ಮೇಳಕುಂದ (ಬಿ) ಗ್ರಾಮದ ಅವಮರ್ಯಾದಾ ಹತ್ಯೆ – ಪ್ರಗತಿಪರ ಸಂಘಟನೆಗಳ ಒಕ್ಕೂಟ ಖಂಡನೆ

ಮೇಳಕುಂದ (ಬಿ) ಗ್ರಾಮದ ಅವಮರ್ಯಾದಾ ಹತ್ಯೆ – ಪ್ರಗತಿಪರ ಸಂಘಟನೆಗಳ ಒಕ್ಕೂಟ ಖಂಡನೆ

ಮೇಳಕುಂದ (ಬಿ) ಗ್ರಾಮದ ಅವಮರ್ಯಾದಾ ಹತ್ಯೆ – ಪ್ರಗತಿಪರ ಸಂಘಟನೆಗಳ ಒಕ್ಕೂಟ ಖಂಡನೆ

ಕಲಬುರಗಿ : ಜಿಲ್ಲೆಯ ಮೇಳಕುಂದ (ಬಿ) ಗ್ರಾಮದಲ್ಲಿ ನಡೆದ ಅವಮರ್ಯಾದಾ ಹತ್ಯೆಯನ್ನು ಪ್ರಗತಿಪರ ಸಂಘಟನೆಗಳ ಒಕ್ಕೂಟವು ತೀವ್ರವಾಗಿ ಖಂಡಿಸಿದೆ. ಲಿಂಗಾಯತ ಸಮುದಾಯದ ಶಂಕರ ಕೊಳ್ಳೂರ ತನ್ನ ಮಗಳು ಕವಿತಾ (18) ಯನ್ನು ಅನ್ಯ ಸಮುದಾಯದ ಯುವಕನನ್ನು ಪ್ರೀತಿಸಿದ್ದಕ್ಕಾಗಿ ಸಂಬಂಧಿಕರಾದ ಶರಣು ಮತ್ತು ದತ್ತು ಅವರ ನೆರವಿನಿಂದ ಕೊಂದು ಸುಟ್ಟು ಹಾಕಿದ ದಾರುಣ ಘಟನೆ ನಡೆದಿದೆ ಎಂದು ಪೋಲಿಸರು ವರದಿ ಮಾಡಿದ್ದಾರೆ.

ಈ ಕ್ರೂರ ಘಟನೆಯು ಕನ್ನಡ ನಾಡಿನ ಮಾನವೀಯ ಪರಂಪರೆಯ ಮೇಲೆ ಕಳಂಕ ಎರೆದಿದೆ ಎಂದು ಸಂಘಟನೆಗಳ ಒಕ್ಕೂಟ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ವಚನ ಚಳುವಳಿ ಆರಂಭಿಸಿದ ಜಾತಿ ವಿರೋಧಿ ಹೋರಾಟವನ್ನು ಸ್ಮರಿಸಿಕೊಂಡು, ಇಂತಹ ಜಾತ್ಯಂಧ ಕ್ರೂರ ಕೃತ್ಯಗಳಿಗೆ ಸಮಾಜ ಒಗ್ಗಟ್ಟಿನಿಂದ ತಡೆಗಟ್ಟಬೇಕು ಎಂದು ಒಕ್ಕೂಟ ಆಗ್ರಹಿಸಿದೆ.

ಒಕ್ಕೂಟದ ಮುಖ್ಯ ಬೇಡಿಕೆಗಳು:

* ಶಂಕರ ಕೊಳ್ಳೂರ, ಶರಣು, ದತ್ತು ಸೇರಿದಂತೆ ಈ ದುಷ್ಕೃತ್ಯದಲ್ಲಿ ತೊಡಗಿಸಿಕೊಂಡ ಎಲ್ಲಾ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಬೇಕು.

* ಅವಮರ್ಯಾದಾ ಹತ್ಯೆ ತಡೆಗಟ್ಟಲು ವಿಶೇಷ ಕಾಯ್ದೆಯನ್ನು ರೂಪಿಸಿ ಜಾರಿಗೊಳಿಸಬೇಕು.

* ಯುವಜನತೆಗೆ ಪ್ರಜಾಪ್ರಭುತ್ವದ ಮನೋಭಾವ ಬೆಳೆಸುವಂತೆ ಕುಟುಂಬ ಹಾಗೂ ಸಮಾಜದಲ್ಲಿ ಜಾಗೃತಿ ಮೂಡಿಸಬೇಕು.

* ಜಾತಿ ತಾರತಮ್ಯ ನಿವಾರಣೆಗೆ ಮತ್ತು ದೌರ್ಜನ್ಯಗಳ ತಡೆಗೆ ಸರ್ಕಾರ ಗಂಭೀರ ಕ್ರಮ ವಹಿಸಬೇಕು.

ಈ ಖಂಡನಾ ಪತ್ರಕ್ಕೆ ಪ್ರಜ್ಞಾ ಕಾನೂನು ಸಲಹಾ ಸಮಿತಿ, ಜೆಎಂಎಸ್, ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್, ದೇವದಾಸಿ ವಿಮೋಚನಾ ಸಂಘಟನೆ, ಎಸ್‌ಎಫ್‌ಐ, ದಲಿತ ಹಕ್ಕುಗಳ ಸಮಿತಿ, ಕಟ್ಟಡ ಕಾರ್ಮಿಕರ ಸಂಘಟನೆ ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿ ಸೇರಿದಂತೆ ಹಲವು ಸಂಘಟನೆಗಳ ನಾಯಕರು ಸಹಿ ಹಾಕಿದ್ದಾರೆ.

-