ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ – ಶ್ರೀಮತಿ ವಿಜಿ.ಮಹಿಳಾ ಪದವಿ ಮಹಾವಿದ್ಯಾಲಯ

ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ – ಶ್ರೀಮತಿ ವಿಜಿ.ಮಹಿಳಾ ಪದವಿ ಮಹಾವಿದ್ಯಾಲಯ
ದಿನಾಂಕ: 20-08-2025 – ಕಲಬುರ್ಗಿಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವಿಜಿ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ಪ್ರಾಣಿಶಾಸ್ತ್ರ ವಿಭಾಗದ ವತಿಯಿಂದ ಕಾಲೇಜಿನ ವಿದ್ಯಾರ್ಥಿನಿಯರಿಗಾಗಿ ದಿನಾಂಕ 20.08.2025 ರಂದು ರಕ್ತ ಗುಂಪು ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.
ಈ ಶಿಬಿರದಲ್ಲಿ B.A, B.Sc ಮತ್ತು B.Com ಕೋರ್ಸುಗಳ ಪ್ರಥಮ, ತೃತೀಯ ಹಾಗೂ ಐದನೇ ಸೆಮೆಸ್ಟರ್‌ಗಳ ಒಟ್ಟು 148 ವಿದ್ಯಾರ್ಥಿನಿಯರು ಭಾಗವಹಿಸಿ ರಕ್ತ ಗುಂಪಿನ ತಪಾಸಣೆಯ ಸೌಕರ್ಯವನ್ನು ಹೊಂದಿಕೊಂಡರು. ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ರೇಷ್ಮಾ ಸಂಬಣ್ಣ ಅವರ ನೇತೃತ್ವದಲ್ಲಿ ಶಿಬಿರವು ಯಶಸ್ವಿಯಾಗಿ ನಡೆಯಿತು.
ವಿಭಾಗದ ಉಪನ್ಯಾಸಕರಾದ ಶ್ರೀಮತಿ ಭಾಗ್ಯಶ್ರೀ ಹಾಗೂ ಶ್ರೀ ಅನಿಲಕುಮಾರ ಕೆಂಭಾವಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ವಿದ್ಯಾರ್ಥಿನಿಯರನ್ನು ಪ್ರೋತ್ಸಾಹಿಸಿದರು. ಶಿಬಿರವು ಆರೋಗ್ಯ ಜಾಗೃತಿ ಹಾಗೂ ಸಮಾಜ ಸೇವೆಯ ದೃಷ್ಟಿಯಿಂದ ಬಹುಮಾನ್ಯವಾಗಿತ್ತು.
ಈ ರೀತಿಯ ಆರೋಗ್ಯಪೂರ್ಣ ಶಿಬಿರಗಳನ್ನು ಒಟ್ಟು ವಿದ್ಯಾರ್ಥಿನಿಯರ ಹಿತಕ್ಕಾಗಿ ಪ್ರತಿ ವರ್ಷ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗುತ್ತದೆ ಎಂದು ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥರು ತಿಳಿಸಿದ್ದಾರೆ.