ಸಂಘರ್ಷವಿಲ್ಲ ಅಭಿವೃದ್ಧಿಯೇ ಮುಖ್ಯ: ಬಸವರಾಜ ಪಾಟೀಲ್ ಸೇಡಂ ನೇರ ನುಡಿ

ಸಂಘರ್ಷವಿಲ್ಲ ಅಭಿವೃದ್ಧಿಯೇ ಮುಖ್ಯ: ಬಸವರಾಜ ಪಾಟೀಲ್ ಸೇಡಂ ನೇರ ನುಡಿ

ಸಂಘರ್ಷವಿಲ್ಲ ಅಭಿವೃದ್ಧಿಯೇ ಮುಖ್ಯ: ಬಸವರಾಜ ಪಾಟೀಲ್ ಸೇಡಂ ನೇರ ನುಡಿ

 ಕಲಬುರಗಿ: ಭಾರತೀಯ ಸಂಸ್ಕೃತಿ ಉತ್ಸವವನ್ನು ಅಭಿವೃದ್ಧಿಗಾಗಿಯೇ ನಡೆಸಲಾಗುತ್ತಿದೆ ಹೊರತು ಸಂಘರ್ಷಕ್ಕೆ ಅಲ್ಲ ಎಂದು ಉತ್ಸವದ ಪ್ರಧಾನ ಸಂಯೋಜಕರಾದ ಬಸವರಾಜ್ ಪಾಟೀಲ್ ಸೇಡಂ ಹೇಳಿದರು. ಕಲ್ಬುರ್ಗಿಯ ವಿಕಾಸ ಅಕಾಡೆಮಿಯ ಕೇಂದ್ರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಡಿಸೆಂಬರ್ 14ರಂದು ಮಾತನಾಡುತ್ತಾ ಭಾರತೀಯ ಸಂಸ್ಕೃತಿ ಉತ್ಸವವು ಯಾವುದೇ ವಾದವನ್ನು ಹುಟ್ಟು ಹಾಕಲು ಅಥವಾ ಯಾವುದೇ ಹಿತಾಸಕ್ತಿಯನ್ನು ಕಾಪಾಡಲು ಆಯೋಜಿಸಲಾಗಿಲ್ಲ ಟೀಕೆ ಮಾಡುವವರಿಗೆ ಉತ್ತರವನ್ನು ನೀಡುವುದಿಲ್ಲ ಈ ಉತ್ಸವವು ಸಂಘರ್ಷಕ್ಕಾಗಿ ಅಲ್ಲ ಅಭಿವೃದ್ಧಿಗಾಗಿ ಕೆಸರಿನಲ್ಲಿ ನಾವು ಸಿಕ್ಕಿಹಾಕಿಕೊಳ್ಳುವುದಿಲ್ಲ ಎಂದು ಪ್ರಶ್ನೆಯೊ೦ದಕ್ಕೆ ಉತ್ತರಿಸಿ ಹೇಳಿದರು. ಕಳೆದ ಆರು ಉತ್ಸವಗಳನ್ನು ಕೈಗೊಂಡು ಅಭಿವೃದ್ಧಿಗೆ ಪೂರಕ ವಾತಾವರಣ ಸೃಷ್ಟಿಸಿಕೊಡಲಾಗಿದೆ. ಕಲಬುರಗಿಯಲ್ಲಿ ನಡೆದ" ಕಲ್ಬುರ್ಗಿ ಕಂಪು" ಉತ್ಸವದ ನಂತರ ಈ ಭಾಗಕ್ಕೆ 250 ಕೋಟಿ ರೂಪಾಯಿಗಳನ್ನು ವಿನಿಯೋಗಿಸಿ ಕೃಷಿ ಉದ್ಯೋಗ ಸ್ವಾವಲಂಬನೆಯ ಕ್ಷೇತ್ರಗಳಲ್ಲಿ ಅಪ್ರತಿಮ ಸಾಧನೆ ಸಾಧಿಸಲಾಗಿದೆ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಕನ್ನೇರಿ ಮಠದಲ್ಲಿ ಆಯೋಜಿಸಿದ ಭಾರತೀಯ ಸಂಸ್ಕೃತಿ ಉತ್ಸವದ ನಂತರ ಕನ್ನೇರಿ ಮಠದ ಸ್ವಾಮೀಜಿಗಳು ಕೃಷಿಯಲ್ಲಿ ಅದ್ಭುತ ಸಾಧನೆಯನ್ನು ಮಾಡಿ ವಿಶ್ವವಿದ್ಯಾಲಯಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ಸುಸ್ಥಿರ ಕೃಷಿ ಬದುಕಿನ ಬಗ್ಗೆ ಪಾಠ ಮಾಡುವಷ್ಟು ಬೆಳೆದು ನಿಂತಿದ್ದಾರೆ ಇದು ಕಲಬುರಗಿ ಕಂಪು ಕಾರ್ಯಕ್ರಮದ ಕೊಡುಗೆ. ಆದುದರಿಂದ ಟೀಕೆ ಮಾಡುವವರಿಗೆ ಉತ್ತರಿಸುವುದಿಲ್ಲ. ಉತ್ಸವದ ಧನಾತ್ಮಕ ಅಂಶಗಳನ್ನು ನೋಡಿದರೆ ಟೀಕಾಕಾರರಿಗೆ ಉತ್ತರ ಸಿಗುತ್ತದೆ ಎಂದು ಉತ್ಸವದ ಕುರಿತಾಗಿ ಅಪಸ್ವರ ಎತ್ತಿದವರಿಗೆ ನಯವಾಗಿ ಉತ್ತರವನ್ನು ಕೊಟ್ಟರು. ಭಾರತೀಯ ಸಂಸ್ಕೃತಿ ಉತ್ಸವಕ್ಕಾಗಿ 52 ಪುಟಗಳ ಆಮಂತ್ರಣ ಪತ್ರಿಕೆಯಲ್ಲಿ ವಿವಿಧ ಕ್ಷೇತ್ರಗಳ ಕುರಿತಾಗಿ ಧನಾತ್ಮಕ ಚರ್ಚೆ ಮತ್ತು ಸಮಾಗಮದ ಮಾಹಿತಿ ಇದರಿಂದ ಅಭಿವೃದ್ಧಿಗೆ ಪೂರಕವಾಗುವ ಎಲ್ಲಾ ಅಂಶಗಳು ಸೇರಿಕೊಂಡಿವೆ ಜನವರಿ 28ರಂದು ಕಲಬುರಗಿ ಮತ್ತು ಸೇಡಂ ಎರಡು ಕಡೆಗಳಲ್ಲಿ ಐತಿಹಾಸಿಕವೆಂಬಂತೆ ಬಲದೊಡ್ಡ ಸಮಾಜಮುಖಿ ಮೆರವಣಿಗೆ ನಡೆಯಲಿದೆ ಸೇಡಂನಲ್ಲಿ ಹತ್ತು ವರ್ಷದ ಕೆಳಗಿನ ಎರಡು ಲಕ್ಷ ಮಕ್ಕಳು ಹಾಗೂ 80ಸಾವಿರ ಜನ ತಾಯಂದಿರು ಪಾಲ್ಗೊಳ್ಳುವ ಕೈ ತುತ್ತು ಊಟ ಆಯೋಜಿಸಲಾಗಿದೆ ಅನುಭವ ಸಭಾ ಮಂಟಪ ಹಾಗೂ ಕೃಷಿ ವಿಜ್ಞಾನಿ ದಿವಂಗತ ಎಸ್ ಎ ಪಾಟೀಲ್ ಮುಖ್ಯ ವೇದಿಕೆಯಲ್ಲಿ ಮಹತ್ವದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮಹಾವೀರಚಾರ್ಯ ಹೆಸರಿನಲ್ಲಿ ಆರು ಎಕರೆ ಪ್ರದೇಶದಲ್ಲಿ ವಿಜ್ಞಾನ ಪ್ರದರ್ಶನ, ಸ್ವ ಉದ್ಯೋಗಕ್ಕಾಗಿ ಕಾಯಕಲೋಕ ನಿರ್ಮಾಣಗೊಳ್ಳಲಿದ್ದು ಇದರಲ್ಲಿ ನೂರಕ್ಕೂ ಹೆಚ್ಚು ಸ್ವಾವಲಂಬನೆಯ ಉದ್ಯೋಗ ಹೊಂದುವ ಬಗ್ಗೆ ಮಾಹಿತಿ ಲಭಿಸಲಿದೆ ಕಲಾ ಲೋಕದಲ್ಲಿ ಕಂಚು ಕಟ್ಟಿಗೆ ಪ್ಲಾಸ್ಟರ್ ಆಫ್ ಪ್ಯಾರಿಸ್ ಬಗ್ಗೆ ಕಾರ್ಯಗಾರ ನಡೆಯಲಿದೆ. ಸುಮಾರು 400 ರಿಂದ 600 ರಷ್ಟು ಸ್ವದೇಶಿ ಮಾರಾಟ ಮಳಿಗೆ ಜ್ಞಾನಲೋಕದಲ್ಲಿ 30 ರಿಂದ 40 ಪುಸ್ತಕ ಮಳಿಗೆ ಪ್ರದರ್ಶನಗಳನ್ನು ಆಯೋಜಿಸಲಾಗಿದೆ. ಒಂದು ಸಾವಿರ ಜನರಿಗೆ ಆಸನದ ವ್ಯವಸ್ಥೆ ಇರುವ ಮಾತೆ ಮಾಣಿಕೇಶ್ವರಿ ವೇದಿಕೆಯಲ್ಲಿ ಸುಮಾರು 800 ರಷ್ಟು ಪರಂಪರಾಗತ ವೈದ್ಯರು, ಸ್ವದೇಶಿ ಕಾರ್ಯಗಾರ, ಪಂಚಗವ್ಯ ಕುರಿತ ಕಾರ್ಯಗಾರ ಯುವಜನ ಪಾಲ್ಗೊಳ್ಳುವ ಕಾರ್ಯಗಾರ ನಡೆಯಲಿದೆ. ಈ ಬಾರಿಯ ಉತ್ಸವದಲ್ಲಿ ಮಕ್ಕಳಿಗಾಗಿಯೇ ಪ್ರತ್ಯೇಕವಾದ ಸಾಲುಗಳನ್ನು ಎರಡು ಎಕ್ಕರೆ ಪ್ರದೇಶದಲ್ಲಿ ತೆರೆಯಲಾಗಿದ್ದು ಇದಕ್ಕಾಗಿ ದಾವಣಗೆರೆಯ ವೀರೇಶ್ ಮತ್ತು ಬಳಗದವರು ರೂಪುರೇಷೆ ಸಿದ್ದಪಡಿಸಿದ್ದಾರೆ ಒಂದೇ ಬಾರಿಗೆ ರೂ.1500 ಮಕ್ಕಳು ವೀಕ್ಷಿಸಬಹುದಾದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ *ಮೂರು ಕೋಟಿ ಜನ ವೀಕ್ಷಣೆಯ ಸೌಲಭ್ಯ* ಭಾರತೀಯ ಸಂಸ್ಕೃತಿ ಉತ್ಸವವನ್ನು 3 ಕೋಟಿ ಜನರು ಯೂಟ್ಯೂಬ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಪ್ರತ್ಯೇಕ ಕ್ಯೂಆರ್ ಕೋಡ್ ನ ಮೂಲಕ ವೀಕ್ಷಿಸುವ ಸೌಲಭ್ಯ ಕಲ್ಪಿಸಲಾಗಿದೆ. 52 ಪುಟಗಳ ಆಮಂತ್ರಣ ಪತ್ರಿಕೆಯಲ್ಲಿ ಯು ಆರ್ ಕೋಡ್ ನೀಡಲಾಗಿದ್ದು ಅದರಲ್ಲಿ ಪ್ರತಿ ದಿನದ ಕಾರ್ಯಕ್ರಮದ ಮಾಹಿತಿಯನ್ನು ಕೂಡ ಪಡೆಯಲು ಅನುಕೂಲ ಕಲ್ಪಿಸಲಾಗಿದೆ ಎಂದು ಬಸವರಾಜ್ ಪಾಟೀಲ್ ಸೇಡಂ ಹೇಳಿದರು. *ಸುಸ್ಥಿರ ಗ್ರಾಮ ಪ್ರಶಸ್ತಿ* ಭಾರತ ವಿಕಾಸ ಸಂಗಮದ ಮಾರ್ಗದರ್ಶನದಲ್ಲಿ ಸುಸ್ಥಿರ ಕೃಷಿ ಸಾಧಿಸಿದ 15 ಹಳ್ಳಿಗಳನ್ನು ಗುರುತಿಸಿ ಅದರಲ್ಲಿ ಕೆಲಸ ಮಾಡಿದ 51 ಸಾಧಕರಿಗೆ ಪ್ರಶಸ್ತಿ ನೀಡುವ ವಿಶೇಷ ಯೋಜನೆಯನ್ನು ಕೂಡ ಹಮ್ಮಿಕೊಳ್ಳಲಾಗಿದೆ ಇದರ ಜೊತೆಗೆ ಕಲ್ಯಾಣ ಕರ್ನಾಟಕ ಭಾಗದ ಸಾಧಕರು ಹಾಗೂ ಶ್ರೀ ಕೊತ್ತಲ ಬಸವೇಶ್ವರ ಶಿಕ್ಷಣ ಸಂಸ್ಥೆಯ ಸ್ವರ್ಣ ಮಹೋತ್ಸವದ ಸಂದರ್ಭದಲ್ಲಿ ಧಾನಿಗಳಾಗಿ ಹಾಗೂ ಸಾಧಕರಾಗಿ ಕೀರ್ತಿ ಪಡೆದವರಿಗೆ ಸನ್ಮಾನಿಸಲು ನಿಶ್ಚಯಿಸಲಾಗಿದೆ ಎಂದರು. *ಲೋಕಗಳ ಅನಾವರಣ* 7ನೇ ಭಾರತೀಯ ಸಂಸ್ಕೃತಿ ಉತ್ಸವದಲ್ಲಿ ಕೃಷಿ ಲೋಕ, ವಿಜ್ಞಾನ ಲೋಕ, ದೃಶ್ಯ ಕಲಾ ಲೋಕ, ಬಾಲ ಲೋಕ, ಸೇವಾಲೋಕ, ಉದ್ಯಮ ಲೋಕ, ಜ್ಞಾನಲೋಕ, ಸ್ವದೇಶಿ ಲೋಕ, ಸಿದ್ಧೇಶ್ವರ ಲೋಕ, ಶರಣ ಲೋಕ, ಸಂಗೀತ ಲೋಕ ಅನಾವರಣಗೊಳ್ಳಲಿದ್ದು ನೋಡುಗರಿಗೆ ಕಣ್ಣಿಗೆ ಹಬ್ಬವನ್ನು ಉಂಟುಮಾಡಲಿದೆ. ಎಲ್ಲ ವಿಸ್ಮಯ ಲೋಕಗಳಲ್ಲಿ ಸಂಚರಿಸಿ ಅದ್ಭುತ ಜ್ಞಾನ ಸಂಪಾದನೆ ಯೊಂದಿಗೆ ಪರಿವರ್ತನೆಗೆ ಮುಖ ಮಾಡುವ ದೊಡ್ಡ ಅವಕಾಶವನ್ನು ಮಾಡಿಕೊಡಲಾಗಿದೆ. *ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರ ಸಮಾಗಮ* ಭಾರತೀಯ ಸಂಸ್ಕೃತಿ ಉತ್ಸವದ ವೇದಿಕೆಯಲ್ಲಿ ಸುಮಾರು 66ರಷ್ಟು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರನ್ನು ಏಕಕಾಲದಲ್ಲಿ ನೋಡುವ ಸೌಭಾಗ್ಯ ಲಭಿಸಲಿದೆ. ಕರ್ನಾಟಕ ಮಹಾರಾಷ್ಟ್ರ ಉತ್ತರ ಪ್ರದೇಶ ಉತ್ತರಾಖಂಡ್ ಜಾರ್ಖಂಡ್ ಗುಜರಾತ್ ರಾಜಸ್ಥಾನ ಮಧ್ಯಪ್ರದೇಶ ಛತ್ತೀಸ್ಗಡ, ತಮಿಳುನಾಡು, ಕೇರಳ, ಕರ್ನಾಟಕ ಆಂಧ್ರಪ್ರದೇಶ ತೆಲಂಗಾಣ ಅರುಣಾಚಲ ಪ್ರದೇಶ ದೆಹಲಿ ಮುಂತಾದಗಳಿಂದ ಪದ್ಮಶ್ರೀ ಪುರಸ್ಕೃತರು ಆಗಮಿಸಲಿದ್ದಾರೆ. *ಗಾನ ನೃತ್ಯ ಸಂಗೀತ ವೈಭವ* ಉತ್ಸವದ ಮುಖ್ಯ ಸಭಾ ಮಂಟಪಕ್ಕೆ ಅನುಭವ ಮಂಟಪ ಎಂದು ಹೆಸರಿಡಲಾಗಿದ್ದು ಮುಖ್ಯ ವೇದಿಕೆಗೆ ಕೃಷಿ ವಿಜ್ಞಾನಿ ಕಲಬುರಗಿಯವರಾದ ದಿವಂಗತ ಡಾ. ಎಸ್ ಕೆ ಪಾಟೀಲ್ ಹೆಸರಿಡಲಾಗಿದ್ದು ಇಲ್ಲಿ ರಾಷ್ಟ್ರದ ಪ್ರಮುಖ ಸಂಗೀತ ನೃತ್ಯ ಕಲಾವಿದರ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಸ್ಥಳೀಯರಿಗೂ ಹೆಚ್ಚಿನ ಆದ್ಯತೆಯನ್ನು ಇಲ್ಲಿ ನೀಡಲಾಗಿದ್ದು ಸಮಾನಾಂತರ ವೇದಿಕೆಗಳಲ್ಲಿ ಕೂಡ ಗಾನ ನೃತ್ಯ ವೈಭವ ನಡೆಯಲಿದೆ. ಅಂತರಾಷ್ಟ್ರೀಯ ಖ್ಯಾತಿಯ ಕುದ್ರೋಳಿ ಗಣೇಶ್ ಮತ್ತು ತಂಡದವರಿಂದ ಜಾದು ಪ್ರದರ್ಶನ, ಪ್ರಭಾತ್ ಕಲಾವಿದರಿಂದ ಕಥಾಸ್ರ ಕುಮಾರವ್ಯಾಸ ಭಾರತದ ಪಾಶುಪತಾಶ್ವ ನೃತ್ಯ ವೈಭವ, ಮೂಡಬಿದಿರೆಯ ಆಳ್ವಾಸ್ ನುಡಿಸಿರಿ ಸಾಂಸ್ಕೃತಿಕ ಕಾರ್ಯಕ್ರಮ ಪಂಡಿತ್ ಪ್ರವೀಣ್ ಗೋಡ್ಕೊಂಡಿ ಗಾಯನ ಮತ್ತು ಕೊಳಲು ವಾದನ, ಸೋಮನಾಥ ಮರಡೂರು ಪಂಡಿತ್ ಕುಮಾರ್ ಮರಡೂರು ಹಿಂದುಸ್ತಾನಿ ಶಾಸ್ತ್ರೀಯ ಗಾಯನ, ಉಸ್ತಾದ್ ಶಫೀಕ್ ಖಾನ್ ಮತ್ತು ಉಸ್ತಾದ ರಫೀಕ್ ಖಾನ್ ರಿಂದ ಸಿತಾರ್ ಜುಗಲ್ ಬಂದಿ ಉಸ್ತಾದ್ ನಿಸಾರ್ ಅಹಮದ್ ಅವರಿಂದ ತಬಲವಾದನ , ಬೆಂಗಳೂರಿನ ಲಯ ಲಾವಣ್ಯ ತಂಡದಿಂದ ತಾಳವಾದ್ಯ ವೃಂದ ನಡೆಯಲಿದೆ.