ಬಿಳವಾರ ಗ್ರಾಮದ ವಾರ್ಡ್ ನಂಬರ್ ಎರಡರಲ್ಲಿ ಹೈಟೆಕ್ ಶೌಚಾಲಯ ನಿರ್ಮಾಣ ಮಾಡಬೇಕು ರುಕುಂ ಪಟೇಲ್ ಮಾಲಿ ಪಾಟೀಲ್ ಆಗ್ರಹ.
ಬಿಳವಾರ ಗ್ರಾಮದ ವಾರ್ಡ್ ನಂಬರ್ ಎರಡರಲ್ಲಿ ಹೈಟೆಕ್ ಶೌಚಾಲಯ ನಿರ್ಮಾಣ ಮಾಡಬೇಕು ರುಕುಂ ಪಟೇಲ್ ಮಾಲಿ ಪಾಟೀಲ್ ಆಗ್ರಹ.
ಯಡ್ರಾಮಿ ತಾಲೂಕಿನ ಬೀಳವಾರ ಗ್ರಾಮದ ವಾರ್ಡ್ ನಂಬರ್ ಎರಡರಲ್ಲಿ ಶೌಚಾಲಯದ ವ್ಯವಸ್ಥೆ ಇಲ್ಲದೆ ಹಳೆಯ ಕಟ್ಟಡದಲ್ಲಿ ಶೌಚಾಲಯಕ್ಕೆ ಹೋದ ಇಬ್ಬರು ಹೆಣ್ಣು ಮಕ್ಕಳು ಕಾಲು ಜಾರಿ ಬಿದ್ದು ಕೈ ಕಾಲು ಮುರಿದುಕೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಬೀಳವಾರ ಗ್ರಾಮದಲ್ಲಿ ನಡೆದಿದ್ದೆ ಈ ವಿಷಯದ ಕುರಿತು ಈ ಸ್ಥಳದಲ್ಲಿ ಐ ಟೆಕ್ ಶೌಚಾಲಯ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿ ಗ್ರಾಮ ಸ್ಥಳೀಯ ನಾಗರಿಕರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ ಕೂಡಲೇ ಇದಕ್ಕೆ ಸಂಬಂಧಪಟ್ಟ ಶಾಸಕರಾದ ಡಾ ಅಜಯ್ ಸಿಂಗ್ ಅವರು ಹಾಗೂ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೆ ಎಚ್ಚೆತ್ತುಕೊಂಡು ಈ ಸ್ಥಳದಲ್ಲಿ ಹೈಟೆಕ್ ಶೌಚಾಲಯ ನಿರ್ಮಾಣ ಮಾಡಬೇಕೆಂದು ರುಕ್ಕುಮ್ ಪಟೇಲ್ ಮಾಲಿ ಪಾಟೀಲ್ ಹಾಗು ಅಮೀರ್ ಪಟೇಲ್ ಮಾಲಿ ಪಾಟೀಲ್ ಮತ್ತು ಮೈಬೂಬ್ ಪಟೇಲ್ ನಡುವಿನಮನಿ ಮತ್ತು ಕಾಸಿಂ ಪಟೇಲ್ ನಡುವಿನಮನಿ.ಭಾಷಾ ಪಟೇಲ್ ಮೂಲಿಮನಿ. ಹಾಗು ಮಕ್ಬುಲ್ ಪಟೇಲ್ ಹಾಗೂ ಖಾದರ್ ಪಟೇಲ್ . ಶಾಂತಪ್ಪ ಮಾಸ್ಟರ್ ದೇವರಮನಿ. ಸಿದ್ದನಗೌಡ ಕೋಡಮನಹಳ್ಳಿ. ಶಾಂತಪ್ಪ ಹಡಪದ್ ಮಾಳಪ್ಪ ಪೂಜಾರಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.