ಮಳಖೇ ಉರುಸ್: ಆಧ್ಯಾತ್ಮಿಕತೆ ಮತ್ತು ಭಕ್ತಿಯ ಸಂಜೀವಿನಿ**

ಮಳಖೇದಲ್ಲಿ ಸಂಭ್ರಮದ ವಾರ್ಷಿಕ ಉರುಸ್,
ಸೇಡಂ, ತಾಲೂಕಿನ ಬರುವ ಮಳಖೇಡದಲ್ಲಿರುವ ಹಜರತ್ ಸೈಯದ್ ಶಾಹ್ ಖಲಿಫತ್ ಉರ್ ರಹಮಾನ್ ಖಾದ್ರಿ ದರ್ಗಾ ಶರೀಫನಲ್ಲಿ ಏಪ್ರಿಲ್ 3ರಿಂದ 6ರ ವರೆಗೆ ವಾರ್ಷಿಕ ಉರುಸ್ ಶರೀಫ (ಜಾತ್ರೆ) ನಡೆಯಲಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಳಖೇಡ ದರ್ಗದ ಪೂಜ್ಯ ಶ್ರೀ ಹಜರತ್ ಅಲ್ ಹಜ್ ಸೈಯಾದ್ ಶಾಹ ಮುಸ್ತಾಫ ಖಾದರಿ ಅವರು ಹೇಳಿದರು,
ದರ್ಗದ ಮುಖ್ಯಸ್ಥರಾದ ಪೂಜ್ಯ ಶ್ರೀ ಹಜರತ್ ಅಲ್ ಹಜ್, ಸೈಯಾದ್ ಶಾಹ ಮುಸ್ತಾಫ ಖಾದರಿ ಅವರ ಸಾನಿಧ್ಯದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯುವವು,
ದಿ, 3ರಂದು ರಾತ್ರಿ 8ಕ್ಕೆ ಗುರುವಾರ ಹಲಖಾ (ಪ್ರಾರ್ಥನೆ,) ಮತ್ತು ಗುಸಲ್ (ಗದ್ದುಗೆಗೆ ಅಭಿಷೇಕ)
4ರಂದು ಸಂದಲ್ ನಡೆಯುವುದು, ಮಳಖೇಡ, ಹೂಡಾ ಬಿ. ಸಂಗಾವಿ. ಮಳಖೇಡ ಸ್ಟೇಷನ್. ಕೂನ್ನೂರ ಹಾಗೂ ದಿಗ್ಗಾಂವ್ ಗ್ರಾಮಗಳಿಂದ ಸಂದಲ್ ಭವ್ಯ ಮೆರವಣಿಗೆ ನಡೆಯುವುದು, ನಂತರ ಹಜರತ್ ಸೈಯದ್ ಶಾಹ್ ಮುಸ್ತಾಫ್ ಖಾದ್ರಿ ಅವರಿಂದ ಗಂದಲೇಪನ ಜರುಗುವುದು,
5ರಂದು ರಾತ್ರಿ 8.30ಕ್ಕೆ ಮಳಖೇಡದಿಂದ ಜುಲುಸ್ ಎ ಪಂಖಾ ಮೆರವಣಿಗೆ ನಡೆಯುವುದು, ನಂತರ ದರ್ಗಾ ಪೀಠಾಧಿಪತಿ ಹಜರತ್ ಸೈಯದ್ ಶಾಹ ಮುಸ್ತಾಫ ಖಾದ್ರಿ ಅವರ ಸಾನಿಧ್ಯದಲ್ಲಿ ಎನ್ ,ಆರ್, ಆಲ್ ಇಂಡಿಯಾ ಮಾನವ ಧರ್ಮ ಸೇವಾ ಸಮಿತಿ ಆಶಾ ಮಾನವ ಧರ್ಮ ಚಿಂತನ ಸಭೆ ನಡೆಯುವುದು, ನಂತರ ಖವ್ವಾಲಿ ಹಾಗೂ ಗೀಗೀ ಪದಗಳ ಗಾಯನ ನಡೆಯುವುದು, ದಿ 6ರಂದು ಬೆಳಗ್ಗೆ 7ಕ್ಕೆ ಫತೇಹಾ ಖಾನಿ ಪುಷ್ಪಾರ್ಚನೆ ನಡೆಯುವುದು, ಹಜರತ್ ಸಜ್ಜಾದಾ ನಶೀನ್ ಅವರ ಹಸ್ತದಿಂದ ಪ್ರಸಾರ ವಿತರಣೆ ನಡೆಯುವುದು, ನಂತರ ಮಳಖೇಡ ಹಾಗೂ ಹೂಡಾ (ಬಿ) ಭಕ್ತರಿಂದ ಬೆಳ್ಳಿ ಗಡ್ಗಗಳ ಕುಸ್ತಿ ನಡೆಯುವುದು ಎಂದರು,