ಕಲಬುರ್ಗಿ ಬಸವ ಸಮಿತಿಯಲ್ಲಿ ಹಡಪದ ಅಪ್ಪಣ್ಣ ಜಯಂತಿ*

*ಕಲಬುರ್ಗಿ ಬಸವ ಸಮಿತಿಯಲ್ಲಿ ಹಡಪದ ಅಪ್ಪಣ್ಣ ಜಯಂತಿ*
ಕಲಬುರ್ಗಿ ಜಯನಗರದ ಬಸವ ಸಮಿತಿಯ ಅನುಭವ ಮಂಟಪದಲ್ಲಿ ಒಂದು ತಿಂಗಳಪರ್ಯಂತ ಜರುಗುತ್ತಿರುವ ವಚನ ಆಷಾಡ ಪ್ರವಚನದ 17ನೇ ದಿನದಂದು ಹಡಪದ ಅಪ್ಪಣ್ಣ ಜಯಂತಿಯ ನಿಮಿತ್ಯವಾಗಿ ಮಾತನಾಡಿದ ಬೆಳಗಾವಿಯ ಬಸವ ಬೆಳವಿಯ ಚರಂತಿೇಶ್ವರ ಮಠದ ಪೂಜ್ಯರಾದ ಶರಣಬಸವ ಸ್ವಾಮಿಗಳು ಮಾತನಾಡುತ್ತಾ , 770 ಅಮರ ಗಣಗಳಲ್ಲಿ ಬಸವಣ್ಣನವರ ಬಾಲ್ಯ ಸ್ನೇಹಿತರಾಗಿದ್ದವರು ಸದಾಕಾಲ ಅವರೊಂದಿಗೆ ಇರುತ್ತಿದ್ದವರು ಹಡಪದ ಅಪ್ಪಣ್ಣನವರು .ಬಸವಣ್ಣನವರು ಬಾಗೇವಾಡಿ ಬಿಟ್ಟು ಕೂಡಲಸಂಗಮಕ್ಕೆ ಬಂದಾಗ ಅವರೊಂದಿಗೆ ಬಂದರು. ಹಡಪದ ಅಪ್ಪಣ್ಣ ಮತ್ತು ಅವರ ಪತ್ನಿ ಲಿಂಗಮ್ಮ ಬಸವಣ್ಣನವರ ಮಹಾ ಮನೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ. ಬಸವಣ್ಣನವರಿಗೂ ಅಪ್ಪಣ್ಣನವರಿಗು ಅವಿನಾಭಾವ ಸಂಬಂಧ. ಅಪ್ಪಣ್ಣನವರು ಭಾರತ ಎಲ್ಲಾ ಸಿದ್ಧಾಂತಗಳನ್ನು ಓದಿ ಬಸವ ಸಿದ್ದಂತಕ್ಕೆ ಮಾರುಹೋದವರು. ಬಸವಣ್ಣ ಮತ್ತು ಅಲ್ಲಮಪ್ರಭು ದೇವರೆಂಬ ಇಬ್ಬರು ಮಹಾಜ್ಞಾನಿಗಳಿಗೆ ನಡುವಿನ ಕೊಂಡಿಯಾಗಿದ್ದವರೇ ಅಪ್ಪಣ್ಣನವರು.
ಬಸವಣ್ಣನವರು ಮಹಾಮನೆಯಲ್ಲಿ ಶರಣರಿಗೆ ಭೇಟಿಯಾಗುತ್ತಿದ್ದರು . ಅವರೊಬ್ಬ ಮಂತ್ರಿಯಾಗಿ ಪರುಷ ಕಟ್ಟಿಯಲ್ಲಿ ಜನಸಾಮಾನ್ಯರಿಗೆ ಭೇಟಿಯಾಗುತ್ತಿದ್ದರು. ಎಲ್ಲಾ ಕಡೆ ಅಪ್ಪಣ್ಣನವರು ಬಸವಣ್ಣನವರ ನೆರಳಾಗಿ ಇರುತ್ತಿದ್ದರು. ಬೃತ್ಯಾಚಾರಿ ಶರಣ ಹಡಪದ ಅಪ್ಪಣ್ಣನವರಾಗಿದ್ದರು. ಲಿಂಗಮ್ಮನವರು ಮಹಾ ಮನೆಯಲ್ಲಿ ನೀಲಮ್ಮನವರಿಗೆ ಅನುಭವ ದಾಸೋಹ , ಪ್ರಸಾದ ದಾಸೋಹಕ್ಕೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ನಿಶ್ಚಿಂತದ ನಿಜಸುಖ ಅಪ್ಪಣ್ಣ ದಂಪತಿಗೆ ಲಭಿಸಿತು . ಪರಮಾನಂದ ಆತ್ಮ ಸುಖದಿಂದ ಲಭಿಸುತ್ತದೆ ,ಲೌಕಿಕ ಭೌತಿಕ ಇಂದ್ರಿಯ ಸುಖಗಳು ತಾತ್ಕಾಲಿಕವಾಗಿರುತ್ತವೆ .
ಪರಮಾತ್ಮನ ಆನಂದ ಶಾಶ್ವತ ಆನಂದವಾಗಿರುತ್ತದೆ .ಲಿಂಗಮ್ಮನ ವಚನಗಳಲ್ಲಿ ಅರಿಶೆಡ್ವರ್ಗಗಳನ್ನು ಮೆಟ್ಟಿನಿಂದ ನಿಲುವು ಕಾಣುತ್ತೇವೆ. ಮಾಯೆ , ಬುದ್ಧಿ , ಚಿತ್ತ , ಇಂದ್ರಿಯ , ಸಪ್ತ ವ್ಯಸನಗಳು ಶಿವಯೋಗ ಸಾಧಕರಿಗೆ ಕಾಡುತ್ತವೆ. ಹೊರಗಿನ ಶತ್ರುಗಳಿಗಿಂತ ವ್ಯಸನವೆಂಬ ಒಳಗಿನ ಶತ್ರು ಅತ್ಯಂತ ದುಷ್ಟವಾಗಿರುತ್ತದೆ. ಅಧಿಕಾರ ಹಿಡಿಯಬೇಕೆಂಬ ಅಪಹಪಿಯಿಂದ ಸ್ಪರ್ಧಿಯಾಗಿರುವ ಎದುರಿನ ವ್ಯಕ್ತಿ ಶತ್ರುವಾಗಿ ಕಂಡರೂ ಕೂಡ ನಮ್ಮೊಳಗಿನ ಆಸೆಯ ಅಪಹಪಿಯು ನಮ್ಮ ಶತ್ರುವಾಗಿದೆ.ಅಪ್ಪಣ್ಣನವರು ಇಂತಹ ಆಸೆಯ ಮನೆಯ ದಾಸರಾಗಿರಲಿಲ್ಲ. ಲೋಕದ ಮನೆಯ ಜನರು ಹೊಟ್ಟೆಗಾಗಿ ಬಡಿದಾಡುತ್ತಾರೆ, ಅದರ ಬದಲಾಗಿ ಅನುಭವದ ಹಸಿವ ನೀಗಿಸಿಕೊಂಡರೆ ಅವನು ನಿಜಸುಖಿಯಾಗುತ್ತಾನೆಂದು ಅಪ್ಪಣ್ಣನವರು ಹೇಳಿದ್ದಾರೆ.
ಹುಟ್ಟು ಸಾವಿಲ್ಲದ ಶರಣರನ್ನು ನಾನು ನೆನೆದು ಬದುಕುತ್ತೇನೆಂದು ಹೇಳುವುದು ಅಪ್ಪಣ್ಣನವರ ವಿನಯಶೀಲತೆಯಾಗಿದೆ .ಮನವ ನಿಯಂತ್ರಿಸದವರು ಮಹಾದೇವನಾಗಲು ಸಾಧ್ಯವಿಲ್ಲವೆಂದು ಲಿಂಗಮ್ಮನವರು ಹೇಳುತ್ತಾರೆ .ಸ್ವಚ್ಛ ಕನ್ನಡಿ, ಸ್ವಚ್ಛ ನೀರಿನಲ್ಲಿ ನಮ್ಮ ರೂಪ ಕಾಣುವಂತೆ ಸ್ವಚ್ಛ ಮನದಲ್ಲಿ ನಮ್ಮಂತರಂಗ ಕಾಣುತ್ತದೆ . ಹಿಮಾಲಯದ ಸಾಧುಸಂತರಿಗಿಂತ ಹಡಪದ ಲಿಂಗಮ್ಮ ಮಹಾಜ್ಞಾನಿಯಾಗಿದ್ದಳು ಎಂದರು .
ಶಹಬಾದದ ರಾಜಶಿವಯೋಗಿ ಮಹಾಸ್ವಾಮಿಗಳು ತಮ್ಮ ಅನುಭವ ಹಂಚಿಕೊಂಡರು .
ಕಲಬುರ್ಗಿ ಬಸವ ಸಮಿತಿಯ ಅಧ್ಯಕ್ಷರಾದ ಡಾ.ವಿಲಾಸ್ವತಿ ಖೂಬಾ , ಡಾ. ವೀರಣ್ಣ ದಂಡೆ, ಡಾ. ಜಯಶ್ರೀ ದಂಡೆ ಕಾರ್ಯದರ್ಶಿಗಳಾದ ಡಾ. ಆನಂದ ಸಿದ್ಧಾಮಣಿ . ಶರಣಗೌಡ ಪಾಟೀಲ್ ಪಾಳ ,ಡಾ . ಕೆ ಎಸ್ ವಾಲಿ ,ಬಂಡಪ್ಪ ಕೇಸೂರ್ ಅವರು ಹಾಜರಿದ್ದರು. ಜಿಲ್ಲಾ ಹಡಪದ ಸಮಾಜದ ಅಧ್ಯಕ್ಷರಾದ ವೀರಣ್ಣ ಹಡಪದ ಸ್ವಾಗತಿಸಿದರು .