ಯಡ್ರಾಮಿಯಲ್ಲಿ ಹಳೆಯ ಪ್ರವಾಸಿ ಮಂದಿರ ಬಿಟ್ಟು ಹೊಸ ಕಟ್ಟಡ ನಿರ್ಮಾಣಕ್ಕೆ ಆಗ್ರಹ

ಯಡ್ರಾಮಿಯಲ್ಲಿ ಹಳೆಯ ಪ್ರವಾಸಿ ಮಂದಿರ ಬಿಟ್ಟು ಹೊಸ ಕಟ್ಟಡ ನಿರ್ಮಾಣಕ್ಕೆ ಆಗ್ರಹ

ಯಡ್ರಾಮಿಯಲ್ಲಿ ಹಳೆಯ ಪ್ರವಾಸಿ ಮಂದಿರ ಬಿಟ್ಟು ಹೊಸ ಕಟ್ಟಡ ನಿರ್ಮಾಣಕ್ಕೆ ಆಗ್ರಹ

ಯಡ್ರಾಮಿ: ತಾಲೂಕಿನ ಹಳೆಯ ಪ್ರವಾಸಿ ಮಂದಿರ ಸಂಪೂರ್ಣ ಜೀರ್ಣಾವಸ್ಥೆಗೆ ತಲುಪಿದ್ದು, ಬಿರುಕು ಬಿಟ್ಟು ಕುಸಿದು ಬೀಳುವ ಹಂತದಲ್ಲಿದೆ. ಇಂತಹ ಕಟ್ಟಡಕ್ಕೆ ಪುನರ್ ರಿಪೇರಿ ಕೈಗೊಳ್ಳುವುದು ನಾಚಿಕೆಗೇಡಿತನದ ಸಂಗತಿಯಾಗುತ್ತದೆ ಎಂದು ಕರ್ನಾಟಕ ಸೇನಾ ಯಡ್ರಾಮಿ ತಾಲೂಕ ಅಧ್ಯಕ್ಷ ಮಹೇಶ್ ಪಾಟೀಲ್ ಕಡಕೋಳ ಸರ್ಕಾರವನ್ನು ಎಚ್ಚರಿಸಿದರು.

ಈ ಹಿನ್ನೆಲೆಯಲ್ಲಿ ಅವರು ತಾಲೂಕ ದಂಡಾಧಿಕಾರಿಗಳ ಮುಖಾಂತರ ಮನವಿ ಪತ್ರ ಸಲ್ಲಿಸಿ, ಹಳೆಯ ಪ್ರವಾಸಿ ಮಂದಿರದ ದುರಸ್ತಿಯನ್ನು ಕೈಬಿಟ್ಟು ಹೊಸ ಪ್ರವಾಸಿ ಮಂದಿರ ನಿರ್ಮಾಣಕ್ಕೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

"ಒಂದು ವೇಳೆ ಹಳೆಯ ಪ್ರವಾಸಿ ಮಂದಿರದ ದುರಸ್ತಿ ಮುಂದುವರಿಸಿದರೆ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಉಗ್ರ ಹೋರಾಟ ಆರಂಭಿಸಲು ನಾವು ಹಿಂಜರಿಯುವುದಿಲ್ಲ," ಎಂದು ಅವರು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಸುರೇಶ್ ಸುರಪುರ, ಅಮರಾನಾಥ್ ಸಾಹು, ವಿರೇಶ್ ಪಾಟೀಲ, ಈರಣ್ಣ ಸುಂಕದ, ವಿಶ್ವಾನಾಥ್ ಪಾಟೀಲ, ಲಾಳೆಸಾಬ್ ಮನಿಯರ, ಮಡಿವಾಳಪ್ಪ ಗೌಡ, ಪೊಲೀಸ್ ಬಿರಾದಾರ್, ಮಲ್ಲು ಹೊಗಾರ್, ಮಡಿವಾಳಪ್ಪ ಮೇಲಿನಮನಿ ಹಾಗೂ ದೇವು ಯಡ್ರಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವರದಿ: ಸಿದ್ದಲಿಂಗ್ ಪೂಜಾರಿ ಎಚ್. ಹಾಲಗಡ್ಲಾ