ಜಯದೇವ ಆಸ್ಪತ್ರೆಯ ನೂತನ ಆಡಳಿತಾಧಿಕಾರಿಯಾಗಿ ಡಾ. ಗುಗವಾಡ (ಮುತ್ಯ) ನೇಮಕ – ಆತ್ಮೀಯ ಸನ್ಮಾನ

ಜಯದೇವ ಆಸ್ಪತ್ರೆಯ ನೂತನ ಆಡಳಿತಾಧಿಕಾರಿಯಾಗಿ ಡಾ. ಗುಗವಾಡ ನೇಮಕ – ಆತ್ಮೀಯ ಸನ್ಮಾನ
ಕಲಬುರಗಿ: ಪ್ರತಿಷ್ಠಿತ ಜಯದೇವ ಆಸ್ಪತ್ರೆಯ ನೂತನವಾಗಿ ಮುಖ್ಯ ಅಡಳಿತಾಧಿಕಾರಿಯಾಗಿ ನೇಮಕಗೊಂಡಿರುವ ಡಾ. ಗುಗವಾಡ (ಮುತ್ಯ) ಅವರಿಗೆ ಇಂದು ಆತ್ಮೀಯವಾಗಿ ಸನ್ಮಾನ ಕಾರ್ಯಕ್ರಮ ಜರುಗಿತು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಶ್ರೀ ಸಂಗಮೇಶ ನಾಗನಳ್ಳಿ, ಮಲ್ಲಿನಾಥ್ ನಾಗನಹಳ್ಳಿ, ಶರಣು ಭೂಸನೂರ, ಪವನಕುಮಾರ ಬಿ. ವಳಕೇರಿ, ಮಂಜು ರೆಡ್ಡಿ, ಶಿವರಾಜ ಡಿಗ್ಗಾವಿ, ಶಿವಕುಮಾರ ಆಳಂದಕರ್, ವಿನೋದ್ ಪಾಟೀಲ್ ಸರಡಗಿ, ಭಾವುರಾಯ ಪಾಣೆಗಾಂವ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಜೊತೆಗೆ ನಾಗನಹಳ್ಳಿ ಗೆಳೆಯರ ಬಳಗದ ಸದಸ್ಯರು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿ, ನೂತನ ಆಡಳಿತಾಧಿಕಾರಿಗೆ ಹಾರೈಕೆಗಳನ್ನು ತಿಳಿಸಿದರು.
ಸನ್ಮಾನ ಸ್ವೀಕರಿಸಿದ ಡಾ. ಗುಗವಾಡ ಅವರು ವಿಶ್ವಾಸಾರ್ಹತೆ, ಸೇವಾ ಮನೋಭಾವ ಹಾಗೂ ಸಾರ್ವಜನಿಕರ ಆರೋಗ್ಯ ಹಿತವನ್ನು ಮೊದಲ ಆದ್ಯತೆಯಾಗಿ ಇಟ್ಟು ಕೆಲಸ ಮಾಡುವುದಾಗಿ ಭರವಸೆ ನೀಡಿದರು.