ದಕ್ಷಿಣ ತಾಲೂಕಿನ 2025- 26ನೇ ಸಾಲಿನ ತಾಲೂಕಾ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭ

ದಕ್ಷಿಣ ತಾಲೂಕಿನ 2025- 26ನೇ ಸಾಲಿನ ತಾಲೂಕಾ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭ

ದಕ್ಷಿಣ ತಾಲೂಕಿನ 2025- 26ನೇ ಸಾಲಿನ ತಾಲೂಕಾ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭ

ಕಲಬುರಗಿ: ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳುಮತ್ತು ಕ್ಷೇತ್ರ ಸಮನ್ವಯ ಅಧಿಕಾರಿಗಳ ಕಾರ್ಯಾಲಯ ಕಲಬುರಗಿ ದಕ್ಷಿಣ ವಲಯ ಹಾಗೂ ಪ್ರಾಥಮಿಕ ಪ್ರೌಢ ಶಾಲಾ ಶಿಕ್ಷಕರ ಸಂಘಟನೆಗಳು ಇವರ ಸಹಯೋಜನೆಯಲ್ಲಿ ಕಲಬುರ್ಗಿ ದಕ್ಷಿಣ ತಾಲೂಕಿನ 2025- 26ನೇ ಸಾಲಿನ ತಾಲೂಕಾ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭವು ನಗರದ ಸಿದ್ದಶ್ರೀ ಡಿವೈನ್ ಪ್ಯಾಲೇಸ್, ಕೋಟನೂರ್ ಡಿಯಲ್ಲಿ ಜರುಗಿತು. 

ಕಾರ್ಯಕ್ರಮವನ್ನು ದಕ್ಷಿಣ ಮತ ಕ್ಷೇತ್ರದ ಶಾಸಕರಾದ ಅಲ್ಲಂಪ್ರಭು ಪಾಟೀಲ್ ಅವರು ಉದ್ಘಾಟಿಸಿ ಮಾತನಾಡಿ ಈ ದೇಶದಲ್ಲಿ ಗುರುವಿಗೆ ಅತ್ಯಂತ ಉನ್ನತ ಸ್ಥಾನವಿದ್ದು ಶ್ರೇಷ್ಠ ವ್ಯಕ್ತಿಗಳನ್ನು ರೂಪಿಸುವರು ಗುರುಗಳೇ ಆ ನಿಟ್ಟಿನಲ್ಲಿ ಡಾಕ್ಟರ ಬಾಬಾ ಸಾಹೇಬ್ ಅಂಬೇಡ್ಕರ್ ಅವರಂಥ ಶ್ರೇಷ್ಠ ಸಂವಿಧಾನ ಶಿಲ್ಪಿಗಳನ್ನು ರೂಪಿಸುವಂತಹ ಕಾರ್ಯ ಮಾಡಿದ ಗುರುಗಳನ್ನು ನೆನಪಿಸಿಕೊಂಡರು ಗುರುಗಳ ಪಾತ್ರ ಸಮಾಜದಲ್ಲಿ ಅತ್ಯಂತ ಗೌರವದ ಸ್ಥಾನವಾಗಿದ್ದು ಆ ನಿಟ್ಟಿನಲ್ಲಿ ಕಾಯಕ ಮಾಡುತ್ತಾ ಮಕ್ಕಳ ಏಳಿಗೆಯನ್ನು ಬಯಸುವ ಎಲ್ಲ ಶಿಕ್ಷಕರಿಗೆ ಶುಭ ಕೋರಿದರು ನಿವೃತ್ತ ಶಿಕ್ಷಕರಿಗೆ ಶುಭಾಶಯಗಳನ್ನು ತಿಳಿಸಿದರು ನಿವೃತ್ತಿಯ ನಂತರ ತಮ್ಮ ಕಾರ್ಯ ಶಿಕ್ಷಣಕ್ಕೆ ಇರಲಿ ಎಂದು ಹೇಳಿದರು.

ದಕ್ಷಿಣ ತಾಲೂಕಿನಿಂದ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರನ್ನು , ಹಾಗೂ ನಿವೃತ್ತ ಎಲ್ಲ ಶಿಕ್ಷಕರನ್ನು ಗೌರವಿಸುವ ಉತ್ತಮ ಕಾರ್ಯ ಮಾಡುತ್ತಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ವಿಜಯಕುಮಾರ ಜಮಖಂಡಿ ಹಾಗೂ ಸಮನ್ವಯ ಅಧಿಕಾರಿಗಳಾದ ಶ್ರೀ ಪ್ರಕಾಶ್ ರಾಥೋಡ್ ಮತ್ತು ಇಲಾಖೆ ಎಲ್ಲಾ ಅಧಿಕಾರಿ ಸಿಬ್ಬಂದಿಗಳಿಗೆ ಧನ್ಯವಾದಗಳು ತಿಳಿಸಿದರು. 

ನಿವೃತ್ತ ಶಿಕ್ಷಕರಿಗೆ ಮತ್ತು ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತರಿಗೆ ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಎಂಡಿ ಸೈಯದ್ ಪಟೇಲ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಮಲ್ಲಯ್ಯ ಗುತ್ತೇದಾರ, ಕರ್ನಾಟಕ ಸರಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಬಸವರಾಜ ಬಳೂಂಡಗಿ, ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಜಿಲ್ಲಾ ಅಧ್ಯಕ್ಷ ಮರೆಪ್ಪ ಬಸವಪಟ್ಟಣ, ಪ್ರೌಢ ಶಾಲಾ ಸಹ ಶಿಕ್ಷಕ ಸಂಘದ ಜಿಲ್ಲಾಧ್ಯಕ್ಷ ಮಹೇಶ ಹೂಗಾರ, ಕಲಬುರ್ಗಿ ದಕ್ಷಿಣ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಈಶ್ವರಗೌಡ ಪಾಟೀಲ, ಪ್ರೌಢ ಶಾಲೆಯ ಮುರುಳಿದರ, ಪದವೀಧರ, ಜಿಲ್ಲಾಧ್ಯಕ್ಷ ಸೈಯದ್ ಎಸ್ ಜಿ, ತಾಲೂಕ ಅಧ್ಯಕ್ಷ ಅಂಬರೀಶ್, ಜಿಲ್ಲಾ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಭಾನುಕುಮಾರ ಗಿರೆಗೋಳ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕರಾದ ಮಹೇಶ ಬಸರಕೋಡ, ಸಂಗಣ್ಣ ಜಾಬಾ, ಸಂತೋಷ್ ಗಂಗು , ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ನವನಾಥ ಶಿಂಧೆ ಅವರು ಹಾಗೂ ವಿವಿಧ ಶಿಕ್ಷಕ ಸಂಘಟನೆಗಳ ಪ್ರತಿನಿಧಿಗಳು ಹಾಜರಿದ್ದರು. ಇಲಾಖೆಯ ಶೈಕ್ಷಣಿಕ ಅಭಿವೃದ್ಧಿ ಮತ್ತು ಗುಣಮಟ್ಟ ಶಿಕ್ಷಣ ನೀಡುವ ಕುರಿತು ಪ್ರಾಸ್ತಾವಿಕವಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ವಿಜಯಕುಮಾರ ಜಮಖಂಡಿ ರವರು ಮಾತನಾಡಿದರು. ಶರಣು ಸಾಳೇರ ಇಸಿಓ ಸ್ವಾಗತಿಸಿದರು. ಬಿಆರ್ಪಿ ದಯಾನಂದ ಹಿರೇಮಠ ನಿರೂಪಿಸಿದರು. ಎಲ್ಲಾ ಇಸಿಓ, ಬಿಆರಪಿ, ಸಿಆರ್‌ಪಿ ಕಾರ್ಯಾಲಯದ ಸಿಬ್ಬಂದಿ ವರ್ಗದವರು, ತಾಲೂಕಿನ ಎಲ್ಲಾ ಶಿಕ್ಷಕ/ ಶಿಕ್ಷಕಿಯರು ಭಾಗವಹಿಸಿದ್ದರು

.