ಸಾಂಸ್ಕೃತಿಕ ಒಗ್ಗಟ್ಟಿನ ಬದುಕು ನಮ್ಮದಾಗುವುದು: ಸಿಪಿಐ ಶ್ರೀಕಾಂತ ಅಲ್ಲಾಪುರೆ

ಸಾಂಸ್ಕೃತಿಕ ಒಗ್ಗಟ್ಟಿನ ಬದುಕು ನಮ್ಮದಾಗುವುದು: ಸಿಪಿಐ ಶ್ರೀಕಾಂತ ಅಲ್ಲಾಪುರೆ

ಶಾಸ್ತ್ರೀ ಶಿಕ್ಷಣ ಸಂಸ್ಥೆಯಿಂದ 16ನೇ ಗಣೇಶ ವಾರ್ಷಿಕೋತ್ಸವ,ಬಹುಮಾನ ವಿತರಣೆ

ಸಾಂಸ್ಕೃತಿಕ ಒಗ್ಗಟ್ಟಿನ ಬದುಕು ನಮ್ಮದಾಗುವುದು: ಸಿಪಿಐ ಶ್ರೀಕಾಂತ ಅಲ್ಲಾಪುರೆ

ಕಮಲನಗರ: ವಾರ್ಷಿಕವಾಗಿ ಬರುವ ಗಣೇಶ ಚತುರ್ಥಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಬೇಕು. ಇದರಿಂದ ಮನಸ್ಸಿಗೆ ನೆಮ್ಮದಿ ಮತ್ತು ಸಾಂಸ್ಕøತಿಕ ಒಗ್ಗಟ್ಟಿನ ಬದುಕು ನಮ್ಮದಾಗುವುದು ಎಂದು ಕಮಲನಗರದ ಸಿಪಿಐ ಶ್ರೀಕಾಂತ ಅಲ್ಲಾಪುರೆ ಹೇಳಿದರು.

ಪಟ್ಟಣದ ಶಾಸ್ತ್ರೀ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ನಡೆಯುತ್ತಿರುವ ಭಾಗಿರಥಿ ಪಬ್ಲಿಕ್ ಶಾಲೆಯಲ್ಲಿ ಈಚೆಗೆ ಏರ್ಪಡಿಸಿದ್ದ 16ನೇ ಗಣೇಶ ವಾರ್ಷಿಕೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಸಂಸ್ಥೆಯಿಂದ ಶಿಕ್ಷಣದ ಜೊತೆ ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚಿನ ಆದ್ಯತೆ ನೀಡಿ ಪೂರಕ ವ್ಯವಸ್ಥೆ ಏರ್ಪಡಿಸಿರುವುದು ಹೆಮ್ಮೆಯ ವಿಷಯ ಎಂದರು.

ಮುಖ್ಯಶಿಕ್ಷಕ ಮನೋಜಕುಮಾರ ಹಿರೇಮಠ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಡಾ. ಅಜಿತ ಕುಮಾರ ಶಾಸ್ತ್ರೀ ಮಾರ್ಗದರ್ಶನದಲ್ಲಿ ಶೈಕ್ಷಣಿಕ ಪ್ರಗತಿಗೆ ಪೂರಕವಾದ ವ್ಯವಸ್ಥೆಗಳನ್ನು ನಿರ್ಮಿಸಿದ್ದು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದು ಪಾಲಕರ ಮೆಚ್ಚುಗುಗೆಗೆ ಪಾತ್ರವಾಗಿದೆ ಎಂದು ಬಣ್ಣಿಸಿದರು.

ಎಚ್‍ಸಿ ರಾಜಕುಮಾರ ಸೋನಾರೆ, ಪಿಸಿ ಮಹಾದೇವ ಬಿರಾದಾರ, ಶಿಕ್ಷಕ ಸಿಬ್ಬಂದಿ ಶ್ರೀದೇವಿ ಸೋನಕಾಂಬಳೆ, ದೀಪಮಾಲಾ ಸೂರ್ಯವಂಶಿ, ಸಂಗೀತಾ ಕಾಂಬಳೆ, ರಾಜಶ್ರೀ ಸಿರಗಿರೆ, ಶೀತಲ ನಂದುಕುಮಾರ, ಅಂಜಲಿ ಕಾಂಬಳೆ, ಅಂಬಿಕಾ ಗಾಯಕವಾಡ್, ಮಲ್ಲಿಕಾರ್ಜುನ ಮೇತ್ರೆ ಮತ್ತು ಶಾಲೆಯ ಸಿಬ್ಬಂದಿ ಹಾಗೂ ಮಕ್ಕಳು ಮಯೂರ, ರೋಶನಿ, ಪ್ರಗತಿ, ಸೋನಿ, ಪ್ರೀನ್ಸ್, ಅಭಿಜಿತ, ಅಥರ್ವ, ರುದ್ರ, ದೀಪಿಕಾ ಮೊದಲಾದವರಿದ್ದರು.