ಉಚಿತ ಲಘು ವಾಹನ ಚಾಲನೆ ತರಬೇತಿಗೆ ಅರ್ಜಿಗಳ ಆಹ್ವಾನ

ಉಚಿತ ಲಘು ವಾಹನ ಚಾಲನೆ ತರಬೇತಿಗೆ ಅರ್ಜಿಗಳ ಆಹ್ವಾನ

ಉಚಿತ ಲಘು ವಾಹನ ಚಾಲನೆ ತರಬೇತಿಗೆ ಅರ್ಜಿಗಳ ಆಹ್ವಾನ

ಶಹಾಬಾದ: ನಗರ ಸಭೆ ಕಾರ್ಯಾಲಯ ದಿಂದ 30 ದಿನಗಳ ಲಘು ವಾಹನ ಚಾಲನೆ ತರಬೇತಿ ಪಡೆಯಲು ನಗರ ಸಭೆಯ ವ್ಯಾಪ್ತಿಗೆ ಒಳಪಡುವ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ಎಲ್ಲ ಅರ್ಹ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳಿಗೆ ಉಚಿತವಾಗಿ ಲಘು ವಾಹನಗಳ ಚಾಲನಾ ತರಬೇತಿ ಪಡೆದುಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಲಘು ವಾಹನ ಚಾಲನಾ ತರಬೇತಿಗೆ ಅರ್ಜಿ ಸಲ್ಲಿಸಲು ವಿಷೇಶವಾಗಿ ನಗರದ ನಿವಾಸಿಯಾಗಿರಬೇಕು, ಎಸ್ಸೆಸ್ಸೆಲ್ಸಿ ಪಾಸಾಗಿರಬೇಕು, ಕನಿಷ್ಠ 18 ವರ್ಷ ತುಂಬಿರಬೇಕು, ವಾಸ ಸ್ಥಳ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹಾಗೂ ಪಾಸ್ ಪೋರ್ಟ್ ಅಳತೆಯ ಭಾವಚಿತ್ರಗಳನ್ನು ಲಗತ್ತಿಸಿ ಸಲ್ಲಸ ಬೇಕಾಗುತ್ತದೆ. ಇನ್ನಿತರ ವಿವರಗಳೊಂದಿಗೆ ನಗರ ಸಭೆಗೆ 17ನೇ ಅಗಸ್ಟ್ 2024 ರೊಳಗಾಗಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ನಗರ ಸಭೆ ಕಛೇರಿಗೆ ಸಂಪರ್ಕಿಸಬೇಕೆಂದು ಪೌರಾಯುಕ್ತರಾದ ಕೆ. ಗುರುಲಿಂಗಪ್ಪ ಪ್ರಕಟಣೆಗಾಗಿ ತಿಳಿಸಿರುತ್ತಾರೆ.