ಆಳಂದ || ತಾಲೂಕ ಮಟ್ಟದ ಕ್ರೀಡಾಕೂಟಕ್ಕೆ ಭರ್ಜರಿ ಚಾಲನೆ

ಆಳಂದ || ತಾಲೂಕ ಮಟ್ಟದ ಕ್ರೀಡಾಕೂಟಕ್ಕೆ ಭರ್ಜರಿ ಚಾಲನೆ

ಆಳಂದ ತಾಲೂಕ ಮಟ್ಟದ ಕ್ರೀಡಾಕೂಟಕ್ಕೆ ಭರ್ಜರಿ ಚಾಲನೆ

ಆಳಂದ ಪಟ್ಟಣದ ಮಟಕಿ ರಸ್ತೆಯಲ್ಲಿರುವ ತಾಲೂಕಾ ಕ್ರೀಡಾಂಗಣದಲ್ಲಿ ತಾಲೂಕ ಮಟ್ಟದ ಕ್ರೀಡಾಕೂಟವು ಇಂದು ವಿಜೃಂಭಣೆಯಿಂದ ಆರಂಭಗೊಂಡಿತು. ಪುರಸಭೆ ಉಪಾಧ್ಯಕ್ಷೆ ಕವಿತಾ ಸಂಜಯ್ ನಾಯಕ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಾನಪ್ಪ ಕಟ್ಟಿಮನಿ, ಕ್ಷೇತ್ರ ಶಿಕ್ಷಣಾಧಿಕಾರಿ ವಿ. ರಂಗಸ್ವಾಮಿ ಶೆಟ್ಟಿ, ದೈಹಿಕ ಶಿಕ್ಷಣಾಧಿಕಾರಿ ಅರವಿಂದ್ ಭಾಸಗಿ ರಾಜ್ಯ ಸರ್ಕಾರಿ ನೌಕರ ಸಂಘದ ತಾಲೂಕ ಅಧ್ಯಕ್ಷ ಸತೀಶ್ ಸನ್ಮುಖ ಶಿಕ್ಷಕರ ಸಂಘದ ಮರೆಪ್ಪ ಬಡಿಗೇರ್, ಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲಿನಾಥ್ ಖಜೂರ್ಗಿ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ದತ್ತ ಬಡಿಗೇರ್, ಚಂದ್ರಶೇಖರ್ ಪೂಜಾರಿ, ಶಿವಬಸಪ್ಪ , ಮಹಾದೇವ ಗುಣ್ಕಿ, ಚಂದ್ರಕಾಂತ್ ಕಾಂಬಳೆ, ಮನೋಹರ ಟೋಕೆ ಸೇರಿದಂತೆ ತಾಲೂಕಿನ ವಿವಿಧ ಶಾಲೆಗಳ ದೈಹಿಕ ಶಿಕ್ಷಕರು, ಶಿಕ್ಷಕಿಯರು ಹಾಗೂ ಕ್ರೀಡಾಪಟುಗಳು ಉಪಸ್ಥಿತರಿದ್ದರು. ಜಿಡಗಾಶಾಲೆಯ ವಿದ್ಯಾರ್ಥಿಗಳಿಂದ ಪಥಸಂಚಲನ ಮಾಡಲಾಯಿತು ಈ ಸಂದರ್ಭದಲ್ಲಿ ಖಜೂರಿಯ ಯುವ ಮುಖಂಡ ಕಿರಣ್ ಬಂಗರ ಗೆ ಯವರನ್ನು ಸನ್ಮಾನಿಸಲಾಯಿತು

ಕಾರ್ಯಕ್ರಮವನ್ನು ದೈಹಿಕ ಶಿಕ್ಷಣ ಶಿಕ್ಷಕ ಶರಣಬಸಪ್ಪ ವಡಗಾವ್ ನಿರೂಪಿಸಿದರೆ, ಸತೀಶ್ ಕೋಗನೂರ್ ಸ್ವಾಗತಿಸಿದರು. ಉದ್ಘಾಟನೆಯ ಬಳಿಕ ವಿವಿಧ ಕ್ರೀಡಾ ಸ್ಪರ್ಧೆಗಳು ಆರಂಭಗೊಂಡವು. ಕ್ರೀಡಾಕೂಟದಲ್ಲಿ ತಾಲೂಕಿನ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು.

ವರದಿ ಡಾ . ಅವಿನಾಶ S ದೇವನೂರ