ದಿನಗೂಲಿ ನೌಕರರ ಬಾಕಿ ವೇತನವ ಬಿಡುಗಡೆ ಮಾಡುವಂತೆ ಆಗ್ರಹಿಸಿ ಧರಣಿ

ದಿನಗೂಲಿ ನೌಕರರ ಬಾಕಿ ವೇತನವ ಬಿಡುಗಡೆ ಮಾಡುವಂತೆ ಆಗ್ರಹಿಸಿ ಧರಣಿ

ದಿನಗೂಲಿ ನೌಕರರ ಬಾಕಿ ವೇತನವ ಬಿಡುಗಡೆ ಮಾಡುವಂತೆ ಆಗ್ರಹಿಸಿ ಧರಣಿ 

ಕಲಬುರಗಿ: ಸಮಾಜ ಕಲ್ಯಾಣ ಇಲಾಖೆಯಡಿ ತಾಲೂಕಿನಲ್ಲಿ ನಡೆಯುತ್ತಿರುವ ವಸತಿ ನಿಲಯಗಳ ದಿನಗೂಲಿ ಅಡುಗೆಯವರ ಮತ್ತು ಅಡುಗೆ ಸಹಾಯಕರ 5 ತಿಂಗಳ ಬಾಕಿ ವೇತನವನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಆಗ್ರಹಿಸಿ ದಿನಗೂಲಿ ನೌಕರರ ಸಂಘ ಹಾಗೂ ವಿವಿಧ ದಲಿತ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ 2ನೇದಿನ ಧರಣಿ ಸತ್ಯಾಗ್ರಹ ಕೈಗೊಳ್ಳಲಾಯಿತು. ದಶರಥ ಕಲಗುರ್ತಿ, ಮಲ್ಲಿಕಾರ್ಜುನ ಜಿನಕೇರಿ, ರಾಜು ಕಟ್ಟಿಮನಿ, ಮಹೇಶ ಪುಂಡಲಿಕ, ಬಂಡೇಶ ರತ್ನಡಗಿ, ಪ್ರಕಾಶ ಮಾಳಗೆ, ಮಲ್ಲಿಕಾರ್ಜುನ ಹಾಲಗೇರಿ, ಚಂದ್ರಶೇಖರ, ಪಾಳರಾಜ, ಶಾಂತಪ್ಪ, ಸೂರ್ಯಕಾಂತ, ಸುಭಾಶ್ಚಂದ್ರ, ಮಲ್ಲಮ್ಮ, ಸಿದ್ದಮ್ಮ, ಭಾಗಮ್ಮ, ಶರಣಮ್ಮ, ಗೋದಾವರಿ, ಕವಿತಾ ಸೇರಿದಂತೆ ಹಲವರು ಭಾಗವಹಿಸಿದ್ದರು.