ಅತಿವೃಷ್ಟಿ ಬೆಳೆ ಹಾನಿ ರೈತರಿಗೆ ವಿಮೆ ಬಂದಿಲ್ಲ:ಗುರುನಾಥ ವಟಗೆ*

ಅತಿವೃಷ್ಟಿ ಬೆಳೆ ಹಾನಿ ರೈತರಿಗೆ ವಿಮೆ  ಬಂದಿಲ್ಲ:ಗುರುನಾಥ ವಟಗೆ*

ಅತಿವೃಷ್ಟಿ ಬೆಳೆ ಹಾನಿ ರೈತರಿಗೆ ವಿಮೆ ಬಂದಿಲ್ಲ:ಗುರುನಾಥ ವಟಗೆ

ಕಮಲನಗರ:ಅತಿವೃಷ್ಟಿ ಬೆಳೆ ಹಾನಿಯಿದಾಗಿ ರೈತರ ಖಾತೆಗೆ ವೀಮೆ ಅಥವಾ ಪರಿಹಾರವಾಗಿ ಇಲ್ಲಿವರೆಗೂ ಒಂದು ನಯಾ ಪೈಸೆ ಬಂದಿಲ್ಲ ಎಂದು ಮುಧೋಳ(ಬಿ) ಪಿ.ಕೆ.ಪಿ.ಎಸ್ ಅಧ್ಯಕ್ಷರಾದ ಗುರುನಾಥ ವಟಗೆ ಹೇಳಿದರು.

ತಾಲೂಕಿನ ಮುಧೋಳ(ಬಿ) ಗ್ರಾಮದಲ್ಲಿ ಗುರುವಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಮುಧೋಳ(ಬಿ) ವತಿಯಿಂದ ಆಯೋಜನೆ ಮಾಡಿದ 49ನೇ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರೈತರಿಗೆ ಇನ್ಸೂರೆನ್ಸ್ ಕಟ್ಟವಂತೆ ಜಿಲ್ಲಾಧಿಕಾರಿ ತಾಲೂಕ ಅಧಿಕಾರಿಗಳು ಸಲಹೆ ಮೇರೆಗೆ ಸಾಕಷ್ಟು ರೈತರು ವೀಮೆ ಕಟ್ಟಿದ್ದಾರೆ. ತಾಲೂಕಿನಲ್ಲಿ ಅತಿವೃಷ್ಟಿಯಾಗಿ ರೈತರು ಕಂಗಾಲ ಆಗಿದ್ದಾರೆ, ಇಂತಹ ಕಷ್ಟ ಸಮಯದಲ್ಲಿ ರೈತರಿಗೆ ಇಲ್ಲಿಯವರಿಗೆ ಯಾವುದೇ ವೀಮೆ ಆಗಲಿ ಪರಿಹಾರವಾಗಲಿ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂಬಂಧ ಅಧಿಕಾರಿಗಳು ನಮ್ಮಗೆ ಸರಿಯಾಗಿ ಸ್ವಂದನೆ ಕೂಡದೆ ಇರುವುದು ಬಹಳ ಬೇಸರ ಸಂಗತಿಯಾಗಿದೆ. ಸಂಬಂಧ ಪಟ್ಟ ಅಧಿಕಾರಗಳು ರೈತ ನೋವನ್ನು ಅರ್ಥೈಸಿ ಕೊಂಡು ಆದಷ್ಟುಬೇಗ ರೈತರಿಗೆ ಪರಿಹಾರ ವೀಮೆ ಹಣ ಸಿಗುವಂತೆ ಮಾಡಬೇಕಾಗಿ ಒತ್ತಾಯಿಸಿದರು.

ಮುಧೋಳ (ಬಿ) ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಮುಧೋಳ(ಬಿ) 1740 ರೈತರ ಸಂಘ ಪರವಾಗಿ ಉತ್ತಮ ಕಾರ್ಯ ಮಾಡುತ್ತಿದೆ ಈ ವರ್ಷ ಸಂಘದ ಒಟ್ಟು ಲಾಭ 7,40,274 ರೂಪಾಯಿ ಆಗಿದೆ ಎಂದು ಸಭೆಗೆ ತಿಳಿಸಿದರು.

ಕಾಮನ ಸರ್ವಿಸ್ ಸೆಂಟರ್ (ಸಿ.ಎಸ್.ಸಿ) ಮೂಲಕ ನಮ್ಮ ಕಚೇರಿಯಲ್ಲಿ ಎಫ್.ಐ.ಡಿ, ಪ್ಯಾನ್ ಕಾರ್ಡ್, ಪಾನಿ, ಹೊಲಡ್ಡಿಂಗ್, ಇ.ಸಿ. ಹೆಲ್ತ್ ಇನ್ಶೂರೆನ್ಸ್,ಪೆನಸೇನ್ ಫೈಲ ಹೀಗೆ ಅನೇಕ ಇಂಟರನೆಟ ಸೇವೆ ದೊರೆಯುತ್ತವೆ.

ರೈತರಿಗಾಗಿ ಅನೇಕ ಸಾಲ ಸೌಲಭ್ಯ ದೊರೆಯುತ್ತದೆ ರೈತರು ಇದರ ಲಾಭ ಪಡೆದು ಕೊಳ್ಳಬೆಕಂದು ಮಾಹಿತಿ ನೀಡಿದರು.

ಪ್ರಗತಿ ಪರ ರೈತ ಹೌವಗಿರಾವ ವಟಗೆ ಮಾತನಾಡಿ, ರಾಸಾಯನಿಕ ಗೊಬ್ಬರ ಹೆಚ್ಚು ಬಳಸದೆ, ತಾವು ಸ್ವಂತ ಜೈವಿಕ ಗೊಬ್ಬರ ತಯಾರಿಸಿ ಹೊಲಕ್ಕೆ ಹಾಕಿದ್ದಾರೆ ಹೆಚ್ಚಿನ ಬೆಳೆ ಮತ್ತು ಮಣ್ಣಿನ ಫಲವತತೆ ಹೆಚ್ಚಿಸಬಹುದು, ಬಹು ಕೃಷಿ ಅಥವಾ ತೋಟಗರಿಕೆ ಮೂಲಕ ಹೆಚ್ಚಿನ ಆದಾಯ ಬರುವ ಬೆಳೆ ಬೆಳೆದು ಯಶಸ್ವಿಯಾಗಬೇಕೆಂದು ಹೇಳಿದರು.

ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ದತ್ತಾತ್ರೇಯ ಪೂಜಾರಿ ಮಾತನಾಡಿ, ಪಂಚಾಯತನಲ್ಲಿ ರೈತರಿಗೆ ದನದ ಕೊಟ್ಟಿಗೆ, ಶೇಡ, ಬಾವಿ ಹೀಗೆ ಅನೇಕ ಸವಲತ್ತು ಸಿಗುತ್ತವೆ ಇದರ ಲಾಭ ಪಡೆದು ಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಂಘದ ಸದಸ್ಯರಾದ ಉಪಾಧ್ಯಕ್ಷರು ವಿಠಲರಾವ ಬೋರಗಾವೆ, ರಾಜಕುಮಾರ ಬಿಚ್ಚುಕುಂದೆ, ಶಿವಾಜಿರಾವ ಬಿರಾದಾರ, ಪಂಡರಿ ಶರಿಕಾರ, ವಿಶ್ವನಾಥ ಹಲ್ಲಾಳೆ, ರಾಜೇಂದ್ರ ಜಾಧವ, ಬಾಬುರಾವ ರಕ್ಷಾಳೆ, ಶ್ರೀಮತಿ ಸಂಗೀತ ಗುಡ್ಡಾ, ಸುನೀತಾ ಹಳಕಾಯಿ, ನಾಗಯ್ಯ ಸ್ವಾಮಿ, ಕಲಿಮೋದ್ದಿನ ಶೇಖ, ಬಸವರಾಜ ಸ್ವಾಮಿ ಮತ್ತು ಗ್ರಾಮ ಪಂಚಾಯತ ಅಧ್ಯಕ್ಷರಾದ ಧನರಾಜ ವಡೆಯಾರ, ಉಪಾಧ್ಯಕ್ಷರು ನಿಕಿತಾ ಹಳಕಾಯಿ,ಸದಸ್ಯರಾದ ಸೋಮನಾಥ ಸ್ವಾಮಿ, ಸುನಿಲ ಹಲಬರ್ಗೆ, ಸಿದ್ದಮ್ಮ ಸಂಜು, ಜೈಶ್ರೀ ಸೋಮನಾಥ, ಧನರಾಜ ಶಿವಪ್ಪ, ಸಾಲಿಯಾ ಲಾಹ್ಮದ, ಗಜಾನಂದ ವಟಗೆ, ರಾಜಕುಮಾರ ಡಬೆ, ಶಾಲೂಕಾ ಪ್ರವೀಣ, ತುಳಸಿರಾಮ ನಾತು, ಅರುಣ ರಾಜಕುಮಾರ ಬೆಂಬ್ರಾ, ಮಂಗಲಾ ಜ್ಞಾನೇಶ್ವರ, ಚಂದ್ರಕಾಂತ ನಿವರ್ತಿ ಲಿಂಗದಳ್ಳಿ, ಮೀನಾಬಾಯಿ ಜ್ಞಾನೋಬಾ ಹಾಗೂ ಮುಧೋಳ (ಬಿ). ಹಸಿಖೇರಾ, ಗೌಡಗಾಂವ, ಬೆಂಬ್ರಾ, ನಿಂಗದಳ್ಳಿ ಗ್ರಾಮದ ರೈತರು ಸೇರಿದರು.