ನಾರಾಯಣ ಗುರು ಜಯಂತಿಗೆ ಚಿತ್ರನಟ ವಿಜಯ ರಾಘವೇಂದ್ರ , ಹರಿಪ್ರಸಾದ್, ಕೋಟ ಆಗಮನ ಜಿಲ್ಲಾಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷ ಡಾ.ವಿನಯ್ ಬಿ ಗುತ್ತೇದಾರ್ ಗಾರಂಪಳ್ಳಿ ಹೇಳಿಕೆ

ನಾರಾಯಣ ಗುರು ಜಯಂತಿಗೆ ಚಿತ್ರನಟ ವಿಜಯ ರಾಘವೇಂದ್ರ , ಹರಿಪ್ರಸಾದ್, ಕೋಟ ಆಗಮನ  ಜಿಲ್ಲಾಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷ ಡಾ.ವಿನಯ್ ಬಿ ಗುತ್ತೇದಾರ್ ಗಾರಂಪಳ್ಳಿ ಹೇಳಿಕೆ

,ನಾರಾಯಣ ಗುರು ಜಯಂತಿಗೆ ಚಿತ್ರನಟ ವಿಜಯ ರಾಘವೇಂದ್ರ , ಹರಿಪ್ರಸಾದ್, ಕೋಟ ಆಗಮನ

ಜಿಲ್ಲಾಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷ ಡಾ.ವಿನಯ್ ಬಿ ಗುತ್ತೇದಾರ್ ಗಾರಂಪಳ್ಳಿ ಹೇಳಿಕೆ

ಕಲಬುರಗಿ: ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಜಯಂತಿ ಉತ್ಸವವನ್ನು ಈ ಬಾರಿ ಸೆಪ್ಟೆಂಬರ್ 16ರಂದು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದ್ದು ವಿಶೇಷ ಆಕರ್ಷಣೆಯಾಗಿ ಖ್ಯಾತ ಚಲನ ಚಿತ್ರ ನಟರಾದ ವಿಜಯ ರಾಘವೇಂದ್ರ,ಸಮಾಜದ ಹಿರಿಯ ರಾಜಕಾರಣಿಗಳಾದ ಬಿ.ಕೆ ಹರಿಪ್ರಸಾದ್, ಕೋಟ ಶ್ರೀನಿವಾಸ ಪೂಜಾರಿ ಭಾಗವಹಿಸಲು ಒಪ್ಪಿದ್ದಾರೆ ಎಂದು 171ನೇ ನಾರಾಯಣ ಗುರು ಜಯಂತಿ ಉತ್ಸವ ಸಮಿತಿಯ ಜಿಲ್ಲಾಧ್ಯಕ್ಷರಾದ ಡಾ. ವಿನಯ್ ಬಿ ಗುತ್ತೇದಾರ್ ಗಾರಂಪಳ್ಳಿ ತಿಳಿಸಿದರು. ಜಿಲ್ಲಾಧಿಕಾರಿಯವರ ಸಭಾಂಗಣದಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರುಗಳ ಜಯಂತಿ ಆಚರಣೆ ಅಂಗವಾಗಿ ಎರಡನೇ ಬಾರಿ ಸೆಪ್ಟೆಂಬರ್ ಒಂದರಂದು ಜಿಲ್ಲಾಡಳಿತ ವತಿಯಿಂದ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ನಾರಾಯಣ ಗುರು ಜಯಂತಿ ಉತ್ಸವ ರಾಜ್ಯಾದ್ಯಂತ 7ನೇ ತಾರೀಕಿಗೆ ನಡೆಯಲಿದ್ದು ಕಲಬುರಗಿ ಜಿಲ್ಲೆಯಲ್ಲಿ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಸೆಪ್ಟೆಂಬರ್ 16ರಂದು ಆಚರಿಸಲು ನಿರ್ಧರಿಸಲಾಗಿದೆ. ಜಯಂತ್ಯುತ್ಸವವನ್ನು ಅತ್ಯಂತ ಸಂಭ್ರಮ ಹಾಗೂ ಶಿಸ್ತಿನಿಂದ ನಡೆಸಲು ಈ ಬಗ್ಗೆ ಏಳು ವಿವಿಧ ಬೇಡಿಕೆಗಳನ್ನು ಜಿಲ್ಲಾಧಿಕಾರಿಗಳಿಗೆ ತಹಶೀಲ್ದಾರ್ ಉಮಾಕಾಂತ್ ಹಳ್ಳೆ ಮೂಲಕ ಹಸ್ತಾಂತರಿಸಲಾಗಿದೆ. ಜಯಂತ್ಯುತ್ಸವವನ್ನು ವಿವಿಧ ಇಲಾಖೆಗಳ ಸಹಕಾರದೊಂದಿಗೆ ಅಚ್ಚುಕಟ್ಟಾಗಿ ನಡೆಸಲು ಜಿಲ್ಲಾಡಳಿತ ಪೂರ್ಣ ಸಹಕಾರ ನೀಡಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪೊಲೀಸ್, ಮಹಾನಗರ ಪಾಲಿಕೆ, ಆರೋಗ್ಯ ಇಲಾಖೆ ಮತ್ತಿತರ ಇಲಾಖೆಗಳ ಸಹಯೋಗದೊಂದಿಗೆ ಜಯಂತ್ಯುತ್ಸವದ ಜಿಲ್ಲಾ ಸಮಿತಿಗೆ ಪೂರ್ಣ ಸಹಕಾರ ನೀಡಲಾಗುವುದು. ಜಿಲ್ಲಾಧಿಕಾರಿಗಳ ಮಾರ್ಗದರ್ಶನದಂತೆ ಎಲ್ಲವನ್ನು ಸುಗಮವಾಗಿ ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ಈ ಸಂದರ್ಭದಲ್ಲಿ ತಹಶೀಲ್ದಾರ್ ಉಮಾಕಾಂತ ಹಳ್ಳೆ ಸಮಿತಿಯ ಸದಸ್ಯರಿಗೆ ಭರವಸೆ ನೀಡಿದರು. 

171ನೇ ಗುರು ಜಯಂತಿ ಉತ್ಸವವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ ಖರ್ಗೆ ಉದ್ಘಾಟಿಸಲು ಮನವಿ ಮಾಡಿಕೊಳ್ಳಲಾಗುವುದು. ಸಚಿವರಾದ ಡಾ ಶರಣ ಪ್ರಕಾಶ್ ಪಾಟೀಲ್ ವಿಧಾನಪರಿಷತ್ ಸದಸ್ಯರಾದ ಜಗದೇವ ಗುತ್ತೇದಾರ್, ಜಿಲ್ಲೆಯ ಶಾಸಕರು ವಿಧಾನ ಪರಿಷತ್ ಸದಸ್ಯರನ್ನು ಗೌರವಯುತವಾಗಿ ಆಹ್ವಾನಿಸಲಾಗುವುದು. ಈಡಿಗ ಸಮಾಜದ ಗುರುಗಳಾದ ಡಾ. ಪ್ರಣವಾನಂದ ಶ್ರೀಗಳ ನೇತೃತ್ವದಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ವಿವಿಧ ಸಮಾಜದ ಪೂಜ್ಯ ಗುರುಗಳನ್ನು ಆಹ್ವಾನಿಸಲಾಗುವುದು ಎಂದು ಡಾ. ವಿನಯ್ ಗುತ್ತೇದಾರ ಗಾರಂಪಳ್ಳಿ ತಿಳಿಸಿದರು.ಸರ್ದಾರ್ ಪಟೇಲ್ ವೃತ್ತದಿಂದ ಆರಂಭವಾಗುವ ಮೆರವಣಿಗೆಯಲ್ಲಿ ಈ ಬಾರಿ ಬ್ರಹ್ಮಶ್ರೀ ನಾರಾಯಣ ಗುರುಗಳ ನೂತನವಾದ ಭವ್ಯ ಮೂರ್ತಿಯನ್ನು ಕಲಶ ಪೂರ್ಣಕುಂಭದೊಂದಿಗೆ ಕರಾವಳಿಯ ವಿಶೇಷ ಸಾಂಸ್ಕೃತಿಕ ತಂಡ ಉಡುಪಿಯ ಚೆಂಡೆ ಬಳಗದೊಂದಿಗೆ ಕರೆತರಲಾಗುವುದು.ಭಜನಾ ತಂಡ , ಸಮಾಜದ ಹಿರಿಯ ಮುಖಂಡರಾದ ಮಾಲೀಕಯ್ಯ ಗುತ್ತೇದಾರ್ ಮತ್ತು ಸುಭಾಷ್ ಆರ್ ಗುತ್ತೇದಾರ್ ಭವ್ಯ ಶೋಭಾಯಾತ್ರೆಗೆ ಚಾಲನೆ ನೀಡಲಿದ್ದಾರೆ ಎಂದರು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ವೆಂಕಟೇಶ್ ಕಡೇಚೂರ್, ಜಯಂತಿ ಉತ್ಸವ ಸಮಿತಿಯ ಉಪಾಧ್ಯಕ್ಷರಾದ ಶಿವರಾಜ್ ಗುತ್ತೇದಾರ್ ಜೇವರ್ಗಿ, ಕಾರ್ಯದರ್ಶಿಗಳಾದ ಜಗದೇವ ಗುತ್ತೇದಾರ್ ಕಲ್ಬೇನೂರು, ಕೋಶಾಧಿಕಾರಿ ಮಲ್ಲಿಕಾರ್ಜುನ್ ಕುಕ್ಕುಂದ, ಸಮಿತಿಯ ಸದಸ್ಯರಾದ ಮಹೇಶ್ ಹೋಳಕುಂದ, ಅಂಬಯ್ಯ ಗುತ್ತೇದಾರ್ ಶಾಬಾದಿ, ಬಸಯ್ಯ ಗುತ್ತೇದಾರ ತೆಲ್ಲೂರು, ಮಹೇಶ್ ಯರಗೋಳ,ಆನಂದ ಗುತ್ತೇದಾರ್,

ಸಾಗರ್ ಗುತ್ತೇದಾರ್ ಸಮಾಜದ ಯುವ ಮುಖಂಡರು ಹಾಗೂ ಜಿಲ್ಲೆಯ ಈಡಿಗ ಸಮಿತಿ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.