ಜಗದೇವಿ ಅನಿಸಿಕೆ |ಶಹಾಬಾದ್‌ನಲ್ಲಿ ಮಹಾಶಿವರಾತ್ರಿ ಉತ್ಸವ ಒಳ್ಳೆಯ ವಿಚಾರ ಪರಿಶುದ್ಧ ಭಕ್ತಿಯಿರಲಿ

ಜಗದೇವಿ ಅನಿಸಿಕೆ |ಶಹಾಬಾದ್‌ನಲ್ಲಿ ಮಹಾಶಿವರಾತ್ರಿ ಉತ್ಸವ ಒಳ್ಳೆಯ ವಿಚಾರ ಪರಿಶುದ್ಧ ಭಕ್ತಿಯಿರಲಿ

ಜಗದೇವಿ ಅನಿಸಿಕೆ |ಶಹಾಬಾದ್‌ನಲ್ಲಿ ಮಹಾಶಿವರಾತ್ರಿ ಉತ್ಸವ ಒಳ್ಳೆಯ ವಿಚಾರ ಪರಿಶುದ್ಧ ಭಕ್ತಿಯಿರಲಿ

 ಶಹಾಬಾದ್ ನಾವು ಯೋಚಿಸಿದಂತೆ ಆಗಬೇಕಾದರೆ ಒಳ್ಳೆಯ ವಿಚಾರಗಳನ್ನು ಮಾಡಬೇಕು. ಪರಿಶುದ್ಧ ಸಂಕಲ್ಪ ನಮ್ಮನ್ನು ದೇವ ಮಾನವರನ್ನಾಗಿ ಮಾಡುತ್ತದೆ ಎಂದು ಬ್ರಹ್ಮಕುಮಾರೀಸ್ ರಾಜಯೋಗ ಶಿಕ್ಷಣ ಕೇಂದ್ರದ ವಿಭಾಗೀಯ ನಿರ್ದೇಶಕಿ ರಾಜಯೋಗಿನ ಜಗದೇವಿ ಹೇಳಿದರು.

ಲಕ್ಷ್ಮೀ ಗಂಜ್ ಪ್ರದೇಶದ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಹಾಶಿವರಾತ್ರಿ ಮಹೋತ್ಸವದಲ್ಲಿ ಮಾತನಾಡಿ, ಶಿವರಾತ್ರಿ ಎಂದರೆ, ಶಿವನ ಅವತರಣಿಕೆಯ ದಿನವಾಗಿದ್ದು, ನಾವು ಮಾಡುವ ಒಳ್ಳೆಯ ಕೆಲಸ, ಪುಣ್ಯದ ಕಾರ್ಯಗಳು ನಮ್ಮೊಂದಿಗೆ ಇರುತ್ತದೆ. ಸೇವಿಸುವ ಆಹಾರವೂ ನಮ್ಮ ಮೇಲೆ ಪರಿಣಾಮ ಬೀರುತ್ತದೆ ಎಂದರು.

ರಾವೂರಿನ ಶ್ರೀ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಯೋಗ, ದ್ಯಾನದಿಂದ ನಮ್ಮಲ್ಲಿ ಏಕಾಗ್ರತೆ, ಜ್ಞಾಪಕ ಶಕ್ತಿ ಹೆಚ್ಚುತ್ತದೆ. ಮಕ್ಕಳಿಗೆ ಇದು ಅವಶ್ಯಕವಾಗಿದ್ದು, ಸಂಪತ್ತಿನಿಂದ ಬದುಕುವುದಕ್ಕಿಂದ ಸಂಸ್ಕೃತಿಯಿಂದ ಬದುಕುವದು ಮುಖ್ಯವಾಗಿದೆ ಎಂದು ಹೇಳಿದರು.

ಡಿವೈಎಸ್‌ಪಿ ಶಂಕರಗೌಡ ಪಾಟೀಲ್ ಮಾತನಾಡಿದರು. ಪ್ರಮುಖರಾದ ನರೇಂದ್ರ ವರ್ಮಾ, ಶರಣಬಸಪ್ಪ ನಂದಿ, ಸೂರ್ಯಕಾಂತ ಕೋಬಾಳ, ಮಹಾಲಿಂಗಪ್ಪ ಇಂಗಿನಶೆಟ್ಟಿ, ಶ್ರೀಶೈಲಪ್ಪ ಅವಂಟಿ, ರವಿ ಅಲ್ಲಮಶೆಟ್ಟಿ, ಬಿ.ಕೆ.ದಶರಥ, ಅಮೃತ ಮಾನಕರ್, ಪ್ರಕಾಶ ಕೋಸಗಿಕರ್ ಇತರರಿದ್ದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಶಹಾಬಾದ್‌ನಲ್ಲಿ ಹಮ್ಮಿಕೊಂಡಿದ್ದ ಮಹಾಶಿವರಾತ್ರಿ ಉತ್ಸವದಲ್ಲಿ ರಾಜಯೋಗಿನಿ ಜಗದೇವಿ ಮಾತನಾಡಿದರು. ಶ್ರೀ ಸಿದ್ಧಲಿಂಗ ಸ್ವಾಮೀಜಿ, ಶಂಕರಗೌಡ ಪಾಟೀಲ್, ನರೇಂದ್ರ ವರ್ಮಾ, ಶರಣಬಸಪ್ಪ ನಂದಿ, ಸೂರ್ಯಕಾಂತ ಕೋಬಾಳ ಇದ್ದರು.

ಶಹಾಬಾದ್ ವರದಿ:- ನಾಗರಾಜ್ ದಂಡಾವತಿ