ಮಕ್ಕಳಲ್ಲಿರುವ ಕಲಾಪ್ರತಿಭೆಯನ್ನು ಗುರುತಿಸಿ - ಕಾವೇರಿ

ಮಕ್ಕಳಲ್ಲಿರುವ ಕಲಾಪ್ರತಿಭೆಯನ್ನು ಗುರುತಿಸಿ - ಕಾವೇರಿ

ಮಕ್ಕಳಲ್ಲಿರುವ ಕಲಾಪ್ರತಿಭೆಯನ್ನು ಗುರುತಿಸಿ - ಕಾವೇರಿ

ಕಲಬುರಗಿ : ಮಕ್ಕಳಲ್ಲಿರುವ ಕಲಾಪ್ರತಿಭೆಯನ್ನು ಗುರುತಿಸಿ, ವೇದಿಕೆ ಕಲ್ಪಿಸಿ ಕೊಡುವುದರ ಜೊತೆಗೆ,ಕಲೆಯನ್ನು ಪ್ರೋತ್ಸಾಹಿಸಿ ಇಂದಿನ ಯುವ ಸಮೂಹಕ್ಕೆ ಸಾಂಸ್ಕೃತಿಕ ಜಾಗೃತಿ ಮೂಡಿಸುವುದು ಅತ್ಯವಶ್ಯಕವಾಗಿದೆ ಎಂದು ನಗರದ ಸಮಾಜ ಸೇವಕಿ ಕಾವೇರಿ ತಿವಾರಿ ಹೇಳಿದರು.

ಪಟ್ಟಣದ ಜಯತೀರ್ಥ ನಗರದ ಹನುಮಂತಪ್ಪ ಸಭಾ ಭವನದಲ್ಲಿ ಸರ್ವಶಿವ ನೃತ್ಯ ಕಲಾ ಸಂಸ್ಥೆ ವತಿಯಿಂದ ಶನಿವಾರ ಸಾಯಂಕಾಲ ಆಯೋಜಿಸಿದ ಕಲೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ,ಕಲಾ ಪ್ರತಿಭೆಯನ್ನು ವಿಸ್ತರಿಸುವುದರ ಜೊತೆಗೆ ಕಲಾತ್ಮಕ ಅಭಿವ್ಯಕ್ತಿಗಳನ್ನು ಪ್ರದರ್ಶಿಸುವ ಮುಖ್ಯ ವೇದಿಕೆಯಾಗಬೇಕಾಗಿದೆ ಎಂದು ಅಭಿಪ್ರಾಯ ತಮ್ಮ ವ್ಯಕ್ತಪಡಿಸಿದರು.

ಮಕ್ಕಳಿಗೆ ಉತ್ತಮ ಸಂಸ್ಕಾರದ ಜೊತೆಗೆ ಸಾಂಪ್ರದಾಯಿಕ ಜಾನಪದ ಮತ್ತು ಶಾಸ್ತ್ರೀಯ ಕಲೆಗಳಾದ ನೃತ್ಯ,ಸಂಗೀತ,ನಾಟಕ ಇನ್ನಿತರ ಹವ್ಯಾಸಗಳ ಅಭಿರುಚಿ ಬೆಳೆಸಬೇಕಾಗಿದೆ ಎಂದು ಡಿ ಜೋನ್ ನೃತ್ಯ ಅಕಾಡೆಮಿಯ ಅಧ್ಯಕ್ಷೆ ಲಕ್ಷ್ಮಿ ಕುಂಬಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಈ ಸಮಾರಂಭದ ವೇದಿಕೆಯ ಮೇಲೆ ಗುರುದೇವಿ ನೃತ್ಯ ಸಂಸ್ಥೆಯ ಅಧ್ಯಕ್ಷರಾದ ಸಂಗೀತಾ,ರೇಖಾ ಕಲಬುರಗಿ ಸೇರಿದಂತೆ ಇನ್ನಿತರರು ಉಪಸಿತರಿದ್ದರು ಸಂಸ್ಥೆಯ ಅಧ್ಯಕ್ಷರಾದ ಕುಮಾರಿ ಕಾಳಿಕಾ ದುರ್ಗ ಪ್ರಾಸ್ತಾವಿಕ ಮಾತುಗಳನ್ನಾಡಿ ಕಾರ್ಯಕ್ರಮದ ಮುಖ್ಯ ತಿಥಿಗಳಾದ ಸರ್ವರನ್ನು ಸ್ವಾಗತಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಸರ್ವಶಿವ ನೃತ್ಯ ಸಂಸ್ಥೆ ವತಿಯಿಂದ ಸಮೂಹ ಭರತನಾಟ್ಯ,ಸಮೂಹ ಜನಪದ ನೃತ್ಯ,ಟಿನೆಟ್ ಡ್ಯಾನ್ಸ್ ಅಕಾಡೆಮಿ ವತಿಯಿಂದ ನೃತ್ಯ ರೂಪಕಗಳು,ಡಿ ಜೋನ್ ನೃತ್ಯ ಅಕಾಡೆಮಿ ಸಮೂಹ ಭರತನಾಟ್ಯ ಸೇರಿದಂತೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.