ಕರದಾಳ್ ಪ್ರೌಢ ಶಾಲೆಯಲ್ಲಿ ಜನಪದ ಕಲರವ

ಕರದಾಳ್ ಪ್ರೌಢ ಶಾಲೆಯಲ್ಲಿ ಜನಪದ ಕಲರವ

ಕರದಾಳ್ ಪ್ರೌಢ ಶಾಲೆಯಲ್ಲಿ ಜನಪದ ಕಲರವ 

 ಚಿತ್ತಾಪುರ ತಾಲೂಕಿನ ಕರದಾಳ್ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕರ್ನಾಟಕ ಜಾನಪದ ಪರಿಷತ್ತು ತಾಲೂಕ ಘಟಕ ವತಿಯಿಂದ ಹಮ್ಮಿಕೊಂಡ ಶಾಲೆಗೊಂದು ಜಾನಪದ ಕಲರವ ಕಾರ್ಯಕ್ರಮವನ್ನು ಗುರುವಾರ ಜರಗಿತು.

 ಕಾರ್ಯಕ್ರಮವನ್ನು ಗ್ರಾಮದ ಮುಖಂಡರಾದ ಶಿವಲಿಂಗಯ್ಯ ಸ್ವಾಮಿ ಮಠಪತಿ ಯವರು ಡ್ರಮ್ ಬಾರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಜನಪದ ಕಲಾವಿದರಾದ ಭೀಮರಾಯ. ಮಲ್ಲಪ್ಪ ನಂಜೋಳಿ. ಸಂಗೀತ ಕಲಾವಿದೆ ಶ್ರೀದೇವಿ ಹಿರೇಗೌಡ. ಅವರಿಗೆ ಸನ್ಮಾನಿಸಲಾಯಿತು. ಭೀಮರಾಯ ಅವರು ಮೊಹರಂ ಪದ. ಮಲ್ಲಪ್ಪ ನಂಜೋಳಿ ಅವರು ಭಜನೆ ಪದ. ಶ್ರೀದೇವಿ ಹಿರೇಗೌಡ ಅವರು ಜನಪದ ಗೀತೆ ಹಾಡಿ ಜಾನಪದ ಕಲೆಯನ್ನು ಪ್ರದರ್ಶನ ನೀಡಿ ವಿದ್ಯಾರ್ಥಿಗಳನ್ನು ಮಂತ್ರಮುಗ್ಧನಾಗಿಸಿದ ರು.

 ಕರ್ನಾಟಕ ಜಾನಪದ ಪರಿಷತ್ತಿನ ತಾಲೂಕು ಗೌರವ ಕಾರ್ಯದರ್ಶಿ ನರಸಪ್ಪ ಚಿನ್ನ ಕಟ್ಟಿ ಅವರು ಉಪನ್ಯಾಸ ನೀಡಿ ಜನಪದ ವಿವಿಧ ಪದಗಳನ್ನು ಹಾಡಿ ವಿದ್ಯಾರ್ಥಿಗಳ ಮನಸ್ಸನ್ನು ಸೆರೆ ಹಿಡಿದರು.

 ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯ ಗುರುಗಳಾದ ಪಂಡಿತ್ ನೆಲೋಗಿ ವಹಿಸಿ ಮಾತನಾಡಿ ಕೃಷಿ ಮೂಲದಿಂದ ಬಂದ ಜನಪದ ಸಾಹಿತ್ಯವನ್ನು ವಿದ್ಯಾರ್ಥಿಗಳು ಓದಬೇಕು ನಶಿಸಿ ಹೋಗುತ್ತಿರುವ ಜನಪದ ಕಲೆಗಳನ್ನು ಉಳಿಸಿ ಬೆಳೆಸುವುದು ಎಲ್ಲಾ ವಿದ್ಯಾರ್ಥಿಗಳ ಕರ್ತವ್ಯವಾಗಿದೆ ಎಂದರು.

 ಕರ್ನಾಟಕ ಜಾನಪದ ಪರಿಷತ್ತಿನ ಇಂಗಳಗಿ ವಲಯ ಅಧ್ಯಕ್ಷ ಶಂಭುಲಿಂಗ ವಿಶ್ವಕರ್ಮ. ಶಿಕ್ಷಕರಾದ ನರಸಪ್ಪ ಜಾಣ. ಮೈನುದ್ದೀನ್. ಲೋಕೇಶ್. ಇದ್ದರು 

  ಕರ್ನಾಟಕ ಜಾನಪದ ಪರಿಷತ್ತು ತಾಲೂಕ ಅಧ್ಯಕ್ಷ ನಾಗಯ್ಯ ಸ್ವಾಮಿ ಅಲ್ಲೂರು ಅವರು ಪ್ರಸ್ತಾವಿಕವಾಗಿ ಮಾತನಾಡಿದರು.

 ಶಿಕ್ಷಕ ಜಬ್ಬರ್ ಮಿಯಾ ಜಮಾದಾರ್ ಸ್ವಾಗತಿಸಿದರು. ಶರಣಪ್ಪ ಕಟ್ಟಿ ನಿರೂಪಿಸಿದರು. ಆರತಿ ಹಿರೇಮಠ್ ವಂದಿಸಿದರು.