PWD ,ಕಲಬುರಗಿ ಜಿಲ್ಲಾ ಘಟಕಕ್ಕೆ ನೂತನ ಪದಾಧಿಕಾರಿಗಳ ನೇಮಕ
ಕರ್ನಾಟಕ ರಾಜ್ಯ ಲೋಕೋಪಯೋಗಿ ಇಲಾಖೆ ನೌಕರ ಸಂಘ – ಕಲಬುರಗಿ ಜಿಲ್ಲಾ ಘಟಕಕ್ಕೆ ನೂತನ ಪದಾಧಿಕಾರಿಗಳ ನೇಮಕ
ಕಲಬುರಗಿ: ಕರ್ನಾಟಕ ರಾಜ್ಯ ಲೋಕೋಪಯೋಗಿ ಇಲಾಖೆ ನೌಕರ ಸಂಘ (ನೋಂ) ಬೆಂಗಳೂರಿನ ರಾಜ್ಯಾಧ್ಯಕ್ಷರಾದ ಶ್ರೀ ಎ. ಸೋಮಶೇಖರ್ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಶ್ರೀ ಕೆ.ಎನ್. ಶ್ರೀನಿವಾಸ ಅವರ ಆದೇಶದಂತೆ ಕಲಬುರಗಿ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಶ್ರೀ ಶರಣರಾಜ ಛಪ್ಪರಬಂದಿ ಅವರನ್ನು ಆಯ್ಕೆ ಮಾಡಲಾಗಿದೆ. ಹಿರಿಯ ಉಪಾಧ್ಯಕ್ಷರಾಗಿ ಶ್ರೀ ಭೀಮಣ್ಣ ನಾಯಕ್, ಉಪಾಧ್ಯಕ್ಷರಾಗಿ ಶ್ರೀ ಮಲ್ಲಿಕಾರ್ಜುನ ಸಂಗೊಳ್ಳಗಿ, ಶ್ರೀ ಉಜ್ಜರ್ ಆಹಮದ ಖಾನ್, ಶ್ರೀ ಕಮಲಾಕರ್ ಅನೆಗುಂದಿ ಅವರನ್ನು ನೇಮಿಸಲಾಗಿದೆ. ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ಚಂದ್ರಶೇಖರ್ ಕಟ್ಟಿಮನಿ, ಖಜಾಂಚಿಯಾಗಿ ಶ್ರೀ ಉಮಾಕಾಂತ ಹಿರೋಳ್ಳಿ, ಕಾರ್ಯದರ್ಶಿಯಾಗಿ ಶ್ರೀ ಕಿಟೇಂದ್ರ, ಸಹ ಕಾರ್ಯದರ್ಶಿಗಳಾಗಿ ಶ್ರೀ ಶಶಿನಾಥ ಸೊನೆ ಹಾಗೂ ಶ್ರೀ ಖಾಸಿಂ ಆಲಿ ಅವರನ್ನು ನೇಮಿಸಲಾಗಿದೆ. ಸಂಘಟನಾ ಕಾರ್ಯದರ್ಶಿಗಳಾಗಿ ಶ್ರೀ ಅಕ್ಟರ್ ಪಾಶಾ ಮತ್ತು ಶ್ರೀ ಅಶೋಕ ಸಜ್ಜನ, ಕ್ರೀಡಾ ಕಾರ್ಯದರ್ಶಿಯಾಗಿ ಶ್ರೀ ರಾಮಕಿಶನಾ ಸಿಂಗ್ ಅವರನ್ನು ಆಯ್ಕೆ ಮಾಡಲಾಗಿದೆ.
ಇದಲ್ಲದೆ ಸಂಘದ ಸಲಹೆಗಾರರಾಗಿ ಶ್ರೀ ಶರಣಗೌಡ ಪಾಟೀಲ್ ಹಾಗೂ ಶ್ರೀ ಮಂಜುನಾಥ್ ಧೂಳೆ, ಕಾರ್ಯಕಾರಿ ಸದಸ್ಯರಾಗಿ ಶ್ರೀ ನಾಗೇಂದ್ರಪ್ಪ, ಶ್ರೀ ರಾಜಕುಮಾರ್, ಶ್ರೀ ಪಾಂಡುರಂಗ ಕುಲಕರ್ಣಿ, ಶ್ರೀ ಕಾರ್ತಿಕ್, ಶ್ರೀ ಪ್ರಭು ರಾಥೋಡ್ ಮತ್ತು ಶ್ರೀ ಮಹಮ್ಮದ್ ಮಜಾರ್ ಅವರನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ.
ಈ ಸಂದರ್ಭದಲ್ಲಿ ನಡೆದ ಸಭೆಯಲ್ಲಿ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀ ಶರಣರಾಜ ಛಪ್ಪರಬಂದಿ ಅವರು ನೇಮಕ ಆದೇಶ ಪತ್ರಗಳನ್ನು ವಿತರಿಸಿದರು. ನೂತನ ಪದಾಧಿಕಾರಿಗಳು ಸಂಘವನ್ನು ಮತ್ತಷ್ಟು ಬಲಿಷ್ಠಗೊಳಿಸುವ ಭರವಸೆ ವ್ಯಕ್ತಪಡಿಸಿದರು.
