ಉದ್ಯಾನವನಗಳ ನವಿಕರಣಕ್ಕೆ ಹೆಚ್ಚಿನ ಅನುದಾನ:ಶಾಸಕ ಬಿ.ಜಿ.ಪಾಟೀಲ ಭರವಸೆ.

ಉದ್ಯಾನವನಗಳ ನವಿಕರಣಕ್ಕೆ ಹೆಚ್ಚಿನ ಅನುದಾನ:ಶಾಸಕ ಬಿ.ಜಿ.ಪಾಟೀಲ ಭರವಸೆ.

ಉದ್ಯಾನವನಗಳ ನವಿಕರಣಕ್ಕೆ ಹೆಚ್ಚಿನ ಅನುದಾನ:ಶಾಸಕ ಬಿ.ಜಿ.ಪಾಟೀಲ ಭರವಸೆ.

ಕಲಬುರಗಿ: ಜಯನಗರದಲ್ಲಿ ಮಹಾನಗರ ಪಾಲಿಕೆ ಕಲಬುರಗಿ ಹಾಗೂ ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ಅಡಿಯಲ್ಲಿ ಬರುವ ಜಯನಗರದಲ್ಲಿ ನವಿಕರಿಸಿದ ಸಾರ್ವಜನಿಕ ಉದ್ಯಾನವನವನ್ನು ವಿಧಾನ ಪರಿಷತ್ ಸದಸ್ಯ ಡಾ.ಬಿ.ಜಿ.ಪಾಟೀಲ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ಅವನತಿ ಅಂಚಿನಲ್ಲಿರುವ ಸಾರ್ವಜನಿಕ ಉದ್ಯಾನವನಗಳನ್ನು ಸರಕಾರ ಅಭಿವೃದ್ಧಿ ಪಡಿಸಬೇಕು.ತಮಗೆ ಬಂದಿರುವ ಅನುದಾನದಲ್ಲಿ ಸಾಧ್ಯವಾದಷ್ಟು ರಚನಾತ್ಮಕ ಕೆಲಸಗಳನ್ನು ಮಾಡಲಾಗುತ್ತಿದೆ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಅಲ್ಲಮಪ್ರಭು ಪಾಟೀಲ ಕಲಬುರಗಿಯಲ್ಲಿನ ಪಾಳು ಬಿದ್ದಿರುವ ಸಾರ್ವಜನಿಕ ಉದ್ಯಾನವನಗಳನ್ನು ಗುರುತಿಸಿ ತಮ್ಮ ಗಮನಕ್ಕೆ ತಂದರೆ ಅವಗಳನ್ನು ನವೀಕರಿಸಲು ತಾವು ಬದ್ಧ.ಸರಕಾರ ಈಗಾಗಲೇ ಉದ್ಯಾನವನಗಳನ್ನು ಅಭಿವೃದ್ಧಿಪಡಿಸಲು ಮುಂದಾಗಿದೆ ಎಂದರು. ಪಾಲಿಕೆಯ ಸದಸ್ಯ ವೀರಣ್ಣ ಹೊನ್ನಳ್ಳಿ, ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಲಿಂಗರಾಜ ಸಿರಗಾಪೂರ,ಕೆ.ಎಸ್.ವಾಲಿ ಮಾತನಾಡಿದರು.ಜಿಲ್ಲಾ ಪಂಚಾಯತ್ ಕಲಬುರಗಿ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತಕ ವಿಜಯಕುಮಾರ ರಾಠೋಡ,ಡಾ.ಬಿ.ಎಸ್.ಗುಳಶೆಟ್ಟಿ,ವಿರೇಶ ದಂಡೋತಿ ವೇದಿಕೆ ಮೇಲೆ ಇದ್ದರು.ಇದೇ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ ಯಡ್ರಾಮಿ ಅವರನ್ನು ಸನ್ನ್ಮಾನಿಸಲಾಯಿತು.ಬಂಡಪ್ಪ ಕೇಸೂರ ಸ್ವಾಗತಿಸಿದರು.ಅನುರಾಧಾ ಕುಮಾರಸ್ವಾಮಿ ನಿರೂಪಿಸಿದರು.ಶಿವಕುಮಾರ ಪಾಟೀಲ,ಭೀಮಾಶಂಕರ ಶೆಟ್ಟಿ,ಮನೋಹರ ಬಡಶೇಷಿ,ಜಗನ್ನಾಥ ಪಾಟೀಲ,ಹಣಮಂತರಾವ ಪಾಟೀಲ,ಎ.ಎಸ್.ಭೋಗಶೆಟ್ಟಿ ಸೇರಿದಂತೆ ಟ್ರಸ್ಟ್ ಪದಾಧಿಕಾರಿಗಳು, ಸದಸ್ಯರು, ಜಯನಗರ ಅಭಿವೃದ್ಧಿ ಸಂಘದ, ಡಾಕ್ಟರ್ಸ ಕಾಲೋನಿ ಸದಸ್ಯರು ಹಾಗೂ ಜಯನಗರ ಬಡಾವಣೆಯ ಸಾರ್ವಜನಿಕರು ಭಾಗವಹಿಸಿದ್ದರು

.