ಶ್ರೀಮದ್ ರಂಭಾಪುರಿ ಜಗದ್ಗುರುಗಳವರ ದಸರಾ ಧರ್ಮ ಸಮ್ಮೇಳನ ಪ್ರಚಾರ ರಥಕ್ಕೆ ಹಾರಕೂಡ ಶ್ರೀಗಳಿಂದ ಚಾಲನೆ

ಶ್ರೀಮದ್ ರಂಭಾಪುರಿ ಜಗದ್ಗುರುಗಳವರ ದಸರಾ ಧರ್ಮ ಸಮ್ಮೇಳನ ಪ್ರಚಾರ ರಥಕ್ಕೆ ಹಾರಕೂಡ ಶ್ರೀಗಳಿಂದ ಚಾಲನೆ
ಬಸವಕಲ್ಯಾಣ : ಬಾಳೆಹೊನ್ನೂರಿನ ಶ್ರೀಮದ್ ರಂಭಾಪುರಿ ಪೀಠದ ಶ್ರೀ ಶ್ರೀ ಶ್ರೀ 1008 ಜಗದ್ಗುರು ಪ್ರಸನ್ನ ರೇಣುಕ ಡಾll ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ 2025 ರ ಸಮಾರಂಭವು ಬೀದರ ಜಿಲ್ಲೆಯ ಇತಿಹಾಸ ಪ್ರಸಿದ್ಧ ಬಸವಕಲ್ಯಾಣ ನಗರದಲ್ಲಿ ದಿನಾಂಕ 22 ಸೆಪ್ಟೆಂಬರ್ 2025 ರಿಂದ 02 ಅಕ್ಟೊಬರ್ 2025 ರ ವರೆಗೆ ಪ್ರತಿನಿತ್ಯ ಶ್ರೀ ಬಸವೇಶ್ವರ ವೃತ್ತದ ಬಿ. ಕೆ. ಡಿ. ಬಿ. ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ 08:00 ಗಂಟೆಯಿಂದ 11:00 ಗಂಟೆ ವರೆಗೆ ಪರಮ ಪೂಜ್ಯ ಜಗದ್ಗುರುಗಳ ಇಷ್ಟಲಿಂಗ ಮಹಾ ಪೂಜೆ ಹಾಗೂ ಸಾಯಂಕಾಲ 06:30 ರಿಂದ 09:30 ರ ವರೆಗೆ ಅಕ್ಕಮಹಾದೇವಿ ಕಾಲೇಜಿನ ಆವರಣದಲ್ಲಿಯ ಭವ್ಯವಾದ ಮಾನವ ಧರ್ಮ ಮಂಟಪದಲ್ಲಿ ದಸರಾ ಧರ್ಮ ಸಮ್ಮೇಳನ ವೈಭವದಿಂದ ಜರುಗಲಿದೆ. ಹೀಗಾಗಿ ದಿನಾಂಕ 01.09.2025 ಸೋಮವಾರ ಬೆಳಗ್ಗೆ 11:00 ಗಂಟೆಗೆ ಸುಕ್ಷೇತ್ರ ಹಾರಕೂಡ ಸಂಸ್ಥಾನ ಹಿರೇಮಠದಲ್ಲಿ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾದ ಪೂಜ್ಯ ಶ್ರೀ ಡಾ. ಚನ್ನವೀರ ಶಿವಾಚಾರ್ಯರು ತಮ್ಮ ಅಮೃತ ಹಸ್ತದಿಂದ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ ಪ್ರಚಾರ ರಥಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸ್ವಾಗತ ಸಮಿತಿಯ ವಕ್ತಾರರಾದ ಸುರೇಶ ಸ್ವಾಮಿ, ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ರಾಮಪ್ಪ ಗುದಗೆ, ಸ್ವಾಗತ ಸಮಿತಿಯ ಪದಾಧಿಕಾರಿಗಳಾದ ದಯಾನಂದ ಶೀಲವಂತ, ಸುನೀಲ ಪಾಟೀಲ, ಚಂದ್ರಶೇಖರ ಪಾಟೀಲ, ರಾಮಚಂದ್ರ ಹುಡುಗೆ, ಎಂ. ಕೆ. ನಂದಿ, ವೀರಣ್ಣ ಶೀಲವಂತ, ಸೂರ್ಯಕಾಂತ ಶೀಲವಂತ, ರಮೇಶ ರಾಜೋಳೆ, ರುದ್ರೇಶ್ವರ ಗೋರ್ಟಾ, ಕಾರ್ತಿಕ ಬಿರಾದಾರ ಸೇರಿದಂತೆ ಶ್ರೀ ಮಠದ ಭಕ್ತರು ಪಾಲ್ಗೊಂಡಿದ್ದರು.