ಸೀತನೂರ ಗ್ರಾಮದ ಯುವ ಪೀಳಿಗೆ ಸರಾಯಿ, ಮಾದಕ ವ್ಯಸನಗಳು ತಡೆಯಲು ಡಿ.ಸಿ.ಗೆ ವಳಕೇರಿ ಮನವಿ

ಸೀತನೂರ ಗ್ರಾಮದ ಯುವ ಪೀಳಿಗೆ ಸರಾಯಿ, ಮಾದಕ ವ್ಯಸನಗಳು ತಡೆಯಲು ಡಿ.ಸಿ.ಗೆ ವಳಕೇರಿ ಮನವಿ

ಸೀತನೂರ ಗ್ರಾಮದ ಯುವ ಪೀಳಿಗೆ ಸರಾಯಿ, ಮಾದಕ ವ್ಯಸನಗಳು ತಡೆಯಲು ಡಿ.ಸಿ.ಗೆ ವಳಕೇರಿ ಮನವಿ 

 ಕಲಬುರಗಿ : ನಗರದ ಹೊರವಲಯದ ಸೀತನೂರು ಗ್ರಾಮದಲ್ಲಿ ಸರಾಯಿ ಹಾಗೂ ವ್ಯಸನಗಳ ಮಾದಕ ವಸ್ತುಗಳು ರಾಜ ರೋಷವಾಗಿ ಮಾರಾಟ ಮಾಡುತ್ತಿದ್ದು ಅದನ್ನು ತಡೆಯಲು ಡಿ.ಸಿ.ಅವರಿಗೆ ವಳಕೇರಿ ಮನವಿ ಸಲ್ಲಿಸಿದರು.

ಇಂದು ಸೀತನೂರ ಗ್ರಾಮದ ಮುಖಂಡರು ಜೋತೆಗೂಡಿ ಕಲಬುರಗಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ.

ಗ್ರಾಮದ ಯುವ ಪಿಳಗೆಗಳು ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ. ದುಶ್ಚಟಕ್ಕಾಗಿ ಹಣಕ್ಕೋಸ್ಕರ ತಂದೆ ತಾಯಿಗಳಿಗೆ ಪಿಡಿಸುತ್ತಿದ್ದಾರೆ. ಹಣ ಕೊಡದೆ ಇದ್ದರೆ ತಂದೆ ತಾಯಿಗೆ ಹಲ್ಲೆ ಮಾಡುತ್ತಿದ್ದಾರೆ. ನಶೆಯಲ್ಲಿ ತಪ್ಪು ದಾರಿ ತುಳಿಯುವುದು ಇದರಿಂದಾಗಿ ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ ಎಂದರು 

 ಸೀತನೂರ ಗ್ರಾಮದಲ್ಲಿ ಸಾರಾಯಿ ಮಾದಕ ವಸ್ತು ನಿರಂತರ ಹಗಲು-ರಾತ್ರಿ ಚಿಕ್ಕ ಚಿಕ್ಕ ಅಂಗಡಿಯಲ್ಲೂ ಮಾರಾಟ ಮಾಡುತ್ತಿದ್ದು ಇದರಿಂದ ಯುವಕರು ಕಾಲೇಜಿಗೆ ಮತ್ತು ಕೂಲಿ ಕಾರ್ಮಿಕರು ಕೆಲಸ ಬಿಟ್ಟು ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ. ಸದರಿ ಗ್ರಾಮದಲ್ಲಿ ಅಧಿಕೃತವಾಗಿ ವೈನ್ ಶಾಪ್ ಅಥವಾ ಎಂ ಎಸ್ ಐ ಎಲ್ ಸನ್ನದ್ಧರು ಇರುವುದಿಲ್ಲ. ಅನಧಿಕೃತ ಮಾರಾಟ ಮಾಡುವರಿಗೆ ಕೂಡಲೇ ಕಠಿಣವಾದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪವನಕುಮಾರ ಬಿ ವಳಕೇರಿ ನೇತೃತ್ವ ಗ್ರಾಮ ಪಂಚಾಯತಿ ಸದಸ್ಯರು ಗ್ರಾಮಸ್ಥರಾದ .ಶ್ರೀ ಪ್ರಭುಸ್ವಾಮಿ ಸ್ಥಾವರಮಠ, ಶ್ರೀ ಅಮೀರ್ ಪಟೇಲ ಮಾಲಿ, ಬಾಬುರಾವ ಪೊ ಪಾಟೀಲ, ರಾಶಿದ ಮೋಜನ್ , ಅಭುಬಕಾರ ನದಿಮಸಾಬ ಸದಸ್ಯರು ಗ್ರಾ. ಪಂ. ನಂದಿಕೂರ್,ಪೀರಸಾಬ ಜಮಾದಾರ್, ಲಾಯಕ ಅಲಿ ಹಡಗಿಲ.ಉಪಸ್ಥಿತರು