ಹಾರಕೂಡ ಶ್ರಿಗಳಿಂದ ಸುದ್ದಿಗೋಷ್ಠಿ - ಸಾಹಿತಿ ಎಸ್. ಎಂ. ಹಿರೇಮಠ ಅವರಿಗೆ ಶ್ರೀ ಚೆನ್ನ ರೇಣುಕ ಬಸವ ಪ್ರಶಸ್ತಿ

ಹಾರಕೂಡ ಶ್ರಿಗಳಿಂದ ಸುದ್ದಿಗೋಷ್ಠಿ - ಸಾಹಿತಿ ಎಸ್. ಎಂ. ಹಿರೇಮಠ ಅವರಿಗೆ ಶ್ರೀ ಚೆನ್ನ ರೇಣುಕ ಬಸವ ಪ್ರಶಸ್ತಿ

ಹಾರಕೂಡ ಶ್ರಿಗಳಿಂದ ಸುದ್ದಿಗೋಷ್ಠಿ - ಸಾಹಿತಿ ಎಸ್. ಎಂ. ಹಿರೇಮಠ ಅವರಿಗೆ ಶ್ರೀ ಚೆನ್ನ ರೇಣುಕ ಬಸವ ಪ್ರಶಸ್ತಿ

ಬಸವಕಲ್ಯಾಣ:ಲಿಂಗೈಕ್ಯ ಶ್ರೀ ಗುರುಲಿಂಗ ಶಿವಾಚಾರ್ಯರ 56ನೇ ಪುಣ್ಯ ಸ್ಮರಣೋತ್ಸವ ಹಾಗೂ ಶ್ರೀ ಚನ್ನ ರೇಣುಕ ಬಸವ ಪ್ರಶಸ್ತಿ ಪ್ರಧಾನ ಸಮಾರಂಭ ಮತ್ತು 39ನೇ ಅನುಭಾವ ಪ್ರಚಾರ ಉಪನ್ಯಾಸಮಾಲೆಯ ಕಾರ್ಯಕ್ರಮ ಪ್ರಯುಕ್ತ ಬುಧವಾರ ದಿನಾಂಕ 3-9-2025 ರಂದು ಬೆಳಗ್ಗೆ 10 ಗಂಟೆಗೆ ಹಾರಕೂಡ ಶ್ರೀಮಠದಲ್ಲಿ ಪತ್ರಿಕಾಗೋಷ್ಠಿ ಜರುಗಿತು.

 ಪೀಠಾಧಿಪತಿಗಳಾದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರತಿ ವರ್ಷ ಹಾರಕೂಡ ಶ್ರೀಮಠದಿಂದ ಕೊಡಮಾಡುವ ರಾಷ್ಟ್ರಮಟ್ಟದ ಚೆನ್ನ ರೇಣುಕ ಬಸವ ಪ್ರಶಸ್ತಿ ಯನ್ನು ಈ ವರ್ಷ ಖ್ಯಾತ ಸಾಹಿತಿಗಳಾದ "ಎಸ್ ಎಂ ಹಿರೇಮಠ" ಅವರಿಗೆ 1 ಲಕ್ಷ ನಗದು, ಎರಡು ತೊಲೆ ಚಿನ್ನದ ಪದಕದೊಂದಿಗೆ ಪ್ರಶಸ್ತಿಯನ್ನು 01 ಅಕ್ಟೋಬರ್ 2025 ರಂದು ಜರುಗಲಿರುವ ಶ್ರೀ ಗುರುಲಿಂಗ ಶಿವಾಚಾರ್ಯರ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.

 ಮಲ್ಲಿನಾಥ ಹಿರೇಮಠ ಸ್ವಾಗತಿಸಿದರು.ಸುರೇಶ ಸ್ವಾಮಿ ಉಪಸ್ಥಿತರಿದ್ದರು.