ಆಳಂದ ವಿದ್ಯಾರ್ಥಿಗಳಿಗೆ ಉಚಿತ ಕಾರ್ಯಗಾರ

ಆಳಂದ  ವಿದ್ಯಾರ್ಥಿಗಳಿಗೆ ಉಚಿತ ಕಾರ್ಯಗಾರ

ಆಳಂದ ವಿದ್ಯಾರ್ಥಿಗಳಿಗೆ ಉಚಿತ ಕಾರ್ಯಗಾರ 

ಸರಕಾರಿ ಪ್ರಥಮ ದರ್ಜೆ ಕಾಲೇಜ ಆಳಂದದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಕಾರ್ಯಗಾರವನ್ನು ದಿನಾಂಕ 8.12. 25 ರಿಂದ 15.12.25 ರವರೆಗೆ ಹಮ್ಮಿಕೊಳ್ಳಲಾಗಿದೆ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಪ್ರಾಂಶುಪಾಲರಾದ ಡಾ. ಪ್ರಮೀಳಾ ಎ.ಕೆ. ಅವರು ತಿಳಿಸಿದ್ದಾರೆ. ಸರಕಾರಿ ಪದವಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಮನೋಭಾವನೆಯನ್ನು ಬೆಳೆಸುವ ಉದ್ದೇಶದಿಂದ ಕಾಲೇಜಿನಲ್ಲಿರುವ ವಿವಿಧ ವಿಷಯಗಳ ಉಪನ್ಯಾಸಕರಿಂದ ಪ್ರತಿನಿತ್ಯ ಬೋಧಿಸುವುದರ ಮೂಲಕ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಜ್ಞಾನದ ಮಟ್ಟವನ್ನು ಹೆಚ್ಚಿಸಲಾಗುತ್ತದೆ ಎಂದು ಹೇಳಿದರು ಗ್ರಂಥಪಾಲಕರಾದ ಡಾ. ಅರವಿಂದ್ ಭದ್ರಶೆಟ್ಟಿಯವರು ಮಾತನಾಡಿ ವಿದ್ಯಾರ್ಥಿಗಳು ಈ ಶಿಬಿರದ ಸದುಪಯೋಗ ಪಡೆದುಕೊಂಡು ಯಶಸ್ವಿಯಾಗಬೇಕೆಂದು ಹಾರೈಸಿದರು ಸಂಪನ್ಮೂಲ ಉಪನ್ಯಾಸಕರಾದ ಮಹಾದೇವ ಮೋಘಾರವರು ಮಾತನಾಡಿ ನಿಜಕ್ಕೂ ಇಂತಹ ತರಬೇತಿ ಕಾರ್ಯಗಾರಗಳು ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳಿಗೆ ಆಶಾಕಿರಣವಾಗಲಿದೆ ಎಂದು ಹೇಳಿದರು ಈ ಸಂದರ್ಭದಲ್ಲಿ ಕಾಲೇಜಿನ ಹಿರಿಯ ಉಪನ್ಯಾಸಕರಾದ ಸಿದ್ಧಾರಾಮ ವಾಕಡೆ. ರಾಜಶೇಖರ ಪಾಟೀಲ. ಶರಣು ಭಾವಿಮನಿ. ಎಫ್.ಡಿ.ಎ. ಶಾಂತಮಲ್ಲಪ್ಪ ಪಾಟೀಲ.ವಿಶ್ವನಾಥ್ ರಾಥೋಡ್ ಶರಣು ಭಾವಿ. ರಾಜ ರೆಡ್ಡಿ ಪಾಟೀಲ ಶಾಂತಮಲ್ಲಪ್ಪ ಪಾಟೀಲ.ಡಾ ಶಿವಪ್ಪ ಭೂಸನೂರ. ಶಿವಶಂಕರ ಶಾಹು . ಕಾಲೇಜಿನ ಕಲಾ ವಿಜ್ಞಾನ. ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವರದಿ ಡಾ .ಅವಿನಾಶ S. ದೇವನೂರ