ಅಂಬಾಭವಾನಿಯ ದರ್ಶನ ಪಡೆದ ಶಾಸಕ ಪ್ರಭು ಚವ್ಹಾಣ ಜನತೆಯ ಸಂಕಷ್ಟ ನಿವಾರಣೆಗೆ ಪ್ರಾರ್ಥನೆ

ಅಂಬಾಭವಾನಿಯ ದರ್ಶನ ಪಡೆದ ಶಾಸಕ ಪ್ರಭು ಚವ್ಹಾಣ  ಜನತೆಯ ಸಂಕಷ್ಟ ನಿವಾರಣೆಗೆ ಪ್ರಾರ್ಥನೆ

ಅಂಬಾಭವಾನಿಯ ದರ್ಶನ ಪಡೆದ ಶಾಸಕ ಪ್ರಭು ಚವ್ಹಾಣ

ಜನತೆಯ ಸಂಕಷ್ಟ ನಿವಾರಣೆಗೆ ಪ್ರಾರ್ಥನೆ

ಕಮಲನಗರ: ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಸೆ.28ರಂದು ಮಹಾರಾಷ್ಟ್ರ ರಾಜ್ಯದ ಪ್ರಸಿದ್ಧ ದೇವಸ್ಥಾನ ತುಳಜಾಪುರಕ್ಕೆ ಕುಟುಂಬಸ್ಥರು ಮತ್ತು ಆತ್ಮೀಯರೊಂದಿಗೆ ತೆರಳಿ ಮಾತಾ ಅಂಬಾ ಭವಾನಿ ದೇವಿಯ ದರ್ಶನ ಪಡೆದರು.

ಮಂದಿರಕ್ಕೆ ಭೇಟಿ ನೀಡುತ್ತಿದ್ದಂತೆ ದೇವಸ್ಥಾನದ ಆಡಳಿತ ಮಂಡಳಿಯವರು ಶಾಸಕರನ್ನು ಶಾಲು ಹೊದಿಸಿ ಹೂಗುಚ್ಚ ನೀಡಿ ಆತ್ಮೀಯವಾಗಿ ಸ್ವಾಗತಿಸಿದರು.

ನಂತರ ಶಾಸಕರು ಕುಟುಂಬಸ್ಥರು, ಔರಾದ(ಬಿ) ಹಾಗೂ ಕಮಲನಗರ ತಾಲ್ಲೂಕಿನ ನೂರಾರು ಆತ್ಮೀಯರೊಂದಿಗೆ ತುಳಜಾಭವಾನಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಕ್ಷೇತ್ರದ ಮಹಾಜನತೆ ಹಿಂದೆಂದು ಕಂಡು ಕೇಳರಿಯದಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಎಲ್ಲರ ಮೇಲೆ ಕೃಪೆ ತೋರಿಸಬೇಕು. ಸಂಕಷ್ಟಗಳು ದೂರವಾಗಿ ಎಲ್ಲರಿಗೂ ಸುಖ, ಸಮೃದ್ದಿ, ನೆಮ್ಮದಿ ನೀಡುವಂತೆ ಬೇಡಿಕೊಂಡರು.

ಈ ವೇಳೆ ಮಾತನಾಡಿದ ಶಾಸಕರು, ಮಹಾರಾಷ್ಟ್ರದ ತುಳಜಾಪುರದಲ್ಲಿ ನೆಲೆಸಿರುವ ಮಾತಾ‌ ಅಂಬಾ ಭವಾನಿ ದೇವಿಯು ಅತ್ಯಂತ ಶಕ್ತಿಶಾಲಿ ದೇವರಾಗಿದ್ದಾರೆ. ಕರ್ನಾಟಕ, ತೆಲಂಗಾಣಾ, ಆಂಧ್ರ, ಮಹಾರಾಷ್ಟ್ರ ಸೇರಿದಂತೆ ದೇಶದ ಮೂಲೆ ಮೂಲೆಗಳಿಂದ ಭಕ್ತರು ತುಳಜಾಪುರಕ್ಕೆ ಭೇಟಿ ನೀಡಿ ಪುನೀತರಾಗುತ್ತಾರೆ. 

ಮಾತೆಯ ಭಕ್ತನಾಗಿರುವ ನಾನು ದಸರಾ ಹಬ್ಬದ ಸಂದರ್ಭದಲ್ಲಿ ಪ್ರತಿ ವರ್ಷ ತುಳಜಾಪುರಕ್ಕೆ ಭೇಟಿ ನೀಡಿ, ಜನತೆಯ ಒಳಿತಿಗೆ ಪ್ರಾರ್ಥಿಸುತ್ತೇನೆ. ಕುಟುಂಬಸ್ಥರು, ಕ್ಷೇತ್ರದ ಮುಖಂಡರು, ಕಾರ್ಯಕರ್ತರೊಂದಿಗೆ ಬಂದು ದೇವಿಯ ದರ್ಶನ ಪಡೆಯುವುದು ಸಂತೋಷ ಕೊಡುತ್ತದೆ. ಕಳೆದೆರಡು ತಿಂಗಳಿಂದ ನಿರಂತರ ಮಳೆಯಾಗುತ್ತಿದ್ದು, ರೈತರು ಸಾಕಷ್ಟು ಕಷ್ಟಪಟ್ಟು ಬೆಳೆಸಿದ ಬೆಳೆಗಳೆಲ್ಲ ನೀರುಪಾಲಾಗಿವೆ. ಜನ-ಜಾನುವಾರುಗಳು ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ಮಳೆಯ ಅರ್ಭಟ ಬೇಗ ನಿಲ್ಲಬೇಕು. ಎಲ್ಲರ ಸಂಕಷ್ಟಗಳನ್ನು ದೂರ ಮಾಡಬೇಕೆಂದು ದೇವರಲ್ಲಿ ಬೇಡಿಕೊಂಡಿದ್ದೇನೆ‌ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಧೊಂಡಿಬಾ ನರೋಟೆ, ಸಚಿನ ರಾಠೋಡ, ಪ್ರವೀಣ ಕಾರಬಾರಿ, ಶೇಷರಾವ ಕೋಳಿ, ಭರತ ಕದಮ್, ಯೋಗೇಶ ಪಾಟೀಲ, ಬಾಲಾಜಿ ಠಾಕೂರ್, ಮಂಜು ಸ್ವಾಮಿ, ರವೀಂದ್ರರೆಡ್ಡಿ ಉಜನಿ, ಉದಯ ಸೋಲಾಪೂರೆ, ಬಂಟಿ ರಾಂಪೂರೆ, ವೀರು ರಾಜಪೂರೆ, ಗಣೇಶ ಕಾರೆಗಾವೆ, ಅಶೋಕ ಅಲ್ಮಾಜೆ, ಗುರುನಾಥ ರಾಜಗೀರಾ, ಗೋರಖನಾಥ ಕುಂಬಾರ, ಸತೀಷ ಬಿರಾದಾರ ಸೇರಿದಂತೆ ಇತರರಿದ್ದರು.