ಸಚಿವ ಈಶ್ವರ ಖಂಡ್ರೆಗೆ ಸಾಮಾಜಿಕ ಹೋರಾಟಗಾರ ವೈಜಿನಾಥ ವಡ್ಡೆ ಮನವಿ
ಸಚಿವ ಈಶ್ವರ ಖಂಡ್ರೆಗೆ ಸಾಮಾಜಿಕ ಹೋರಾಟಗಾರ ವೈಜಿನಾಥ ವಡ್ಡೆ ಮನವಿ
ಕಮಲನಗರ:ತಾಲೂಕಿನ ವಿವಿಧ ಗ್ರಾಮದ ನಾಗರಿಕರು ಮತ್ತು ಜನಸಾಮಾನ್ಯರಿಗೆ ಅನುಕೂಲಕ್ಕಾಗಿ ತಾಲೂಕು ಕೇಂದ್ರದಲ್ಲಿ ಆಡಳಿತ ಅಧಿಕಾರಿಗಳು ವಾರದ ಒಂದು ದಿನ ಕಾರ್ಯನಿರ್ವಹಿಸಿ ಸಮಸ್ಯೆಗಳನ್ನು ಬಗೆ ಹರಿಸಬೇಕು ಎಂದು ಒತ್ತಾಯಿಸಿ ಸಾಮಾಜಿಕ ಹೋರಾಟಗಾರ ವೈಜಿನಾಥ ವಡ್ಡೆ ಅವರ ನೇತ್ರತ್ವದಲ್ಲಿ ಬೀದರ ಉಸ್ತುವಾರಿ ಸಚಿವ ಈಶ್ವರ ಖಂಡ್ರೆವರಿಗೆ ಮನವಿ ಸಲ್ಲಿಸಲಾಯಿತು.
ತಾಲೂಕು ಕೇಂದ್ರ ರಚನೆಯಾಗಿ ಬರೋಬರಿ ಏಳು ವರ್ಷ ಕಳೆದಿವೆ.ತಾಲೂಕಿನ 18 ಗ್ರಾಮ ಪಂಚಾಯತ ವ್ಯಾಪ್ತಿಗೆ ಸೇರುವ 54 ಗ್ರಾಮದ ಸಾರ್ವಜನಿಕರು ಸಣ್ಣ ಪುಟ್ಟ ಕೆಲಸಕ್ಕೆ ಕಚೇರಿಗಾಗಿ 35 ಕೀ.ಮಿ ದೂರದ ಔರಾದ ಪಟ್ಟಣಕ್ಕೆ ತಾಲೂಕು ಕ್ಷೇತ್ರಶಿಕ್ಷಾಣಾಧಿಕಾರಿ ಕಚೇರಿ, ಲೋಕೋಪಯೋಗಿ, ತೋಟಗಾರಿಗೆಕೆ, ಉಪನೋಂದನೆ, ಕೃಷಿ ಇಲಾಖೆ, ತಜ್ಞ ವೈದ್ಯರು ಸೇರಿದಂತೆ ಇನ್ನಿತರ ಕೆಲಸ ಕಾರ್ಯಗಳಿಗೆ ತೆರಳಬೇಕಾಗುತ್ತಿದೆ. ಜನಸಾಮಾನ್ಯರ ಹಣ ಜತೆಗೆ ಸಮಯ ವ್ಯಾರ್ಥವಾಗುತ್ತಿದೆ. ತಾಲೂಕಿನ ವಿವಿಧ ಗ್ರಾಮದ ಜನರ ಸಮಸ್ಯೆಗೆ ಮುತ್ತುವರ್ಜಿ ವಹಿಸಿ ತಾಲೂಕು ಕಚೇರಿಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ವಾರದ ಒಂದು ದಿನ ಕಾರ್ಯನಿರ್ವಸಲು ಮುಂದಾಗಬೇಕು ಎಂದು ಮನವಿ ಮಾಡಿದರು.
ಔರಾದ ಪಟ್ಟಣಕ್ಕೆ ಆಗಮಿಸಿದರೂ ಕೂಡಾ ಜನಸಾಮಾನ್ಯರ ಸಮಯಕ್ಕೆ ಕೆಲಸಗಳನ್ನು ಆಗುತ್ತಿಲ್ಲ. ತಾಲೂಕು ಕೇಂದ್ರದಲ್ಲಿ ವಿವಿಧ ಇಲಾಖೆ ಕಚೇರಿ ಸ್ಥಾಪನೆಗೆ ಅಗತ್ಯ ಇದೆ. ಮಿನಿ ವಿಧಾನ ಸಭೆ ಆಗುವವರಿಗೆ ಕಮಲನಗರ ತಾಲೂಕು ಕೇಂದ್ರದಲ್ಲಿ ವಾರದಲ್ಲಿ ಕನಿಷ್ಠ ಒಂದು ದಿನ ಸೇವೆ ಮಾಡಿ ಜನಸಾಮಾನ್ಯರಿಗೆ ಅನುಕೂಲ ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕಮಲನಗರ ತಾಲೂಕು ರೈತ ಸಂಘದ ಅಧ್ಯಕ್ಷ ಪ್ರವೀಣ ಕುಲಕರ್ಣಿ, ಬಾಲೂರ ಗ್ರಾಮದ ರೈತ ವಿಠ್ಠಲರಾವ ಪಾಟೀಲ್ ಮತ್ತು ವಿವಿಧ ಗ್ರಾಮದ ರೈತರು ಇದ್ದರು.