ಕೇಂದ್ರ ಬಸ್ ನಿಲ್ದಾಣದ ಎದುರುಗಡೆ ಒತ್ತುವರಿ ತೆರವು
ಕೇಂದ್ರ ಬಸ್ ನಿಲ್ದಾಣದ ಎದುರುಗಡೆ ಒತ್ತುವರಿ ತೆರವು
ಕಲಬುರಗಿ: ನಗರದ ಕೇಂದ್ರ ಬಸ್ ನಿಲ್ದಾಣದ ಎದುರುಗಡೆ ಇರುವ ವಾರ್ಡ್ ನಂ 44 ರ ಶಾಂತಿನಗರ, ಹೋಟೆಲ್ ಕಮಲ್ ಹಿಂದಿನ ರಸ್ತೆಯಲ್ಲಿ ಒತ್ತುವರಿ ಮಾಡಿದ ಸ್ಥಳವನ್ನು ಪಾಲಿಕೆ ಅಧಿಕಾರಿಗಳು ತೆರವುಗೊಳಿಸಿದರು.
ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕಾನೂನು ಬಾಹಿರ ಒತ್ತುವರಿ ಮತ್ತು ಕಟ್ಟಡಕ್ಕೆ ಮುಕ್ತಿ ನೀಡಿ ಸುಗಮ ವಾಹನ ಸಂಚಾರ ಮತ್ತು ಸ್ವಚ್ಛತೆ ಮೊದಲನೇ ಆದ್ಯತೆ ನೀಡಲಾಗುವದು ಎಂದು ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಚಿನ್ ಶಿರವಾಳ್ ಅವರು ಹೇಳಿದರು.
ಅಮವಾಸಿಯಂದೇ ಡೆಮಾಲಿಷನ್ ಕಾರ್ಯಚರಣೆಯನ್ನು ಸಾರ್ವಜನಿಕರು ಕುತೂಹಲದಿಂದ ವೀಕ್ಷಿಸಿದರು.
ಈ ಸಂದರ್ಭದಲ್ಲಿ ವಲಯ ಆಯುಕ್ತ ಉಮೇಶ ಚವಾಣ್, ಪರಿಸರ ಇಂಜಿನಿಯರ್ ಬಾಬುರಾವ್ ಮೇಲ್ಕೆರಿ, ಇಂಜಿನಿಯರ ರವಿ ಚವಾಣ್, ರಾಘವೇಂದ್ರ, ದೀಪಕ್, ನವಾಜ್, ಸೇರಿದಂತೆ ಪೊಲೀಸ್ರು, ಜೆಸ್ಕಾಂ ಸಿಬ್ಬಂದಿಗಳು, ಪಾಲಿಕೆ ಸಿಬ್ಬಂದಿಗಳು ಉಪಸ್ಥಿತರಿದ್ದರು.