ಕಲಬುರಗಿಯಲ್ಲಿ ಕನ್ನಡಿಗರ ಹಬ್ಬ ಜರುಗಿತು
ಕಲಬುರಗಿಯಲ್ಲಿ ಕನ್ನಡಿಗರ ಹಬ್ಬ ಜರುಗಿತು
ಕಲಬುರಗಿ: ನಗರದ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಕಲ್ಯಾಣ ಕರ್ನಾಟಕ ಸೇನೆ ಜಿಲ್ಲಾ ಘಟಕದಿಂದ ಕನ್ನಡ ರಾಜ್ಯೋತ್ಸವ ದಿನ ನಿಮಿತ್ತ ಕನ್ನಡಿಗರ ಹಬ್ಬ ಕಾರ್ಯಕ್ರಮವನ್ನು ಪರಮ ಪೂಜ್ಯರು, ಜೈ ಭಾರತ ಮಾತಾ ಸೇವಾ ಅಮಿತಿ ನವದೆಹಲಿ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷರಾದ ಡಾ. ಹವಾ ಮಲ್ಲಿನಾಥ ಮಹಾರಾಜ ನಿರಗುಡಿ ಅವರು ಉದ್ಘಾಟಿಸಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಸುಮಾರು 25 ಸಮಾಜ ಸೇವಕರಿಗೆ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ 2024ನೇ ಸಾಲಿನ 'ಅಮೂಲ್ಯ ರತ್ನ' ಪುರಸ್ಕಾರ ನೀಡಿ ಗೌರವಿಸಲಾಯಿತು.
ನಂತರ ಸರಕಾರಿ ಮಹಿಳಾ ಮಹಾವಿದ್ಯಾಲಯದ ವಿದ್ಯಾರ್ಥಿನಿಯರಿಂದ 'ಭಾರತೀಯ ದೇಶಿ ಗೋವಿನ ತಳಿಯ ಉತ್ಪನ್ನಗಳ ಕುರಿತು ಮತ್ತು ಕನ್ನಡ ನಾಡು, ನುಡಿ, ನೆಲ, ಜಲ ವೈಶಿಷ್ಟ್ಯತೆ ಕುರಿತು ಭಾಷಣ ಸ್ಪರ್ಧೆ ನಡೆಸಲಾಯಿತು. ಸ್ಪರ್ಧೆಯಲ್ಲಿ ಗೆದ್ದ ವಿದ್ಯಾರ್ಥಿನಿಯರಿಗೆ ಪ್ರಥಮ-ರೂ.2,000, ದ್ವಿತೀಯ ರೂ.1000, ತೃತೀಯ-ರೂ. 500 ಹಾಗೂ ಸಮಾಧಾನಕರ ಬಹುಮಾನವಾಗಿ ಪ್ರಮಾಣ ಪತ್ರಗಳನ್ನು ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಅಧಿಕ್ಷಕ ಇಂಜನೀಯರ್ ಡಾ. ಸುರೇಶ ಎಲ್. ಶರ್ಮಾ, ಮುಖಂಡರಾದ ಲಿಂಗರಾಜ ತಾರಫೈಲ್, ಅಭಿಷೇಕ ಅಲ್ಲಂಪ್ರಭು ಪಾಟಿಲ, ನ್ಯಾಯವಾದಿ ವೈಜನಾಥ ಎಸ್ ಝಳಕಿ, ಅನಿಲಕುಮಾರ ಎಂ, ಉಪನ್ಯಾಸಕಿ ಪ್ರಭಾ ಬಿರಾದಾರ ಸೇನೆಯ ಸಂಸ್ಥಾಪಕ ಅಧ್ಯಕ್ಷ ದತ್ತು ಹಯ್ಯಾಳಕರ್, ರೇಣುಕಾ ಹಯ್ಯಾಳಕರ್, ಡಾ.ಲಕ್ಷö್ಮಣ ದಸ್ತಿ, ಡಾ.ಪಿ.ಎನ್.ರಾವ್, ಮಡಿವಾಳಪ್ಪ ಅಮರಾವತಿ, ರಮೇಶ ಬೀದರಕರ್, ನವೀನ್ ಅಲೆಗಾನ್, ಸುಭಾಷ ಬನಪಟ್ಟಿ, ಯಂಕಪ್ಪ ಅಕ್ಷಯ, ಭೀಮಾಶಂಕರ್ ಭಕೂರ, ಶ್ರೀಮತಿ ಬಿ. ಗೋರಂಪಳ್ಳಿ, ಶ್ರೀದೇವಿ ಮುತ್ತಂಗಿ, ರೇಖಾ ಹಪ್ತಿ, ಪದ್ಮಾವತಿ ರಠಕಲ್ ಸೇರಿದಂತೆ ಇತರರು ಇದ್ದರು. ಇದಾದ ಬಳಿಕ ರಸಮಂಜರಿ ಕಾರ್ಯಕ್ರಮಗಳು ಜರುಗಿದವು.