ನ. ೧ರಂದು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯದ ಧ್ವಜಾರೋಹಣ : ಎಂ.ಎಸ್. ಪಾಟೀಲ್ ನರಿಬೋಳ
ನ. ೧ರಂದು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯದ ಧ್ವಜಾರೋಹಣ : ಎಂ.ಎಸ್. ಪಾಟೀಲ್ ನರಿಬೋಳ
ಕಲಬುರಗಿ : ಕಲ್ಯಾಣ ಕರ್ನಾಟಕ ಪ್ರದೇಶ ನಿರ್ಲಕ್ಷ ಖಂಡಿಸಿ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ಒತ್ತಾಯಿಸಿ ನವೆಂಬರ್ 1ರಂದು ರಾಜ್ಯೊತ್ಸವ ಬಹಿಷ್ಕರಿಸಿ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯದ ಧ್ವಜಾರೋಹಣ ನಡೆಸಲು ನಿರ್ದಾರ ಮಾಡಲಾಗಿದೆ ಎಂದು ಕ ಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್. ಪಾಟೀಲ್ ನರಿಬೋಳ ತಿಳಿಸಿದ್ದಾರೆ.
ರಾಜ್ಯದಲ್ಲಿ ಅಧಿಕಾರ ನಡೆಸಿದ ಸರಕಾರಗಳು ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಯನ್ನು ನಿರ್ಲಕ್ಷಿಸಿವೆ. ಜಿಲ್ಲೆಯಲ್ಲಿ ನಡೆಯುವ ಕನ್ನಡ ರಾಜ್ಯೋತ್ಸವ ಸಮಾರಂಭಕ್ಕೆ ಹೋಗದೆ ಸಮಿತಿಯೇ ಪ್ರತ್ಯೇಕ ರಾಜ್ಯದ ಧ್ವಜಾರೋಹಣ ನಡೆಸುವ ಮೂಲಕ ಸರಕಾರಕ್ಕೆ ಚುರುಕು ಮುಟ್ಟಿಸಬೇಕಾಗಿದೆ ಎಂದರು
ಅಲ್ಲದೆ ಕ ಕ ಪ್ರದೇಶಕ್ಕೆ ಸಂವಿದಾನ ಬದ್ದವಾಗಿ ನಿಡಿರುವ 371 ಕಲಂ (ಜೆ) ವಿರೋದಿಸಿಸುವ ದುಷ್ಠ ಶಕ್ತಿಗಳನ್ನು ಮಟ್ಟ ಹಾಕದೆ ಕೈಕಟ್ಟಿ ಕುಳಿತಿರುವುದು ಕಂಡನಿಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನೆಪ ಮಾತ್ರಕ್ಕೆ ಸಂಪುಟ ಸಬೆ ನಡೆಸುವುದು ಜನರಿಗೆ ಖುಷಿ ಪಡಿಸುವುದು ಆಮೆಲೆ ಎಲ್ಲಾ ಮರೆತು ಬಿಡುವುದು ಇದು ನಡೆಯುತ್ತಲೆ ಬರುತ್ತಿದೆ ಇಂತವುಗಳಿಂದ ಪರಿಹಾರ ವಿಲ್ಲಾ ಕ ಕ ಪ್ರದೇಶ ಅಭಿವೃದ್ದಿ ಆಗಬೆಕಾದರೆ ಪ್ರತ್ಯೇಕ ರಾಜ್ಯವೆ ಮದ್ದು ಹಾಗಾಗಿ ನವೆಂಬರ 1 ಬೆಳಿಗ್ಗೆ ನಗರದ ಸರ್ದಾರ ವಲ್ಲಬಬಾಯಿ ಪಟೇಲ ವೃತ್ತದಲ್ಲಿ ಕ ಕ ಪ್ರತ್ಯೇಕ ರಾಜ್ಯ ಧ್ವಜಾರೋಹಣ ಮಾಡುವ ಮುಖಾಂತರ ತೆಲಂಗಾಣ ಮಾದರಿಯಲ್ಲಿ ಪ್ರತ್ಯೇಕ ರಾಜ್ಯದ ಕಹಳೆ ಮೋಳಗಿಸುತ್ತೆವೆ ಎಂದು ಸುದ್ದಿ ಮಾಡಲು ವಾಟ್ಸಪ್ ಮುಖಾಂತರ ನಮಗೆ ಹೇಳಿದರು.