ಬಸವಕಲ್ಯಾಣ : ಪ್ರವಚನ ಸಮಾರಂಭದ ಸಮಾರೋಪ

ಬಸವಕಲ್ಯಾಣ : ಬಸವೇಶ್ವರ ದೇವಾಲಯದಲ್ಲಿ ಪ್ರವಚನ ಸಮಾರಂಭದ ಸಮಾರೋಪ
ಬಸವಕಲ್ಯಾಣ, ಆ.22 :ಇಲ್ಲಿನ ಶ್ರೀ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ ಹಾಗೂ ವಿಶ್ವಾಸ ಸಮಿತಿಯ ವತಿಯಿಂದ ಶ್ರಾವಣ ಮಾಸದ ನಿಮಿತ್ತವಾಗಿ ಪ್ರಾರಂಭಗೊಂಡಿದ್ದ ಆಧ್ಯಾತ್ಮಿಕ ಪ್ರವಚನ ಸಮಾರಂಭದ ಸಮಾರೋಪ ಕಾರ್ಯಕ್ರಮವನ್ನು ಆಗಸ್ಟ್ 24, ರವಿವಾರ ಸಂಜೆ 5.30ಕ್ಕೆ ದೇವಸ್ಥಾನದಲ್ಲಿ ಭವ್ಯವಾಗಿ ಹಮ್ಮಿಕೊಳ್ಳಲಾಗಿದೆ.
ಈ ಸಮಾರಂಭದಲ್ಲಿ ವಿಜಯಪುರ ಭಾಲಗಾಂವದ ಗುರುದೇವ ಆಶ್ರಮದ ಪೂಜ್ಯಶ್ರೀ ಅಮುಣೆ ಜತಾನಂದ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದು, ವಿಜಯಪುರ ಜ್ಞಾನಯೋಗ ಆಶ್ರಮದ ಪೂಜ್ಯಶ್ರೀ ಅದ್ವೆನಂದ ಸ್ವಾಮೀಜಿ ದಿವ್ಯ ನೇತೃತ್ವ ವಹಿಸಲಿದ್ದಾರೆ.
ಕಾರ್ಯಕ್ರಮಕ್ಕೆ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ ಅಧ್ಯಕ್ಷ ಬಸವರಾಜ ಕೊರಕೆ ಅವರು ಅಧ್ಯಕ್ಷತೆ ವಹಿಸಲಿದ್ದು, ನಗರ ಪೊಲೀಸ್ ಠಾಣೆಯ ಉಪನಿರೀಕ್ಷಕ ಚಂದ್ರಶೇಖರ್ ನಾರಾಯಣಪುರ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ವಿಶ್ವಾಸ ಸಮಿತಿ ಅಧ್ಯಕ್ಷ ಶಶಿಕಾಂತ್ ದುರ್ಗೆ ಗೌರವ ಉಪಸ್ಥಿತರಾಗಲಿದ್ದಾರೆ.
ಸ್ವಾಗತ ಸಮಿತಿಯಿಂದ ನಿರ್ದೇಶಕಿ ವಿಜಯಲಕ್ಷ್ಮಿ ಗುರುನಾಥ ಗಡ್ಡೆ ಕಾರ್ಯನಿರ್ವಹಿಸಲಿದ್ದು, ವಚನ ಸಂಗೀತವನ್ನು ಮಂಜುನಾಥ್ ಹೇಮಶೆಟ್ಟಿ ನೀಡಲಿದ್ದಾರೆ. ತಬಲಾ ವಾದನವನ್ನು ಪ್ರೇಮ ಗೌಡಗಾಂವೆ ಹಾಗೂ ಹಾರಮೋನಿಯಂ ವಾದನವನ್ನು ಮಂಜುನಾಥ್ ಹೇಮಶೆಟ್ಟಿ ನಿರ್ವಹಿಸಲಿದ್ದಾರೆ.
ಈ ಸಮಾರಂಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಆಧ್ಯಾತ್ಮಿಕ ಲಾಭ ಪಡೆಯುವಂತೆ ಪಂಚ ಕಮಿಟಿ, ವಿಶ್ವಾಸ ಸಮಿತಿಯವರು ಹಾಗೂ ಧನರಾಜ ಡಿ ರಾಜೋಳೆ ಕೋರಿದ್ದಾರೆ.
--