ಡಾ. ದಾಕ್ಷಾಯಿಣಿ ಅವ್ವ, ದೊಡ್ಡಪ್ಪ ಅಪ್ಪ ಹಾಗೂ ಡಾ. ಅಲ್ಲಮಪ್ರಭು ದೇಶಮುಖ್ ಅವರಿಗೆ ಛಪ್ಪರಬಂದಿ ಪ್ರಭಾಕರ ಪೌಂಡೇಶನ್ ವತಿಯಿಂದ ಗೌರವ ಸನ್ಮಾನ

ಡಾ. ದಾಕ್ಷಾಯಿಣಿ ಅವ್ವ, ದೊಡ್ಡಪ್ಪ ಅಪ್ಪ ಹಾಗೂ ಡಾ. ಅಲ್ಲಮಪ್ರಭು ದೇಶಮುಖ್ ಅವರಿಗೆ ಛಪ್ಪರಬಂದಿ ಪ್ರಭಾಕರ ಪೌಂಡೇಶನ್ ವತಿಯಿಂದ ಗೌರವ ಸನ್ಮಾನ
ಕಲಬುರಗಿ: ಛಪ್ಪರಬಂದಿ ಪ್ರಭಾಕರ ಪೌಂಡೇಶನ್ ವತಿಯಿಂದ ಇಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿ ಹಾಗೂ ಶರಣಬಸವ ವಿಶ್ವವಿದ್ಯಾಲಯದ ನೂತನ ಕುಲಾದ್ಯಪತಿಗಳಾಗಿ ಪದಗ್ರಹಣ ಮಾಡಿದ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವ ಅವರಿಗೆ ಗೌರವ ಸನ್ಮಾನ ಸಲ್ಲಿಸಲಾಯಿತು.
ಇದೇ ಸಂದರ್ಭದಲ್ಲಿ ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿಗಳಾದ ದೊಡ್ಡಪ್ಪ ಅಪ್ಪ ಅವರಿಗೆ ಹಾಗೂ ಸಂಸ್ಥಾನದ ಆಡಳಿತಾಧಿಕಾರಿಗಳಾದ ಡಾ. ಅಲ್ಲಮಪ್ರಭು ದೇಶಮುಖ್ ಅವರಿಗೆ ಸಹ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಶ್ರೀ ರಾಜುಗೌಡ ನಾಗನಹಳ್ಳಿ, ಡಾ. ಗುರುರಾಜ ಛಪ್ಪರಬಂದಿ, ಶ್ರೀ ಶರಣರಾಜ ಛಪ್ಪರಬಂದಿ, ಶ್ರೀ ಪ್ರಭುಲಿಂಗ ಮೂಲಗೆ, ಶ್ರೀ ಬಸವಂತರಾಯ ಕೊಳಕೂರ, ವಿಶ್ವನಾಥ ಪಾಟೀಲ್ ಗವನಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.