ಅಪೌಷ್ಟಿಕತೆ ಮತ್ತು ರಕ್ತಹೀನತೆ ಶಾಲೆಯಲ್ಲಿ ಜಾಗೃತಿ ಕಾರ್ಯಕ್ರಮವನ್ನು ಲರ್ನಿಂಗ್ ಲೀಂಕ್ ಫೌಂಡೇಶನ್ ವತಿಯಿಂದ ಹಮ್ಮಿಕೊಳ್ಳಲಾಯಿತು.

ಅಪೌಷ್ಟಿಕತೆ ಮತ್ತು ರಕ್ತಹೀನತೆ ಶಾಲೆಯಲ್ಲಿ ಜಾಗೃತಿ ಕಾರ್ಯಕ್ರಮವನ್ನು ಲರ್ನಿಂಗ್ ಲೀಂಕ್ ಫೌಂಡೇಶನ್ ವತಿಯಿಂದ ಹಮ್ಮಿಕೊಳ್ಳಲಾಯಿತು.
ನಾಲವಾರ : ಸಮೀಪದ ತರಕಸಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆ ಮತ್ತು ಲರ್ನಿಂಗ್ಸ್ ಫೌಂಡೇಶನ್ ಸಂಸ್ಥೆಯ ಸಹಯೋಗದೊಂದಿಗೆ ಅಪೌಷ್ಟಿಕತೆ ಮತ್ತು ರಕ್ತಹೀನತೆ ಶಾಲೆಯಲ್ಲಿ ಜಾಗೃತಿ ಕಾರ್ಯಕ್ರಮ ವನ್ನು ಮಾಡಲಾಯಿತು. ಕೊಲ್ಲೂರು ನಲ್ಲಿ ಬರುವಂತಹ ಪ್ರಾಥಮಿಕ ಆರೋಗ್ಯ ಕೇಂದ್ರ ಸಿಬ್ಬಂದಿ ವರ್ಗದವರು ಕೂಡ ಆಗಮಿಸಿ ಈ ಒಂದು ಜಾಗೃತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಶಾಲೆಯ ಪ್ರಾಥಮಿಕ ಶಾಲೆ ಮುಖ್ಯ ಗುರುಗಳಾದಂತಹ ಶ್ರೀ ಸೋಮಶೇಖರ್ ಅವರು ಸದೃಢ ದೇಹಕ್ಕೆ ಸದೃಢವಾದ ಆಹಾರ ಸೇವನೆ ಮಾಡಬೇಕು ಎಂದು ಮಕ್ಕಳಿಗೆ ತಿಳಿಸಿದರು. ಹೀಗೆ ರಕ್ತ ಹೀನತೆ ನಿರ್ಮೂಲನೆಗಾಗಿ ಸೇವಿಸಬೇಕಾದ ಆಹಾರಗಳ ಬಗ್ಗೆ ರಕ್ತ ಹೀನತೆ ಕಂಡು ಹಿಡಿಯುವ ವಿಧಾನವನ್ನು ತಿಳಿಸಿ ಮನುಷ್ಯನ ಆರೋಗ್ಯಕರ ಜೀವನ ಶೈಲಿಯ ಬಗ್ಗೆ ತಿಳಿಸಿ ದೇಹಕ್ಕೆ ಬೇಕಾಗಿರುವ ವಿಟಮಿನ್ ಗಳ ಸರ್ಕಾರದ ಯೋಜನೆ ಅಡಿಯಲ್ಲಿ ಈಗಾಗಲೇ ಶಾಲೆಯಲ್ಲಿ ನಡೆದಿರುವಂತಹ ಪೂರಕ ಪೌಷ್ಟಿಕ ಆಹಾರ ಮಾಹಿತಿ ಬಗ್ಗೆ ತಿಳಿಸಲಾಯಿತು. ಹಿರಿಯ ಸಂಪನ್ಮೂಲ ಶಿಕ್ಷಕರು ಆದಂತಹ ಶ್ರೀ ಚಂದ್ರು ಮುಂದಿನಮನಿ ಸರ್ ಅವರು ಜಂಕ್ ಫುಡ್ ಸೇವನೆ ಮಾಡುವುದರಿಂದ ಮಕ್ಕಳಲ್ಲಿ ಆಗುವ ತೊಂದರೆಗಳ ಬಗ್ಗೆ ತಿಳಿಸಿದರು. ಪ್ರೌಢಶಾಲೆ ಮುಖ್ಯ ಶಿಕ್ಷಕರಾದಂತ ರಾಜ್ ಕುಮಾರ್ ಸರ್ ಅವರು ದವಸ ಧಾನ್ಯಗಳು ಕಾಳ ದಿನಸುಗಳು ಆಹಾರ ಸೇವನೆ ಮಾಡುವುದರಿಂದ ದೇಹಕ್ಕೆ ಯಾವುದೇ ವಿಟಮಿನ್ ಗಳ ಕೊರತೆ ಉಂಟಾಗುವುದಿಲ್ಲ ಎಂದು ಹೇಳಿದರು. ಈ ಒಂದು ಕಾರ್ಯಕ್ರಮದಲ್ಲಿ ಶಾಲೆಯ sdmc ಅಧ್ಯಕ್ಷರು ರಶೀದ್ ಪಟೇಲ್, ಶಾಲೆಯ ಸಹ ಶಿಕ್ಷಕರು ಮಂಜುನಾಥ್ ಪಾಟೀಲ್, ಸಯ್ಯದ್ ಹುಸೇನ್ ಹಾಗೂ ಅತಿಥಿ ಶಿಕ್ಷಕರು ಮಲ್ಲನಗೌಡ ಪೊಲೀಸ್ ಪಾಟೀಲ್, ರಾಜೇಂದ್ರ ಗುತ್ತೇದಾರ್, ರಮೇಶ್ ಜೋಶಿ, ಸುನಿತಾ ರಾಂಪೂರಹಳ್ಳಿ, ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಮಂಜುಳಾ, ಕೊಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರ ಸಿಬ್ಬಂದಿ ಸಾಬಣ್ಣ ಗುಂಟುನೂರ ಹಾಗೂ ಆಶಾಲತಾ ಮೇಡಂ ಊರಿನ ಶಿಕ್ಷಣ ಪ್ರೇಮಿಗಳು ಶಾಂತಯ್ಯ ಗುತ್ತೇದಾರ್, ಮಲ್ಲಿಕಾರ್ಜುನ್ ಶಳ್ಳಗಿ. ಈ ಒಂದು ಕಾರ್ಯಕ್ರಮವನ್ನು ಸಮುದಾಯದ ಶಿಕ್ಷಕರಾದಂತಹ PASD ಶ್ರೀ ಶಿವಾನಂದ ರವರು ನೆರೆವೇರಿಸಿ ಕೊಟ್ಟರು. ಅಂತಿಮ ಘಟ್ಟ ಸಂಪನ್ಮೂಲ ಶಿಕ್ಷಕ ಶಶಿಕುಮಾರ್ ಸರ್ ಅವರು ನೆರವೇರಿಸಿ ಕೊಟ್ಟರು ಮತ್ತು ಗ್ರಾಮದ ಹಿರಿಯರು, ಯುವಕರು ಹಾಗೂ ವಿದ್ಯಾರ್ಥಿಗಳು ಇದ್ದರು.
ವರದಿ : ರಾಜೇಂದ್ರ. ಏನ್. ಕೊಲ್ಲೂರು