಭೀಮಾಶಂಕರ ಬಿರಾದಾರ ಮೊದಲಾದವರಿದ್ದರು.

ಬಸವರಾಜ ಬಾಲಕಿಲೆ ಸ್ವಾಗತಿಸಿದರು. ನಿವೃತ್ತ ಪ್ರಾಂಶುಪಾಲ ಎಸ್. ಜಿ. ಕರಣೆ ಪ್ರಾಸ್ತಾವಿಕ ಮಾತನಾಡಿದರು. ಜ್ಯೋತಿ ತುಗಾವೆ ನಿರೂಪಿಸಿದರು.

ಸೌಮ್ಯಾ ಬಾಲಕಿಲೆ ವಂದಿಸಿದರು.