ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ಸಮಿತಿಯಿಂದ ಕಾರ್ಮಿಕ ಭವನದ ಮುಂದೆ ಪ್ರತಿಭಟನೆ

ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ಸಮಿತಿಯಿಂದ ಕಾರ್ಮಿಕ ಭವನದ ಮುಂದೆ ಪ್ರತಿಭಟನೆ

ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ಸಮಿತಿಯಿಂದ ಕಾರ್ಮಿಕ ಭವನದ ಮುಂದೆ ಪ್ರತಿಭಟನೆ

ಕಲಬುರಗಿ: ಕಾರ್ಮಿಕ ಕಾನೂನುಗಳಲ್ಲಿ ಬಂಡವಾಳುಗಾರರ ಪರವಾದ ತಿದ್ದುಪಡಿ ಮಾಡದಿರಲು ಒತ್ತಾಯಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ಸಮಿತಿಯಿಂದ ಕಾರ್ಮಿಕ ಭವನದ ಮುಂದೆ ಪ್ರತಿಭಟನೆ ನಡೆಸಿ ಡೆಪ್ಯೂಟಿ ಲೇಬರ ಕಮೀಶನರ್ ಮುಖಾಂತರ ಮುಖ್ಯ ಮಂತ್ರಿಗಳಿಗೆ ಕಳುಹಿಸಲಾಯಿತು.  

ದಿನದ ಕೆಲಸದ ಅವಧಿಯನ್ನು ೧೨ ಗಂಟೆಗಳಿಗೆ ಹೆಚ್ಚಿಸುವುದು,ಉತ್ಪಾದನಾ ವಲಯದಲ್ಲಿ ಮಹಿಳಾ `ಕಾರ್ಮಿಕರನ್ನು ರಾತ್ರಿ ಪಾಳಿಯಲ್ಲಿ ಕೆಲಸಕ್ಕೆ ತೊಡಗಿಸುವುದು, ಅಪಾಯಕಾರಿ ಉತ್ಪಾದನಾ ವಿಧಾನಗಳಲ್ಲಿ ಮಹಿಳೆಯರ ನೇಮಕಾತಿ ಮಾಡಲು ಇರುವ ನಿರ್ಬಂಧಗಳನ್ನು ಸಡಿಲಗೊಳಿಸುವುದು, ಕಾರ್ಖಾನೆಗಳ ವ್ಯಾಖ್ಯಾನವನ್ನು ಬದಲಿಸಿ ಕಾರ್ಖಾನೆಗಳಲ್ಲಿ ವಿದ್ಯುತ್ ಬಳಸುವ ಕಾರ್ಮಿಕರ ಸಂಖ್ಯೆಯನ್ನು ೧೦ ರಿಂದ ೨೦ಕ್ಕೆ ವಿದ್ಯುತ ಬಳಸದಿರುವ ಕಾರ್ಮಿಕರ ಸಂಖ್ಯೆಯನ್ನು ೨೦ ರಿಂದ ೪೦ಕ್ಕೆ ಹೆಚ್ಚಿಸಿ ಲಕ್ಷಾಂತರ ಕಾರ್ಮಿಕರನ್ನು ಕಾರ್ಖಾನೆಗಳ ಕಾಯಿದೆ ಸವಲತ್ತುಗಳಿಂದ ಹೊರಹಾಕುವುದು, ಕಾರ್ಖಾನೆಗಳನ್ನು ಮುಚ್ಚಲು ಲೇ-ಆಫ್ ಮಾಡಲು ರೆಟ್ರೆಂಚ್‌ಮೆಂಟ ಮಾಡಲು ಸರ್ಕಾರದ ಪೂರ್ವಾನುಮತಿ ಪಡೆಯಲು ಇರುವ ಕಾರ್ಮಿಕರ ಸಂಖ್ಯೆ ೧೦೦ ಮಿತಿಯನ್ನು ೩೦೦ಕ್ಕೆ ಹೆಚ್ಚಿಸಿ ಮಾಲೀಕರಿಗೆ ಕಾರ್ಮಿಕರನ್ನು ಕೆಲಸದಿಂದ ತೆಗೆಯಲು ಮುಕ್ತ ಅವಕಾಶ ನೀಡುವುದು, ಗುತ್ತಿಗೆ ಕಾರ್ಮಿಕರ ಪರವಾನಗಿ ಪಡೆಯಲು ಇರುವ ಕಾರ್ಮಿಕರ ಸಂಖ್ಯೆಯನ್ನು ೫೦ಕ್ಕೆ ಹೆಚ್ಚಿಸುವ ಮೂಲಕ ಕಾರ್ಖಾನೆ / ಸಂಸ್ಥೆಗಳಲ್ಲಿ ಗುತ್ತಿಗೆ ಕಾರ್ಮಿಕರ ಸಂಖ್ಯೆಯನ್ನು ಮನಸೋ ಇಚ್ಛೆ ಹೆಚ್ಚು ಮಾಡಲು ಮಾಲೀಕರಿಗೆ ಅವಕಾಶ ನೀಡುವುದು, ಮಾಲೀಕರು ಮಾಡುವ ಕಾನೂನು ಉಲ್ಲಂಘನೆಗಳ ವಿರುದ್ಧ ಕಾನೂನು ಕ್ರಮ ವಹಿಸಲಾರದಂತೆ ಕಾನೂನುಗಳಲ್ಲಿ ತಿದ್ದುಪಡಿ ಮಾಡುವುದು, ಕಾನೂನುಗಳ ಅನುಷ್ಠಾನವನ್ನು ಖಾತರಿ ಪಡಿಸುವ ಕಾರ್ಖಾನೆ/ ಸಂಸ್ಥೆಗಳ ತಪಾಸಣೆಗಳಿಗೆ ನಿರ್ಬಂಧ ಹೇರುವುದು. ಕನಿಷ್ಠ ವೇತನವನ್ನು ಅವೈಜ್ಞಾನಿಕವಾಗಿ ನಿಗದಿಪಡಿಸುವುದು.. ಕೈಗಾರಿಕಾ ವಿವಾದಗಳ ಇತ್ಯರ್ಥದಲ್ಲಿ ವಿಳಂಬ, ನ್ಯಾಯಾಲಯಗಳಲ್ಲಿ ದಶಕಗಳಾದರು ವಿವಾದಗಳು ಇತ್ಯರ್ಥವಾಗದಂತೆ ಅವಕಾಶ ನೀಡುವುದು, ಕಾರ್ಮಿಕ ಸಂಘಗಳಿಗೆ ಮಾನ್ಯತೆ ನೀಡುವಿಕೆ ಕಡ್ಡಾಯಗುಜಾಳಿಸದಿರುವುದು, ಕಾರ್ಮಿಕ ಸಂಘಗಳ ಮಾನ್ಯತೆ ನೀಡುವಿಕೆ ಕಡ್ಡಾಯಗೊಳಿಸದಿರುವುದು, ಕಾರ್ಮಿಕ ಸಂಘಗಳ ನೋಂದಣಿ ರಚನೆಗೆ ಅಡಚಣೆಗಳನ್ನು ತರುವುದು. ಈ ಕಾರ್ಮಿಕ ವಿರೋದಿ ತಿದ್ದುಪಡಿಗಳನ್ನು ವಿರೋಧಿಸಿ ಸಿ.ಐ.ಟಿ.ಯು ರಾಜ್ಯ ಸಮೀತಿ ನಡೆಸುತ್ತಿರುವ ಸಹಿ ಸಂಗ್ರಹ ಚಳುವಳಿಯಲ್ಲಿ ಸ್ವಯಂ ಇಚ್ಛೆಯಿಂದ ಭಾಗಿಯಾಗಿರುತ್ತೇವೆ. ಹಾಗೂ ಕಾರ್ಮಿಕರ ಹಿತಕ್ಕೆ ವಿರುದ್ಧವಾದ ಮಾಲೀಕರಪರವಾದ ಎಲ್ಲ ರೀತಿಯ ಕಾನೂನು ತಿದ್ದುಪಡಿಗಳನ್ನು ಈ ಕೆಳಗೆ ಸಹಿ ಮಾಡಿರುವ ಎಲ್ಲ ಕಾರ್ಮಿಕರು ವಿರೋಧಿಸುತ್ತೇವೆ. ಕಾರ್ಮಿಕರ ಹಿತವನ್ನು ರಕ್ಷಿಸಲು ಅದರ ಮೂಲಕ ಕರ್ನಾಟಕ ರಾಜ್ಯದ ಹಿತವನ್ನು ರಕ್ಷಿಸಲು ಸರ್ಕಾರವು ದೃಢ ನಿಲವನ್ನು ತೆಗೆದುಕೊಳ್ಳಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಎಮ್.ಬಿ.ಸಜ್ಜನ, ಖಜಾಂಚಿ ನಾಗಯ್ಯಾ ಸ್ವಾಮಿ, ರಾಜೇಶಿ ಸಿಮೆಂಟ ಜನರಲ್ ವರ್ಕರ ಆಂಡ ಸ್ಥಾಪ ಯುನಿಯನ್ ಪ್ರಧಾನ ಕಾರ್ಯದರ್ಶಿ ರಾಜಶೇಖರ ಕೊತಂಬರಿ, ರಾಜಶೇಖರ ಕೊತಂಬರಿ, ಯಶ್ವಂತ ಪಾಟೀಲ, ವಿರುಪಾಕ್ಷಪ್ಪ ಇದ್ದರು.