ಹಿರಿಯ ಚೇತನ ಮಹಾದೇವಪ್ಪ ಕಡೇಚೂರ್ ಗೆ ಪ್ರಮೋದ್ ಮಧ್ವರಾಜ್ ನಮನ

ಹಿರಿಯ ಚೇತನ ಮಹಾದೇವಪ್ಪ ಕಡೇಚೂರ್ ಗೆ ಪ್ರಮೋದ್ ಮಧ್ವರಾಜ್ ನಮನ
ಕಲಬುರಗಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಚೇತನ ಮತ್ತು ಬಿಜೆಪಿಯ ಹಿರಿಯ ಮುಖಂಡರಾದ ಮಹಾದೇವಪ್ಪ ಕಡೇಚೂರ್ ಅವರ ಅಗಲುವಿಕೆಗೆ ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್ ತೀವ್ರ ಸಂತಾಪ ವ್ಯಕ್ತಪಡಿಸಿ ಪುಷ್ಪಾರ್ಚನೆ ಸಲ್ಲಿಸಿ ಗೌರವ ನಮನ ಸಲ್ಲಿಸಿದ ರು.
ಕಲಬುರಗಿಯಲ್ಲಿರುವ ಕಡೇಚೂರ್ ನಿವಾಸಕ್ಕೆ ಜುಲೈ 13 ರಂದು ಭೇಟಿ ನೀಡಿ ಹಿರಿಯ ಚೇತನಕ್ಕೆ ಗೌರವ ನಮನ ಸಲ್ಲಿಸಿದ ನಂತರ ಮಾತನಾಡಿ ಜನಸಂಘ ಮತ್ತು ಬಿಜೆಪಿ ಪಕ್ಷವನ್ನು ತಳಮಟ್ಟದಿಂದ ಕಟ್ಟಿ ಬೆಳೆಸಿದ ಮಹಾನ್ ವ್ಯಕ್ತಿ ಮಹಾದೇವಪ್ಪ ಕಡೇಚೂರ್ ಅವರ ಸೇವೆ ಸ್ಮರಣೀಯ. ಕಲಬುರಗಿ ಜಿಲ್ಲೆಯಲ್ಲಿ ಯಾವುದೇ ಸ್ಥಾನ ಮನ ಬಯಸದೆ ತ್ಯಾಗ ಮನೋಭಾವದಿಂದ ಪಕ್ಷವನ್ನು ಕಟ್ಟಿ ಬೆಳೆಸಿದ ಅವರ ಆದರ್ಶ ಕಾರ್ಯಕರ್ತರಿಗೆ ಸ್ಪೂರ್ತಿದಾಯಕ. ಇಂತಹ ಮಹಾತ್ಮನಿಗೆ ಗೌರವ ಸಲ್ಲಿಸುವ ಭಾಗ್ಯ ಲಭಿಸಿರುವುದು ನನ್ನ ಭಾಗ್ಯ ಎಂದು
ಹೇಳಿದರು. ಹಿಂದಿನ ಇಂತಹ ತ್ಯಾಗ ಜೀವಿಗಳಿಂದ ಪಕ್ಷ ಇವತ್ತು ಉಚ್ಛ್ರಾಯ ಸ್ಥಿತಿಗೆ ಬೆಳೆದು ನಿಂತಿದೆ. ಪಕ್ಷದ ಕಾರ್ಯಕರ್ತರು ಇಂತಹವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದಾಗ ಅವರಿಗೆ ನಿಜವಾದ ಶ್ರದ್ಧಾಂಜಲಿ ಸಲ್ಲುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿಯ ಹಿರಿಯ ನಾಯಕರಾದ ಶರಣಪ್ಪ ತಳವಾರ್, ಅಂಬರಾಯ ಅಷ್ಟಗಿ , ಅವ್ವಣ್ಣ ಮ್ಯಾಕೇರಿ, ಅಶೋಕ್ ಬಗಲಿ, ಗಿರೀಶ್ ಭಜಂತ್ರಿ, ಶಿವು ಅಷ್ಟಗಿ, ಗೋವಿಂದ ಭಟ್ಟ ಪೂಜಾರಿ,ವೆಂಕಟೇಶ್ ಕಡೇಚೂರ್, ಡಾ.ಸದಾನಂದ ಪೆರ್ಲ, ಡಾ.ರಾಜೇಶ್ ಕಡೇಚೂರ್, ನ್ಯಾಯವಾದಿ ಶ್ರೀಧರ್ ಪೂಜಾರಿ,ಮಹೇಶ್ ಕಡೇಚೂರ್, ಸುನಿಲ್ ಗೌಡ, ದಿನೇಶ್ ಕಡೇಚೂರ್ ,ಪ್ರಮೀಳಾ ಎಂ ಕೆ ಮತ್ತಿತರರು ಇದ್ದರು.