ವಿಶೇಷ ಚೇತನ, ಮಹಿಳೆಯರಿಗೆ , ಬಡವರಿಗೆ ಸರ್ಕಾರಿ ಸವಲತ್ತನೊಂದಿಗೆ, ಪಟ್ಟಣದ ಅಭಿವೃದ್ಧಿ ಸ್ಪಂದಿಸಿ ಎಂದು ಮುಖ್ಯಾಧಿಕಾರಿಗೆ ಬಿಜೆಪಿ ಮುಖಂಡರ ಒತ್ತಾಯ.
ವಿಶೇಷ ಚೇತನ, ಮಹಿಳೆಯರಿಗೆ , ಬಡವರಿಗೆ ಸರ್ಕಾರಿ ಸವಲತ್ತನೊಂದಿಗೆ, ಪಟ್ಟಣದ ಅಭಿವೃದ್ಧಿ ಸ್ಪಂದಿಸಿ ಎಂದು ಮುಖ್ಯಾಧಿಕಾರಿಗೆ ಬಿಜೆಪಿ ಮುಖಂಡರ ಒತ್ತಾಯ.
ವಾಡಿ: ಪಟ್ಟಣದ ಜನರ ಸಂಕಷ್ಟಕ್ಕೆ ಸ್ಪಂದಿಸಿ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಎಂದು ಪುರಸಭೆ ಮುಖ್ಯಾಧಿಕಾರಿ ಮನೋಜ ಕುಮಾರ ಗುರಿಕಾರ ಅವರಿಗೆ ಬಿಜೆಪಿ ಮುಖಂಡರು ಮನವಿ ಪತ್ರ ಸಲ್ಲಿಸಿ,ಆಗ್ರಹಿಸಿದರು.
ಈ ವೇಳೆ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಪಟ್ಟಣದಲ್ಲಿನ ಅಭಿವೃದ್ಧಿ ಬಗ್ಗೆ ಚರ್ಚಿಸಿ ವಾರ್ಡ್ ಸಂಖ್ಯೆ 01 ಬಸವನ ಖಣಿಯಲ್ಲಿ ವಾಸಿಸುವರಿಗೆ ಇನ್ನೂ ಹಕ್ಕು ಪತ್ರ ಇಲ್ಲ ಸುಮಾರು ಇಪ್ಪತ್ತು ವರ್ಷಗಳಿಂದ ಪುರಸಭೆ ಇದ್ದರೂ ಜನಸಾಮಾನ್ಯರಿಗೆ ಮೂಲಭೂತ ಸೌಕರ್ಯಗಳಿಲ್ಲದೆ ಇರುವುದು ದುರಾದೃಷ್ಟಕರವಾಗಿದೆ ಎಂದರು.
ಬಹುತೇಕ ಕಡೆ ಸ್ಥಳೀಯರಿಗೆ ವಾಸಿಸುವ ಹಕ್ಕು ಪತ್ರ ಕೂಡಾ ಕೊಟ್ಟಿಲ್ಲ ಅಲ್ಲಿನ ನಿವಾಸಿಗಳು ತೆರಗೆ ಕೊಡಲು ಸಿದ್ದರಿದ್ದರು ಅಧಿಕಾರಿಗಳ ಮುಂದೆ ಬರುತ್ತಿಲ್ಲಾ ಆದಷ್ಟು ಬೇಗ ಇದನ್ನು ಸರಿಪಡಿಸಿ.
ಪಟ್ಟಣವು ಸುಮಾರು ಐವತ್ತು ಸಾವಿರ ಜನಸಂಖ್ಯೆ ಹೊಂದಿದೆ,ಇಲ್ಲಿ ಪ್ರಖ್ಯಾತ ಎಸಿಸಿ(ಆದಾನಿ) ಸಿಮೆಂಟ್ ಹಾಗೂ ಬೃಹತ್ ರೈಲ್ವೆ ನಿಲ್ದಾಣ ಕೂಡಾ ಇದ್ದರು, ಜನರು ಸಾಮಾನ್ಯ ಜೀವನ ನಡೆಸಲಿಕ್ಕೂ ಹರಸಾಹಸ ಪಡುತ್ತಿದ್ದಾರೆ.
ಕುಡಿಯುವ ನೀರು ಸಹ ಮೂರುನಾಲ್ಕು ದಿನಗಳಿಗೊಮ್ಮೆ,ಅದು ರಾಡಿ ನೀರು, ಮತ್ತೆ ನೀರು ಸರಬರಾಜಾದರೆ ಪೈಪ್ ಗಳ ಸೋರಿಕೆ
ಚರಂಡಿ ನೀರು ರಸ್ತೆ ಹಾಗೂ ಮನೆಯೊಳಗೆ ಬರತ್ತದೆ,ಬಿದಿ ದೀಪಗಳ ಕೊರತೆ ಇದೆ, ಜೊತೆಗೆ
ಹಂದಿ,ನಾಯಿಗಳ ಕಾಟ, ಬಸ್ ನಿಲ್ದಾಣ ಇಲ್ಲದೇ ಇರುವುದು ಹೀಗೆ ಮುಂತಾದ ಸಮಸ್ಯೆಗಳ ಆಗರವಾದ ಪಟ್ಟಣವಾಗಿದೆ.
ಇದನ್ನೆಲ್ಲಾ ಸರಿದೂಗಿಸಲು ಇರುವ ಇಲ್ಲಿನ ಪುರಸಭೆಯಲ್ಲಿ ಕೆಲ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿರುವುದರಿಂದ ಸಾರ್ವಜನಿಕರು ಮೂಲಭೂತ ಸವಲತ್ತುಗಳಿಲ್ಲದೆ ಬದುಕುವ ದುಸ್ಥಿತಿ ನಿರ್ಮಾಣವಾಗಿದೆ.
ಶುದ್ಧ ನೀರು ಪೂರೈಕೆ ಜೊತೆಗೆ ಪ್ರತಿ ದಿನ ನೀರು ಸರಬರಾಜು ಮಾಡಿ,ವಾರ್ಡ ನಂ 01ಸೇರಿದಂತೆ ಬಹುತೇಕ ವಾರ್ಡಗಳಲ್ಲಿ ನೀರಿಗಾಗಿ ಜನರ ಪರಿತಪಿಸುತ್ತಿದ್ದಾರೆ.
ಪಟ್ಟಣದಲ್ಲಿ ಮಿತಿಮೀರಿದ ಪರಿಸರ ಮಾಲಿನ್ಯಕ್ಕೆ ಕಡಿವಾಣ ಹಾಕಿ ಪ್ರತಿ ಮೂರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಕೈಗೊಳ್ಳಿ.
ಕೋಟ್ಯಾಂತರ ರೂಪಾಯಿ ವೆಚ್ಚದ ತ್ಯಾಜ್ಯ ಸಂಸ್ಕರಣಾ ಘಟಕದ ನಿರ್ವಹಣೆ ಇಲ್ಲದೆ ಪಾಳು ಬಿದಿದೆ ಅದರ ಸದುಪಯೋಗ ವಾಗಿಸಿ,
ಎಲ್ಲಾ ವಾರ್ಡ್ ಗಳಲ್ಲಿ ಸಸಿ ನೆಟ್ಟು ಪೋಷಿಸಿ.
ಪಟ್ಟಣದ ಜನನಿಬಿಡ ಸ್ಥಳಗಳಲ್ಲಿ ಸಾರ್ವಜನಿಕ ಶೌಚಾಲಯ ಮತ್ತು ಬಸ್ ನಿಲ್ದಾಣ ನಿರ್ಮಾಣಕ್ಕೆ ತಕ್ಷಣ ಮುಂದಾಗಿ.
ತರಕಾರಿ ಮತ್ತು ಮಾಂಸ ಕ್ಕೆ ಪ್ರತ್ಯೇಕ ಮಾರುಕಟ್ಟೆ ಒದಗಿಸಿ,ಅಕ್ರಮ ಕಸಾಯಿಖನೆಗಳ ವಿರುದ್ಧ ಕ್ರಮಕೈಗೊಳ್ಳಿ.
ಪುರಸಭೆಯಲ್ಲಿ ಮತ್ತು ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮರ ಅಳವಡಿಸಿ.
ಲೋಕೋಪಯೋಗಿ ಇಲಾಖೆಯ ಇಲಾಖೆ ಯಿಂದ ಕೈಗೊಂಡ ಐದು ಕೋಟಿ ರೂಪಾಯಿ ವೆಚ್ಚದ ಮುಖ್ಯ ರಸ್ತೆ ಸಂಪೂರ್ಣ ಕಳಪೆ ಮಟ್ಟದಾಗಿದ್ದು, ಇದರ ಬಗ್ಗೆ ತನಿಖೆಗೆ ಮೆಲಾಧಿಕಾರಿಗಳಿಗೆ ಪತ್ರ ಬರೆದು, ಗುತ್ತಿಗೆದಾರರ ವಿರುದ್ಧ ಕ್ರಮಕೈಗೊಳ್ಳಿ.
ಪಟ್ಟಣದಲ್ಲಿ ನಡೆದಿದ್ದ ಅಭಿವೃದ್ಧಿ ಕಾಮರಿಗಳು ಸಂಪೂರ್ಣ ಕಳಪೆ ಮಟ್ಟದಾಗಿವೆ ಇದರ ಬಗ್ಗೆ ಮೇಲಾಧಿಕಾರಿಗಳಿಗೆ ಮಾಹಿತಿ ಕೊಟ್ಟರು ಅದು ನಿಂತಿಲ್ಲ,ಸಾರ್ವಜನಿಕ ಸಂಪತ್ತಿನ ದುರುಪಯೋಗ ಆಗುತ್ತಿದೆ ಇದನ್ನು ತಡೆಗಟ್ಟಿ.
ಬಡ ಅಂಗವಿಕಲರಿಗಾಗಿನ ತ್ರಿಚಕ್ರ ವಾಹನ, ಬಡ ಮಹಿಳೆಯರಿಗಾಗಿನ ಬಟ್ಟೆ ಹೊಲಿಗೆ ಯಂತ್ರಗಳು ಇನ್ನೂ ವಿತರಣೆ ಆಗದೇ,ತಾಜ್ಯ ವಿಲೇವಾರಿ ಘಟಕದಲ್ಲಿ ಹಾಳಾಗುತ್ತಿವೆ ಅರ್ಹರಿಗೆ ವಿತರಿಸಿ, ಕಸದ ಬುಟ್ಟಿ ಖರೀದಿಯಲ್ಲಿ ಹಾಗೂ ಡಿಸೇಲ್ ಬಳಕೆಯಲ್ಲಿ ಭ್ರಷ್ಟಾಚಾರ ವಾಗಿರು ಮಾಹಿತಿ ಬಂದಿದ್ದು ಇದರ ವಿರುದ್ಧ ತಕ್ಷಣ ಕ್ರಮಕ್ಕೆ ಮುಂದಾಗಿ.
ಮಧ್ಯಾಹ್ನ ಬರುವುದು ಮಧ್ಯಾಹ್ನ ಹೋಗುವುದು
ಸಾರ್ವಜನಿಕ ಪುರಸಭೆ ಕಛೇರಿಯಲ್ಲಿ ಕಾರ್ಯನಿರ್ವಹಿಸುವ ಕೆಲವರ ಕಾಯಕವಾಗಿದೆ. ಈ ಸ್ಥಳಗಳಲ್ಲಿ ಬಯೋ ಮೆಟ್ರಿಕ್ ಅಳವಡಿಸಿ.
ಪುರಸಭೆ ಪೌರ ಕಾರ್ಮಿಕರ ನೇಮಕಾತಿಯಲ್ಲಿ , ಹಾಜರಾತಿಯಲ್ಲಿ ಅವ್ಯವಹಾರ ನಡೆಯತ್ತಿರುವುದನ್ನು ತಡೆಗಟ್ಟಿ.
ಪಟ್ಟಣದ ಸಾರ್ವಜನಿಕ ಉದ್ಯಾನಗಳು ಸ್ವಚ್ಛ ಗೊಳಿಸಿ,ಸಾರ್ವಜನಿಕರಿಗೆ ಅನುಕೂಲ ವಾಗುವಂತೆ ಮಾಡಿ.
ಕೃಷಿ ಉತ್ಪನ್ನ ಮಾರುಕಟ್ಟೆ ನಾಲ್ಕ ಎಕರೆ ಜಮೀನನ್ನು ಖರೀದಿ ಮಾಡಿ ಸುಮಾರು 15 ವರ್ಷಗಳಾಯಿತು ಇನ್ನೂ ಕೂಡಾ ಮಾರುಕಟ್ಟೆ ಸ್ಥಾಪನೆ ಹಾಗಿಲ್ಲ,ದೂಡ್ಡ ನಾಮಫಲಕ ಮಾತ್ರ ಹಾಕಿದ್ದಾರೆ,ಇದರಿಂದ ಸುತ್ತಲಿನ ಹತ್ತಾರ ಹಳ್ಳಿಯ ರೈತರಿಗೆ ಅನುಕೂಲ ವಾಗುತ್ತದೆ ಇದರ ಬಗ್ಗೆ ತಾವು ಮಾಹಿತಿ ನೀಡಿ ಆದಷ್ಟೂ ಬೇಗ ಪ್ರಾರಂಭಿಸಿ ಎಂದು ವಿವಿಧ ಸಾರ್ವಜನಿಕ ತೊಂದರೆಗಳನ್ನು ಪರಿಹರಿಸಿ ಎಂದು ಒತ್ತಾಯಿಸಿದರು.
ಈ ಸಂಧರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ರವಿ ನಾಯಕ,ಮಾಜಿ ಪುರಸಭೆ ಸದಸ್ಯರಾದ ಕಿಶನ ಜಾಧವ, ಅಂಬದಾಸ ಜಾಧವ,ಯುವ ಮುಖಂಡ ಹೀರಾ ನಾಯಕ ಇದ್ದರು.
