ಅರಿವು ಶಿಕ್ಷಣ ಕೇಂದ್ರದಲ್ಲಿ ಶಿಕ್ಷಕರ ದಿನಾಚರಣೆ ಆಚರಣೆ

ಅರಿವು ಶಿಕ್ಷಣ ಕೇಂದ್ರದಲ್ಲಿ ಶಿಕ್ಷಕರ ದಿನಾಚರಣೆ ಆಚರಣೆ

ಅರಿವು ಶಿಕ್ಷಣ ಕೇಂದ್ರದಲ್ಲಿ ಶಿಕ್ಷಕರ ದಿನಾಚರಣೆ ಆಚರಣೆ

ಆಳಂದ: ತಾಲೂಕಿನ ಕಿಣ್ಣಿ ಸುಲ್ತಾನ ಗ್ರಾಮದ ಅರಿವು ಶಿಕ್ಷಣ ಕೇಂದ್ರದಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಆಚರಣೆ ಮಾಡಲಾಯಿತು. ಅಕ್ಷರದ್ವ ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಮತ್ತು ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು ಮುಖ್ಯ ಅತಿಥಿಗಳಾಗಿ ರಾಜಶೇಖರ್ ಕಡಗನ ಅವರು ಆಗಮಿಸಿದರು ಮತ್ತು ಮಹಾದೇವ್ ಕಾಂಬಳೆ ಪಲ್ಲವಿ ಎಚ್ ಚಿಂಚೋಳಿ ಪ್ರಿಯ ಜ್ಯೋತಿ ಶೃಂಗೇರಿ ಡಾ . ಬಾಬುರಾವ್ .ಬಸವರಾಜ ಅರಿವು ಶಿಕ್ಷಣ ಕೇಂದ್ರದ ಸ್ಥಾಪಕರು ಮಲ್ಲಿಕಾರ್ಜುನ್ ಶೃಂಗೇರಿ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ರಾಜಶೇಖರ್ ಕಡಗನ ಮಾತನಾಡಿ ಸಾವಿತ್ರಿಬಾಯಿ ಫುಲೆ ಯವರು ಎದುರಿಸಿರುವ ಸಮಸ್ಯೆಗಳ ಕುರಿತು ವಿವರವಾಗಿ ಮಾಹಿತಿ ನೀಡಿದರು. ವಿದ್ಯಾರ್ಥಿಗಳು ಮೂಢನಂಬಿಕೆಯನ್ನು ಬಿಟ್ಟು ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ನುಡಿದರು. ಅಂಬೇಡ್ಕರ್ ಅವರ ಜೀವನ ಆಧಾರಿತ ಹಾಡುಗಳನ್ನು ಹಾಡಿದರು. ಬಾಬುರಾವ್ ಶೃಂಗೇರಿ ಯವರು ಶಿಕ್ಷಕರನ್ನು ಗೌರವದಿಂದ ವಿನಯದಿಂದ ಕಾಣಬೇಕು ಎಂದರು ಮಹಾದೇವ್ ಕಾಂಬಳೆ ಮಾತನಾಡಿ ಸಮಾಜದ ಎಲ್ಲಾ ಜನತೆಗೆ ಶಿಕ್ಷಣ ಬಹಳ ಮುಖ್ಯ ಎಂದು ಹೇಳಿದರು. ಬಸವರಾಜ್ ಶೃಂಗೇರಿ ಅವರು ನಿರೂಪಣೆ ಮಾಡಿದರು. ಮಲ್ಲಿಕಾರ್ಜುನ್ ಶೃಂಗೇರಿ ವಂದಿಸಿದರು.

ವರದಿ ಡಾ.ಅವಿನಾಶ್ S ದೇವನೂರ