ನಮ್ಮ ಕಲಬುರಗಿ ಸೌಹಾರ್ದ ನಿಯಮಿತದ ೮ನೇ ಸರ್ವಸದ್ಯಸರ ವಾರ್ಷಿಕ ಸಭೆ

ನಮ್ಮ ಕಲಬುರಗಿ ಸೌಹಾರ್ದ ನಿಯಮಿತದ  ೮ನೇ ಸರ್ವಸದ್ಯಸರ ವಾರ್ಷಿಕ ಸಭೆ

ನಮ್ಮ ಕಲಬುರಗಿ ಸೌಹಾರ್ದ ನಿಯಮಿತದ ೮ನೇ ಸರ್ವಸದ್ಯಸರ ವಾರ್ಷಿಕ ಸಭೆ

ಕಲಬುರಗಿ: ನಮ್ಮ ಕಲಬುರಗಿ ಸೌಹಾರ್ದ ನಿಯಮಿತ” ಶಾಂತಿನಗರ ಕಲಬುರಗಿ ಇವರ ೮ ನೇ ಸರ್ವಸದ್ಯಸರ ವಾರ್ಷಿಕ ಸಭೆಯನ್ನು ಕನ್ನಡ ಭವನ ಎಸ್.ವಿ.ಪಿ ಸರ್ಕಲ್ ಹತ್ತಿರ ಏರ್ಪಡಿಸಲಾಗಿತ್ತು. 

ಸದರಿ ಸಭೆಯನ್ನು ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಂಪ್ರಭು ಪಾಟೀಲ ನೇರವಿರಿಸಿದ್ದರು. ನಂತರ ಸನ್ಮಾನ ಸ್ವಿಕರಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಡಿ.ಬಿ.ನಾಯಕ ವಿಶ್ರಾಂತ ಕುಲಪತಿಗಳು ಜಾನಪದ ವಿಶ್ವವಿದ್ಯಾಲಯ ಶಿಗ್ಗಾಂವ ಇವರು ವಹಿಸಿದರು. ಹನುಮಂತ ಪ್ರಭು ನಿರ್ದೇಶಕರು ಅತಿಥಿಗಳನ್ನು ಸ್ವಾಗತಿಸಿದರು. ನಮ್ಮ ಕಲಬುರಗಿ ಸೌಹಾರ್ದ ನಿಯಮಿತದ “ಅಧ್ಯಕ್ಷರಾದ ಪ್ರೊ. ಗಿರಿಮಲ್ಲಪ್ಪಾ ಹರವಾಳವರು ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆಯ ಬೆಳವಣ ಗೆಗಳ ಬಗ್ಗೆ ಹಾಗೂ ೨೦೨೩-೨೪ ನೇ ಸಾಲಿನ ಲೆಕ್ಕ ಪತ್ರ ಮತ್ತು ಅಡಾವೆ ಪತ್ರವನ್ನು ಮಂಡಿಸಿದರು. 

ಈ ಸಂದರ್ಭದಲ್ಲಿ ನಿಯಮಿತವಾಗಿ ಸಾಲ ಮರುಪಾವತಿಸಿದ ಸದಸ್ಯರನ್ನು ಹಾಗೂ ಕಳೆದ ವರ್ಷ ಸರಕಾರಿ ಸೇವೆಯಿಂದ ನಿವೃತ್ತಿ ಆದ ನೌಕರರನ್ನು ಡಾ. ಅಮರನಾಥ ವಾಲಿ ಹಾಗೂ ಡಾ|| ನಿವೇದಿತಾ ಹರವಾಳರವರನ್ನು ಮಾನ್ಯ ಶಾಸಕರು ಸನ್ಮಾನಿಸಿದರು. ಮುಖ್ಯ ಅತಿಥಿಗಳಾದ ಕೆ.ಬಿ.ಶೆಟಗರ ನಿವೃತ್ತ ಬ್ಯಾಂಕ್ ಮ್ಯಾನೇಜರ ಇವರು ಮಾತನಾಡುತ್ತ ಸೌಹಾರ್ದ ಬ್ಯಾಂಕುಗಳ ಅಭಿವೃದ್ಧಿಗೆ ಪೂರಕವಾದ ಅಂಶಗಳನ್ನು ತಿಳಿಸಿದರು.

ವೇದಿಕೆಯಲ್ಲಿ ಆಡಳಿತ ಮಂಡಳಿಯ ನಿರ್ದೇಶಕರುಗಳಾದ ಶರಣಮ್ಮ ಗಿರಿಮಲ್ಲಪ್ಪಾ ಹರವಾಳ, ಎಸ್ ಎಸ್ ಪಟ್ಟಣೆ, ವಿಜಯಲಕ್ಷ್ಮೀ ಎಸ್ ಸಂಗಾವಿ, ಶ್ರೀಶೈಲ ರೆಡ್ಡಿ ಮರಪಳ್ಳಿ ಹಾಗೂ ಸುಬ್ಬರಾಯ ಗೌಡ ನೇಲೋಗಿ ರವರು ಉಪಸ್ಥಿತರಿದ್ದರು.