ಮಕ್ಕಳೆಂದರೆ ಮುಗ್ಧ ಮನಸ್ಸಿನ ಪುಟ್ಟ ದೇವತೆಗಳು - ಪ್ರಾಚಾರ್ಯ ಡಾ. ಮೋಹನರಾಜ ಪತ್ತಾರ
ಮಕ್ಕಳೆಂದರೆ ಮುಗ್ಧ ಮನಸ್ಸಿನ ಪುಟ್ಟ ದೇವತೆಗಳು - ಪ್ರಾಚಾರ್ಯ ಡಾ. ಮೋಹನರಾಜ ಪತ್ತಾರ
ಕಲಬುರಗಿ ೧೬-ವಿ.ಜಿ.ಮ.ಕಾಲೇಜಿನ ಪ್ರಾಚಾರ್ಯರಾದ ಡಾ. ಮೋಹನರಾಜ ಪತ್ತಾರ ಅವರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಾ
ಮಕ್ಕಳು ಎಂದರೆ ಮುಗ್ಧ ಮನಸ್ಸಿನ ಪುಟ್ಟ ದೇವತೆಗಳು ಎಂದೇ ಕರೆಯಲಾಗುತ್ತದೆ. ಮಕ್ಕಳು ದೇವರಿಗೆ ಸಮಾನ. ಮಕ್ಕಳಲ್ಲಿ ಯಾವುದೇ ದ್ವೇಷ, ಅಸೂಯೆ ಭಾವನೆಯಿಲ್ಲ. ಮಕ್ಕಳಲ್ಲಿರುವ ನಿಷ್ಕಲ್ಮಶವಾದ ನಗು ಹಾಗೂ ಮುಗ್ಧತೆಯನ್ನು ದೊಡ್ಡವರಲ್ಲಿ ಕಾಣಲು ಸಾಧ್ಯವಿಲ್ಲ. ಮುದ್ದು ಮಕ್ಕಳ ಮಾತು, ಆಟ ತುಂಟಾಟವನ್ನು ನೋಡುವುದೇ ಚಂದ. ಮಕ್ಕಳೆಂದರೆ ತುಂಟಾಟ, ಮುಗ್ದ ಮಾತುಗಳಿಂದ ಎಂತಹವರ ಕಲ್ಲು ಹೃದಯವನ್ನು ಕರಗಿಸುವ ಶಕ್ತಿವಂತರು. ಮಕ್ಕಳ ಜೊತೆಗೆ ಇದ್ದರೇ ಮನಸ್ಸಿನ ನೋವುಗಳೆಲ್ಲವೂ ದೂರವಾಗುತ್ತದೆ. ಹೀಗಾಗಿ ಮಕ್ಕಳಿಗೆ ಮನಸ್ಸಿನ ನೋವನ್ನು ಮರೆಸಿ ಎಲ್ಲರ ಮುಖದಲ್ಲಿ ನಗು ತರಿಸುವ ಶಕ್ತಿಯಿದೆ. ಮುಗ್ಧ ಹಾಗೂ ನಿಷ್ಕಲ್ಮಷ ಮಕ್ಕಳಿಗಾಗಿ ಮೀಸಲಿರುವ ದಿನವೇ ನವೆಂಬರ್ ೧೪ ಎಂದು ಮಾತನಾಡಿದರು.
ಮುಂದುವರೆದು ಮಾತನಾಡುತ್ತಾ ಈ ದಿನವನ್ನು ಅಚಲವಾದ ಬದ್ಧತೆಯ ಪ್ರಬಲ ಜ್ಞಾಪನೆಯಾಗಿ ಕೂಡ ಗುರುತಿಸಲಾಗಿದೆ ಮಕ್ಕಳ ಸಾಧನೆಗಳನ್ನು ಆಚರಿಸಲು, ಅವರ ಹಕ್ಕುಗಳಿಗಾಗಿ ಪ್ರತಿಪಾದಿಸಲು ಮತ್ತು ಅವರಿಗೆ ಉಜ್ವಲ ಭವಿಷ್ಯವನ್ನು ಸೃಷ್ಟಿಸಲು ನಮ್ಮ ಸಾಮೂಹಿಕ ಜವಾಬ್ದಾರಿಯನ್ನು ನೆನಪಿಸುವ ದಿನವಾಗಿ ಕೂಡ ಮಹತ್ತರವಾಗಿದೆ. ಮಕ್ಕಳು ನಮ್ಮ ಉಜ್ವಲ ನಾಳೆಯ ಭರವಸೆಗಳನ್ನು ಹಾಗೂ ನಮ್ಮ ಸಂತೋಷದ ಭವಿಷ್ಯದ ಕನಸುಗಳನ್ನು ಹೊತ್ತಿದ್ದಾರೆ. ನಮ್ಮ ಮಹಾವಿದ್ಯಾಲಯದ ಮಕ್ಕಳ ಮುಗ್ಧತೆ ಮತ್ತು ಪರಿಶುದ್ಧತೆಯನ್ನು ಆಚರಿಸೋಣ. ನಮ್ಮ ಜೀವನದ ಪ್ರತಿ ಘಳಿಗೆಯಲ್ಲೂ ಮಕ್ಕಳು ಅಮೂಲ್ಯ ರತ್ನಗಳು. ಮಕ್ಕಳು ಉಜ್ವಲ ಭವಿಷ್ಯ ಮತ್ತು ನಾಳೆಯ ಕನಸನ್ನು ಹೊತ್ತು ಸಾಗುತ್ತಾರೆ. ಮಕ್ಕಳ ಕನಸುಗಳು ನನಸಾಗಲು ನಾನು ಜೊತೆಗಿರುತ್ತೇನೆ ಎಂದು ಹೇಳುತ್ತಾ ವಿದ್ಯಾರ್ಥಿನಿಯರಿಗೆ ಮುಂಬರುವ ಪರೀಕ್ಷೆಗಳಲ್ಲಿ ಯಶಸನ್ನು ಪಡೆಯಲು ಪ್ರಯತ್ನ ಪಡಿ, ಪ್ರಯತ್ನ ಯಾವತ್ತು ವ್ಯರ್ಥವಾಗಲ್ಲ ನಿಮ್ಮ ಓದುವ ಕೆಲಸವನ್ನು ನೀವು ಶೃದ್ಧೆಯಿಂದ ಮಾಡಿ ಒಳ್ಳೆಯ ಫಲಿತಾಂಶ ತಾನಾಗಿಯೇ ನಿಮ್ಮನ್ನು ಹುಡುಕಿಕೊಂಡು ಬರುತ್ತೆ ಎಂದು ವಿದ್ಯಾರ್ಥಿಗಳಿಗೆ ಹುರಿದುಂಬಿಸಿ ಸಂಸ್ಥೆಯ ಪರವಾಗಿ ಮತ್ತು ಮಹಾವಿದ್ಯಾಲಯದ ಎಲ್ಲಾ ಬೋಧಕ-ಬೋಧಕೇತರ ಸಿಬ್ಬಂದಿಗಳ ಪರವಾಗಿ ಮಕ್ಕಳ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದರು.
ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ದಿನಾಂಕ : ೧೪.೧೧.೨೦೨೪ ರಂದು ಮಧ್ಯಾಹ್ನ ೧.೩೦ ಗಂಟೆಗೆ ಮಕ್ಕಳ ದಿನಾಚರಣೆಯ ಪ್ರಯುಕ್ತ್ತ ಮಹಾವಿದ್ಯಾಲಯದಲ್ಲಿ ಬೋಧಕ-ಬೋಧಕೇತರ ಸಿಬ್ಬಂದಿಗಳಿಂದ ವಿದ್ಯಾರ್ಥಿನಿಯರಿಗೋಸ್ಕರ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ಕಾಲೇಜಿನ/ಮಹಾವಿದ್ಯಾಲಯದ ವಿದ್ಯಾರ್ಥಿನಿಯರಿಂದ ಕೇಕ್ ಕತ್ತರಿಸುವ ಮುಖಾಂತರ ಪ್ರಾರಂಭಿಸಿದರು.
ಮಹಾವಿದ್ಯಾಲಯದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಸಿಹಿತಿಂಡಿ ನೀಡುವುದರೊಂದಿಗೆ ಸ್ಪರ್ಧೆಗಳಲ್ಲಿ ಗೆಲುವನ್ನು ಸಾಧಿಸಿದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ವಿದ್ಯಾರ್ಥಿ ಸಂಘದ ಸಲಹೆಗಾರರಾದ ಶ್ರೀಮತಿ ಶೈಲಜಾ ನಾಕೇದಾರ, ಸಿಬ್ಬಂದಿ ಕಾರ್ಯದರ್ಶಿಗಳಾದ ಶ್ರೀಮತಿ ರಷ್ಮೀ ಸ್ವಾಮಿ ಉಪನ್ಯಾಸಕರಾದ ಡಾ. ನಯನತಾರ ಆಸ್ಪಲ್ಲಿ, ಡಾ. ಕಾಶೀಬಾಯಿ ಬೋಗಶೆಟ್ಟಿ, ಶ್ರೀಮತಿ ಜ್ಯೋತಿ ಪಾಟೀಲ, ಶ್ರೀಮತಿ ಕನ್ಯಾಕುಮಾರಿ, ಶ್ರೀಮತಿ ಅನಿತಾ ಪಾಟೀಲ, ಶ್ರೀಮತಿ. ಮಾನಸಾ, ಶ್ರೀಮತಿ ಸಂತೋಷಿ ಕೆ, ಶ್ರೀಮತಿ ಪ್ರೀಯಾ ನಿಗ್ಗುಡಗಿ, ಶ್ರೀ. ಬಸವರಾಜ ಗೋಣಿ, ಶ್ರೀಮತಿ ಸರೋಜಾದೇವಿ ಪಾಟೀಲ, ಬೋಧಕೇತರ ಸಿಬ್ಬಂದಿಗಳಾದ ಶ್ರೀಮತಿ. ಭಾಗ್ಯವಂತಿ, ಶ್ರೀಮತಿ ಜಯಶ್ರೀ ಎನ್, ಶ್ರೀಮತಿ ಸುಚೇತಾ ಪಾಟೀಲ, ಶ್ರೀಮತಿ ಅಂಬಿಕಾ ಪಾಟೀಲ, ಕುಮಾರಿ ಸುನೀತಾ ಸ್ವಾಮಿ, ಶ್ರೀ ಸಿದ್ದಲಿಂಗಯ್ಯಾ ಹೊಸಮನಿ, ಶ್ರೀಮತಿ ಬಸ್ಸಮ್ಮ, ಶ್ರೀಮತಿ ಲಕ್ಷ್ಮಿ ಚಂದ್ರಕಾಂತ, ಶ್ರೀ ರಾಣೇಶ ಮತ್ತಿತರು ಹಾಗೂ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು ಎಂದು ಉಪನ್ಯಾಸಕರಾದ ಡಾ. ಕಾಶೀಬಾಯಿ ಬೋಗಶೆಟ್ಟಿ ಅವರು ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.