ನ.೨೧ ರಂದು ಜೇರಟಗಿಯಲ್ಲಿ ಶ್ರೀ ರೇವಣಸಿದ್ದೇಶ್ವರ ರಥೋತ್ಸವ

ನ.೨೧ ರಂದು ಜೇರಟಗಿಯಲ್ಲಿ ಶ್ರೀ ರೇವಣಸಿದ್ದೇಶ್ವರ ರಥೋತ್ಸವ

ನ.೨೧ ರಂದು ಜೇರಟಗಿಯಲ್ಲಿ ಶ್ರೀ ರೇವಣಸಿದ್ದೇಶ್ವರ ರಥೋತ್ಸವ

ಕಲಬುರಗಿ: ಜೇವರ್ಗಿ ತಾಲೂಕಿನ ಸುಕ್ಷೇತ್ರ ಮರಿಕಲ್ಯಾಣವೆಂದೆ ಹೆಸರಾದ ಜೇರಟಗಿ ಗ್ರಾಮದಲ್ಲಿ ಜಗದ್ಗುರು ಶ್ರೀ ರೇವಣಸಿದ್ದೇಶ್ವರ ಹಾಗೂ ಶ್ರೀ ಚನ್ನಬಸವೇಶ್ವರ ಜಾತ್ರಾ ಮಹೋತ್ಸವ ಮತ್ತು ಭವ್ಯರಥೋತ್ಸವ ಜರುಗಲಿದೆ.

 ನಿರಂತರ೧೫ ದಿನಗಳಿಂದ ನಡೆದು ಬಂದ ಶ್ರೀ ರೇವಣಸಿದ್ದೇಶ್ವರ ಹಾಗೂ ಶಿವಯೋಗಿ ಶ್ರೀ ಸಿದ್ದರಾಮೇಶ್ವರಮಹಾಪುರಾಣವು ಶ್ರೀ ಬಸವರಾಜ್ ಶಿವಬಸಪ್ಪ ಪುರಾಣಿಕ ಇವರ ಭಕ್ತಿಭಿನ್ನ ಗಣರಾಧನೆಯೊಂದಿಗೆ ಪ್ರಾರಂಭವಾಗುವುದು.

ನವೇAಬರ್ ೨೦ರಂದು ಬುಧವಾರ ಶ್ರೀ ಅಣ್ಣಾರಾವ್ ಅಮರಪ್ಪ ನಿಷ್ಟಿ ದೇಶಮುಖ್ ಇವರ ಜಂಗಮ ಗಣಾರಾಧನೆಯೊಂದಿಗೆ( ಕಾಂಡ ) ಪುರಾಣವು ಮಹಾಮಂಗಳಗೊಳ್ಳುವುದು. ಅದೇ ದಿನ ಸಾಯಂಕಾಲ ೫ ಗಂಟೆಗೆ ಚಮ್ಮಾವುಗೆ ಮೆರವಣಿಗೆಯೊಂದಿಗೆ ಶ್ರೀ ರೇವಣಸಿದ್ದೇಶ್ವರ ದೇವಾಲಯಕ್ಕೆ ಆಗಮಿಸುವವವು. ೨೧ರಂದು ಗುರುವಾರ ಬೆಳಿಗ್ಗೆ ೫ ಗಂಟೆಗೆ ಪುರವಂತಿಗೆ ಸೇವೆಯೊಂದಿಗೆ ದೇವರ ಬೆಟ್ಟಿ ಕಾರ್ಯಕ್ರಮ ನಡೆಯುವುದು.

 ಸಾಯಂಕಾಲ ೪ ಗಂಟೆಗೆ ಶ್ರೀ ಅಣ್ಣರಾವ್ ನಿಫ್ಟಿ ದೇಶಮುಖ್ ಇವರ ಮನೆಯಿಂದ ಸ್ವರ್ಣ ಲೇಪಿತ ಕಳಸದ ಭವ್ಯ ಮೆರವಣಿಗೆಯು ಆಗಮಿಸಿದ ನಂತರ ಸಾಯಂಕಾಲ ೫:೦೦ ಗಂಟೆಗೆ ಶ್ರೀ ರೇವಣಸಿದ್ದೇಶ್ವರರ ಭವ್ಯ ರಥೋತ್ಸವವು ಜರಗುವದು.

 ರಥೋತ್ಸವದ ನಂತರ ಶಾಲಾ ಮಕ್ಕಳಿಂದ ಲೇಜಿಮ್ ಆಡುವುದು, ರಂಗು ರಂಗಿನ ಮದ್ದು ಸುಡುವುದು, ರಾತ್ರಿ ಮಹಿಷಾಸುರ ಮರ್ಧನಿ ಪೌರಾಣಿಕ ಬಯಲಾಟ ಹಾಗೂ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳಾದ ನಂದಿ ಕೋಲಾಟ, ಗೀಗಿ ಪದ, ಭಜನೆ ಹಾಗೂ ಇನ್ನಿತರ ಕಾರ್ಯಕ್ರಮಗಳು ಜರಗುವವು ಎಂದು ಶ್ರೀ ರೇವಣ ಸಿದ್ದೇಶ್ವರ ಹಾಗೂ ಶ್ರೀ ಚನ್ನಬಸವೇಶ್ವರ ಜಾತ್ರಾ ಕಮಿಟಿ ಹಾಗೂ ಸಮಸ್ತ ಸದ್ಭಕ್ತ ಮಂಡಳಿಯ ವತಿಯಿಂದ ಕಮಿಟಿಯ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಪುರದಾಳ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

.