ಕಲಬುರಗಿಯ ದಿಶಾ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ ಇಂದು ೭೭ನೇ ಗಣರಾಜ್ಯೋತ್ಸವ ದಿನಾಚರಣೆ ಆಚರಿಸಲಾಯಿತು.

ಕಲಬುರಗಿಯ ದಿಶಾ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ ಇಂದು ೭೭ನೇ ಗಣರಾಜ್ಯೋತ್ಸವ ದಿನಾಚರಣೆ ಆಚರಿಸಲಾಯಿತು.

ಕಲಬುರಗಿಯ ದಿಶಾ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ ಇಂದು ೭೭ನೇ ಗಣರಾಜ್ಯೋತ್ಸವ ದಿನಾಚರಣೆ ಆಚರಿಸಲಾಯಿತು. ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ. ಶಿವಾನಂದ ಖಜುರಗಿ೯ ಅವರು ಮಾತನಾಡಿ ಸಂವಿಧಾನದ ಆಶಯ ಮತ್ತು ಅದರ ಮಹತ್ವವನ್ನು ಅರಿತುಕೊಳ್ಳಬೇಕು ಎಂದು ಹೇಳಿದರು. ನಮ್ಮ ಭಾರತದಂತಹ ದೊಡ್ಡ ದೇಶದಲ್ಲಿ ಹಲವಾರು ಜಾತಿ,ಧರ್ಮ, ಸಂಪ್ರದಾಯ, ಸಂಸ್ಕೃತಿ ಮತ್ತು ಭಾಷೆಗಳು ಇದ್ದಾಗಲೂ ಛಿದ್ರಗೊಳ್ಳದೆ, ಒಂದಾಗಿ ಬದುಕು ನಡೆಸುತ್ತಿರುವುದಕ್ಕೆ ಭಾರತ ಸಂವಿಧಾನದವೇ ಕಾರಣ ಎಂಬುದನ್ನು ಯಾರು ಮರೆಯುವಂತಿಲ್ಲ. ಇವತ್ತು ನಾವೆಲ್ಲರೂ ಅಂಬೇಡ್ಕರ್ ಅವರನ್ನು ನೆನಪಿಸಿಕೊಳ್ಳಬೇಕು ಅವರು ನೀಡಿದ ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬ ಆಶಯವನ್ನು ಸಂವಿಧಾನದ ಮೂಲಕ ಸಾಧ್ಯವಾಗಿಸಿದರು. ನಾವೆಲ್ಲರೂ ಸಂವಿಧಾನವನ್ನು ಓದಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ನಮ್ಮ ದೇಶದ ದೊಡ್ಡ ಹಬ್ಬಗಳು ಅಂದರೆ ಅಗಸ್ಟ್ ೧೫ರ ಸ್ವಾತಂತ್ರ್ಯ ದಿನಾಚರಣೆ ಮತ್ತು ಜನವರಿ ೨೬ರ ಗಣರಾಜ್ಯೋತ್ಸವದ ಈ ದಿನ ಈ ಎರಡು ದಿನಾಚರಣೆಗಳು ಬಹು ಮಹತ್ವದ ದಿನಗಳಾಗಿವೆ. ವಿದ್ಯಾರ್ಥಿಗಳು ದೇಶ ಮತ್ತು ಸಂವಿಧಾನದ ಕುರಿತ ಅಭಿಮಾನವನ್ನು ಹೊಂದಿರಬೇಕು. ಅಂಬೇಡ್ಕರ್ ಅವರನ್ನು ಕುರಿತು ಹೆಚ್ಚು ಓದಿನ ಅವಶ್ಯಕತೆ ಇದೆ ಎಂದು ಹೇಳುತ್ತಲೇ ಅಂಬೇಡ್ಕರ್ ಅವರ ಒಂದು ಮಾತು ಉಲ್ಲೇಖಿಸಿದರು, "ನಿಮ್ಮಲ್ಲಿ ಎರಡು ರೂಪಾಯಿ ಇದ್ದರೆ ಒಂದು ರೂಪಾಯಿ ಆಹಾರಕ್ಕೆ ಖರ್ಚು ಮಾಡಿ, ಇನ್ನೊಂದು ರೂಪಾಯಿ ಪುಸ್ತಕವನ್ನು ಖರೀದಿಸಿ" ಎಂಬ ಮಾತನ್ನು ನೆನಪಿಸಿದರು. ವೇದಿಕೆ ಮೇಲೆ ಪ್ರಾಚಾರ್ಯರಾದ ಸಂತೋಷ ಜಕಾಪುರೆ, ಹಿರಿಯ ಉಪನ್ಯಾಸಕರ ರವೀಂದ್ರ ಬಳಗಾರ, ಶರಣು ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ನಮ್ಮ ಕಾಲೇಜಿನ ಎಲ್ಲಾ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯವರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.