ಕ.ಸಂ.ಇ.ಸಾಹಿತಿ, ಕಲಾವಿದರಿಗೆ ಮಾಸಾಶನ ಮಂಜೂರು ಆಯ್ಕೆ ಸಮಿತಿಗೆ ಬಾಬುರಾವ ಕೋಬಾಳ ನೇಮಕ

ಕ.ಸಂ.ಇ.ಸಾಹಿತಿ, ಕಲಾವಿದರಿಗೆ ಮಾಸಾಶನ ಮಂಜೂರು ಆಯ್ಕೆ ಸಮಿತಿಗೆ  ಬಾಬುರಾವ ಕೋಬಾಳ  ನೇಮಕ

 ಕ.ಸಂ.ಇ.ಸಾಹಿತಿ, ಕಲಾವಿದರಿಗೆ ಮಾಸಾಶನ ಮಂಜೂರು ಆಯ್ಕೆ ಸಮಿತಿಗೆ ಬಾಬುರಾವ ಕೋಬಾಳ ನೇಮಕ

ಕಲಬುರಗಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಾಹಿತಿ, ಕಲಾವಿದರಿಗೆ ಮಾಸಾಶನ ಮಂಜೂರು ಮಾಡುವ ರಾಜ್ಯಮಟ್ಟದ ಆಯ್ಕೆ ಸಮಿತಿ ಸದಸ್ಯರನ್ನಾಗಿ ಕಲಬುರಗಿಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಆಕಾಶವಾಣಿ, ಸಂಗೀತ ಕಲಾವಿದ ಬಾಬುರಾವ ಕೋಬಾಳ್ ಅವರನ್ನು ನೇಮಕ ಮಾಡಿ ಆದೇಶಿಸಲಾಗಿದೆ.

ಬಾಬುರಾವ ಕೋಬಾಳ ಅವರ ಸಂಗೀತ, ಜಾನಪದ ಕ್ಷೇತ್ರಗಳಲ್ಲಿನ ಗಣನೀಯ ಸೇವೆ, ಸೇವಾ ಹಿರಿತನ ಪರಿಗಣಿಸಿ ಅಪ್ಪಗೆರೆ ತಿಮ್ಮರಾಜುರವರ ಅಧ್ಯಕ್ಷತೆಯ ಕಮೀಟಿಗೆ ಒಂದು ವರ್ಷದ ಅವಧಿಗಾಗಿ ರಾಜ್ಯಮಟ್ಟದ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರು ಆದೇಶಿಸಿದ್ದಾರೆ.

ಸಂತಸ: ಸಂಗೀತ ಮತ್ತು ಜಾನಪದ ಕ್ಷೇತ್ರದಲ್ಲಿ ಅವಿರತವಾಗಿ ಶ್ರಮವಹಿಸಿ ಮಾಡಿರುವ ಸೇವೆ ಗುರುತಿಸಿ ಆಯ್ಕೆ ಮಾಡಿದ್ದಕ್ಕೆ ಸರ್ಕಾರದ ನಿರ್ಧಾರ ಸ್ವಾಗತಾರ್ಹ, ತಮ್ಮ ಅವಧಿಯಲ್ಲಿ ಅರ್ಹ, ಯೋಗ್ಯ ಮತ್ತು ಕಡುಬಡ ಕಲಾವಿದರನ್ನು ಗುರುತಿಸಿ ಮಾಸಾಶನ ಮಂಜೂರು ಮಾಡಿಸುವ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸುವೆ. ಸದ್ಯ ೬೦ ವರ್ಷ ವಯಸ್ಸುಳ್ಳ ಕಲಾವಿದರನ್ನು ಮಾಸಾಶನ ಮಂಜೂರು ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ೫0 ವರ್ಷ ದಾಟಿದ ಅರ್ಹರನ್ನು ಗುರುತಿಸಿ ಸದ್ಯ ಎರಡು ಸಾವಿರ ರೂ.ದಿಂದ ಮಾಸಾಶನವನ್ನು ಐದು ಸಾವಿರಕ್ಕೆ ಹೆಚ್ಚಿಸುವ ಬಗ್ಗೆ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದ್ದಾರೆ. ಇವರ ಆಯ್ಕೆಗೆ ಪಂಚಪೀಠದ ವಾರ್ತಾಧಿಕಾರಿ ಸಿದ್ರಾಮಪ್ಪ ಆಲಗೂಡಕರ್, ಕಲಾವಿದರಾದ ಬಸಯ್ಯ ಗುತ್ತೇದಾರ್, ಬಲಭೀಮ ನೇಲೋಗಿ, ನಾಗಲಿಂಗಯ್ಯ ಸ್ಥಾವರಮಠ ಸೇರಿ ಹಿರಿಯ ಕಿರಿಯ ಕಲಾವಿದರು ಹರ್ಷ ವ್ಯಕ್ತಪಡಿಸಿದ್ದಾರೆ.