ರಕ್ತದಾನವು ಜೀವಗಳನ್ನು ಉಳಿಸುವ ಒಂದು ಶ್ರೇಷ್ಠ ಕೊಡುಗೆಯಾಗಿದೆ:ಶ್ರೀಕಾಂತ ಅಲ್ಲಾಪುರೆ
ರಕ್ತದಾನವು ಜೀವಗಳನ್ನು ಉಳಿಸುವ ಒಂದು ಶ್ರೇಷ್ಠ ಕೊಡುಗೆಯಾಗಿದೆ:ಶ್ರೀಕಾಂತ ಅಲ್ಲಾಪುರೆ
ಕಮಲನಗರ:ರಕ್ತದಾನವು ಜೀವಗಳನ್ನು ಉಳಿಸುವ ಒಂದು ಶ್ರೇಷ್ಠ ಕೊಡುಗೆಯಾಗಿದೆ,ಮನುಷ್ಯ ಮಾಡುವ ಅನೇಕ ದಾನದಲ್ಲಿ ರಕ್ತದಾನ ಮಹಾದಾನವಾಗಿದೆ ಎಂದು ಕಮಲನಗರ ಸಿ.ಪಿ.ಐ ಶ್ರೀಕಾಂತ ಅಲ್ಲಾಪುರೆ ಅವರು ಹೇಳಿದರು.
ತಾಲೂಕಿನ ಡಿಗ್ಗಿ ಗ್ರಾಮದ ಆರಾದ್ಯ ದೇವ ಮಡಿವಾಳೇಶ್ವರ ದೇವರ ಜಾತ್ರಾ ಮಹೋತ್ಸವ ನಿಮಿತ್ಯವಾಗಿ, ನಾಗಪ್ಪ ಅಂಬರಖಾನೆ ಬ್ಲಡ್ ಸೆಂಟರ್ ಇವರ ಸಂಯುಕ್ತ ಆಶ್ರಯದಲ್ಲಿ ರಕ್ತದಾನ ಜೀವದಾನ ಶಿಬಿರ ಉದ್ಘಾಟನೆಮಾಡಿ ಅವರು ಮಾತನಾಡಿದರು.
ಗ್ರಾಮದ ಯುವಕರು ಮತ್ತು ಹಿರಿಯರು, ಒಗ್ಗಟ್ಟಿನಿಂದ ಪಾಲ್ಗೊಂಡು, ಬಹಳ ಒಳ್ಳೆಯ ಕಾರ್ಯ ಆಯೋಜನೆ ಮಾಡಿದ್ದೀರಿ ಎಂದು ಅಭಿನಂದಿಸಿದರು.
ಮಡಿವಾಳೇಶ್ವರ ದೇವಾಲಯ ಟ್ರಸ್ಟ್ ಕಾರ್ಯದರ್ಶಿ ಮಡಿವಾಳಪ್ಪ ಮುರ್ಕೆ ಪ್ರಸ್ತಾವಿಕ ನುಡಿ ನುಡಿದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿರುವ ದೇವಾಲಯ ಟ್ರಸ್ಟ್ ಅಧ್ಯಕ್ಷರು ಅಧ್ಯಕ್ಷ ಭಾಷಣ ಮಾಡಿದರು.
ಕಾರ್ಯಕ್ರಮದ ಉಸ್ತುವಾರಿ ವಹಿಸಿರುವ ರಾಜಕುಮಾರ ಕುಂಬಾರಗಿರೆ,
ಸೋಮನಾಥ ಶ್ರೀಗಿರೆ, ಬಸವರಾಜ ಬಿರಾದಾರ, ಸಂತೋಷ ಸ್ವಾಮಿ, ಸಂದೀಪ ಬನವಾಸೆ, ಪರಮೇಶ ರಾಂಪುರೆ, ಓಂಕಾರ ರಾಂಪುರೆ, ಸುನಿಲ ಚಾಂಡೇಶ್ವರೆ, ಸಂಗಮನಾಥ ಬಿರಾದಾರ, ಮಹೇಶ ಚಾಂಡೇಶ್ವರೆ, ಸೇರಿದಂತೆ ರಕ್ತದಾನ ಶಿಬಿರದಲ್ಲಿ 50 ಜನರು ತಮ್ಮ ರಕ್ತದಾನ ಮಾಡಿ ಸಾಮಾಜಿಕ ಭದ್ಧತೆ ತೋರಿಸಿದರು.
ಈ ಸಂದರ್ಭದಲ್ಲಿ ಡಾ. ಗಣಪತಿ ವಟಗೆ ಶಿವಕುಮಾರ ರಾಂಪುರೆ, ವಿಜಯಕುಮಾರ ಪಾಟೀಲ, ಸೂರ್ಯಕಾಂತ ಬಿರಾದಾರ, ಸತೀಶ ರಾಂಪುರೆ, ಧನರಾಜ ರಾಂಪುರೆ, ಚನ್ನಬಸವ ಬಿರಾದಾರ, ಸೋಮನಾಥ ರಾಂಪುರೆ,ಮಯೂರ ಕುಂಬಾರಗಿರೆ,ಸತೀಶ ತಪ್ಪಸಾಳೆ, ಸೇರಿದಂತೆ ಇನ್ನಿತರ ಇದ್ದರು.ಪರಮೇಶ ರಾಂಪುರೆ ಕಾರ್ಯಕ್ರಮ ನಿರೂಪಣೆ ಮಾಡಿದರು.