ಅಬಕಾರಿ ಲೈಸೆನ್ಸ್ ದಾರರ ಒಗ್ಗಟ್ಟಿನಿಂದ ಬಲ: ಸತ್ಯನಾಥ ಶೆಟ್ಟಿ

ಅಬಕಾರಿ ಲೈಸೆನ್ಸ್ ದಾರರ ಒಗ್ಗಟ್ಟಿನಿಂದ ಬಲ: ಸತ್ಯನಾಥ ಶೆಟ್ಟಿ

ಅಬಕಾರಿ ಲೈಸೆನ್ಸ್ ದಾರರ ಒಗ್ಗಟ್ಟಿನಿಂದ ಬಲ: ಸತ್ಯನಾಥ ಶೆಟ್ಟಿ

ಕಲಬುರಗಿ : ಜಿಲ್ಲೆಯ ಎಲ್ಲಾ ಅಬಕಾರಿ ಲೈಸೆನ್ಸ್ ದಾರರು ಸಂಘಟನೆಯ ಮೂಲಕ ಒಗ್ಗಟ್ಟಾಗಿ ಆರ್ಥಿಕ ಕ್ರೋಢೀಕರಣ ಮಾಡಿ ಜಿಲ್ಲಾ ವೈನ್ ಮರ್ಚೆಂಟ್ ಅಸೋಸಿಯೇಷನ್ ಗೆ ಬಲ ತುಂಬಬೇಕು ಎಂದು ಅಸೋಸಿಯೇಷನ್ ಉಪಾಧ್ಯಕ್ಷರಾದ ಸತ್ಯನಾಥ ಶೆಟ್ಟಿ ಕರೆ ನೀಡಿದರು. 

    ಕಲಬುರಗಿ ಜಿಲ್ಲಾ ವೈನ್ ಮರ್ಚೆಂಟ್ ಅಸೋಸಿಯೇಷನ್ ಜಿಲ್ಲಾ ಸಮಿತಿ ಸಭೆಯು ಡಿಸೆಂಬರ್ ಮೂರರಂದು ಕಲ್ಬುರ್ಗಿಯ ಬಹಮನಿ ಹೋಟೆಲ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಆರ್ಥಿಕ ಸಂಗ್ರಹಕ್ಕಾಗಿ ದೇಣಿಗೆಯ ಕೂಪನ್ ಬಿಡುಗಡೆ ಮಾಡಿ ಮಾತನಾಡಿ ಜಿಲ್ಲೆಯ ಸುಮಾರು 128ಕ್ಕೂ ಹೆಚ್ಚುದಾರರು ಸಶಕ್ತವಾಗಿ ಬೆಳೆದು ನಿಲ್ಲಲು ಒಗ್ಗಟ್ಟು ಹಾಗೂ ಆರ್ಥಿಕ ಬಲದ ಅಗತ್ಯವಿದೆ. ಇದಕ್ಕೆಲ್ಲ ಸನ್ನದು ದಾರರು ದೇಣಿಗೆಯ ಕೂಪನ್ ಗಳನ್ನು ಪಡೆಯಬೇಕು. ಪ್ರತಿ ಸದಸ್ಯರು ಪ್ರತಿ ತಿಂಗಳು ಕನಿಷ್ಟ ಒಂದು ಸಾವಿರ ರೂಪಾಯಿ ದೇಣಿಗೆಯನ್ನು ಸಂಘಕ್ಕೆ ನೀಡಿದರೆ ಸನ್ನದುದಾರರ ಪ್ರತಿ ಸಮಸ್ಯೆಗಳಿಗೆ ಸ್ಪಂದಿಸಲು ಹಾಗೂ ಅಬಕಾರಿ ಇಲಾಖೆಯು ವಿಧಿಸುವ ಮೊಕದ್ದಮೆಗಳನ್ನು ಸಂಘದಿಂದ ನೇಮಿತ ವಕೀಲರ ಮೂಲಕವೆ ನಿರ್ವಹಿಸಲು ಅನುಕೂಲವಾಗುತ್ತದೆ ಹಾಗೂ ಶೀಘ್ರದಲ್ಲೇ ಸಂಘದ ಜಮೀನಿನಲ್ಲಿ ಸ್ವಂತ ಕಟ್ಟಡ ನಿರ್ಮಾಣಕ್ಕೆ ಸಂಘದ ಸದಸ್ಯರು ಮುಂದಾಗಬೇಕು ಎಂದು ಹೇಳಿದರು. 

      ಗೌರವಾಧ್ಯಕ್ಷರದ ವೀರಯ್ಯ ಗುತ್ತೇದಾರ್ ಮಾತನಾಡಿ ಅಬಕಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿ ಮೊಕದ್ದಮೆಗಳಿಂದ ಮುಕ್ತರಾಗೋಣ. ವಿನಾಕಾರಣ ಕಿರುಕುಳದ ವಿರುದ್ಧ ಜಂಟಿ ಹೋರಾಟ ಕೂಡಾ ಅಗತ್ಯ. ಸಂಘಕ್ಕೆ ಆರ್ಥಿಕ ಬಲ ಹೆಚ್ಚಿಸಲು ಎಲ್ಲರೂ ಕೈಜೋಡಿಸಬೇಕಾಗಿದೆ ಎಂದು ಹೇಳಿದರು. ಸನ್ನದುದಾರರ ಪರವಾಗಿ ಜಗದೇವ ಗುತ್ತೇದಾರ್ ಕಲ್ ಬೇನೂರು ಮಾತನಾಡಿ ಪ್ರತಿ ಸನ್ನದುದಾರರು ಕಾನೂನಿನ ಬಗ್ಗೆ ಆಳವಾಗಿ ತಿಳಿದುಕೊಂಡು ವಿನಾಕಾರಣ ಮೊಕದ್ದಮೆ ಎದುರಿಸುವುದನ್ನು ತಪ್ಪಿಸಬೇಕು ಹಾಗೂ ಅಗತ್ಯವಿದ್ದರೆ ನ್ಯಾಯಾಲಯದಲ್ಲಿ ನ್ಯಾಯಕ್ಕಾಗಿ ಹೋರಾಟ ಮಾಡಲು ಸಿದ್ಧರಾಗಬೇಕು ಎಂದರು. ಅಧ್ಯಕ್ಷತೆ ವಹಿಸಿದ ಆರ್. ಪಿ. ರೆಡ್ಡಿ ಮಾತನಾಡಿ ಇತ್ತೀಚೆಗೆ ಅಬಕಾರಿ ಸನ್ನದುದಾರರ ರಾಜ್ಯ ಸಂಘಟನೆಯು ಕರೆ ನೀಡಿದ ಹೋರಾಟಕ್ಕೆ ಬೆಂಬಲ ನೀಡಿದ ಎಲ್ಲರಿಗೂ ಅಭಿನಂದನೆ ಹಾಗೂ ಸನ್ನದುದಾರರ ಸಮಸ್ಯೆಗಳಿಗೆ ಸಂಘಟಿತ ಹೋರಾಟ ಮಾಡಿ ನಿರಾತಂಕ ವ್ಯಾಪಾರ ವಹಿವಾಟು ನಡೆಸೋಣ ಎಂದರು. ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ವೆಂಕಟೇಶ್ ಎಂ. ಕಡೇಚೂರ್ ಮಹಾದೇವ ಗುತ್ತೇದಾರ್ ಸತ್ಯನಾಥ ಶೆಟ್ಟಿ , ಶಿವು ಗುತ್ತೇದಾರ್, ಹರೀಶ್ ಅಶೋಕ್ ಗುತ್ತೇದಾರ್ ಮೊದಲಿಗೆ ದೇಣಿಗೆಯ ಕೂಪನ್ ಪಡೆದುಕೊಂಡರು. ಈ ಸಂದರ್ಭದಲ್ಲಿ ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷರಾದ ನರಸಿಂಹ ಮೆಂಡನ್ ಸನ್ನದುದಾರರಾದ ಮಲ್ಲು ಜೀವಣಗಿ, ಶರಣಯ್ಯ ಗುತ್ತೇದಾರ್, ಸುರೇಶ್ ಗುತ್ತೇದಾರ್, ಮಟ್ಟೂರು, ಅಂಬಯ್ಯ ಗುತ್ತೇದಾರ್ ಇಬ್ರಾಹಿಂಪುರ್, ಆದಿನಾಥ ಗಂಗಾವತಿ, ರಾಜೇಶ್ ಡಿ. ಗುತ್ತೇದಾರ್, ಸಂತೋಷ್ ಸುಭಾಷ್ ಗುತ್ತೇದಾರ್, ಹರ್ಷ ಗಂಗಾವತಿ, ಸೋನು ಪಾಠಕ್, ದಯಾನಂದ ಪೂಜಾರಿ, ಮಹಾಕೀರ್ತಿ ಶೆಟ್ಟಿ, ಜೀವನ್ ಕುಮಾರ್ ಜತ್ತನ್, ವಿನಯ ಡಿ ಗುತ್ತೇದಾರ್ ಸಾಗರದ ಡಿ .ಹರಸೂರ ಮತ್ತಿತರರು ಉಪಸ್ಥಿತರಿದ್ದರು.