ವಾಡಿಯಲ್ಲಿ ರಾಷ್ಟ್ರಧ್ವಜಾರೋಹಣ ಮಾಡದೆ, ಹೋರಾಟಗಾರರಿಗೆ ಅವಮಾನ

ವಾಡಿಯಲ್ಲಿ ರಾಷ್ಟ್ರಧ್ವಜಾರೋಹಣ ಮಾಡದೆ, ಹೋರಾಟಗಾರರಿಗೆ ಅವಮಾನ

ವಾಡಿಯಲ್ಲಿ ರಾಷ್ಟ್ರಧ್ವಜಾರೋಹಣ ಮಾಡದೆ, ಹೋರಾಟಗಾರರಿಗೆ ಅವಮಾನ

ವಾಡಿ: ಪಟ್ಟಣದ ಕಾಂಗ್ರೆಸ್ ಕಛೇರಿಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವದಿನದಲ್ಲಿಂದು ಧ್ವಜಾರೋಹಣ ಮಾಡದೆ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಗೆ ಅವಮಾನ ಮಾಡಲಾಗಿದೆ ಎಂದು ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಹೇಳಿದ್ದಾರೆ.

ಕಲ್ಯಾಣ ಕರ್ನಾಟಕ ಭಾಗದ ಎಲ್ಲೆಡೆಯಲ್ಲೂ ವಿಮೋಚನಾ ದಿನಾಚರಣೆ,ಕಲ್ಯಾಣ ಕರ್ನಾಟಕ ಉತ್ಸವ ಆಚರಿಸದಿರುವ ಸರಕಾರಿ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ,

ಇದರ ಬಗ್ಗೆ ದೂರನ್ನು ನೀಡಲಾಗುವುದು.ನಾವೆಲ್ಲಾ ಒಂದು, ಸಂವಿಧಾನವೇ ನಮಗೆ ಶ್ರೇಷ್ಠ. ಮಾನವ ಬಂಧುತ್ವವನ್ನು ಸಾರೋಣ ಎನ್ನುವ ಸಂದೇಶದೊಂದಿಗೆ,

ಸಂವಿಧಾನದ ಮಹತ್ವ ಸಾರುವ ಪ್ರಸ್ತಾವನೆ ಓದುವುದು ಹಾಗೂ ಪ್ರಜಾಪ್ರಭುತ್ವದ ರಕ್ಷಣೆಯ ಹೊಣೆಗಾರಿಕೆ ನೆನಪಿಸುವ ಜಾಗೃತಿಯ ಮಾನವ ಸರಪಳಿ ಕಾರ್ಯಕ್ರಮ ಹಮ್ಮಿಕೊಂಡು ಎರಡು ದಿನ ಸಹ ಕಳೆದಿಲ್ಲ.

ಕಾಂಗ್ರೆಸ್ ನವರು ರಾಷ್ಟ್ರಕ್ಕೆ, ರಾಷ್ಟ್ರ ಧ್ವಜಕೆ ಹಾಗೂ ರಾಷ್ಟ್ರ ಸಂವಿಧಾನದನಕ್ಕೆ ಧಕ್ಕೆ ಉಂಟು ಮಾಡಿದರೆ ನಾವು ಸುಮ್ಮನೆ ಕೊಡುವುದಿಲ್ಲ,ಹೋರಾಟದ ಮೂಲಕ ಅವರಿಗೆ ರಾಷ್ಟ್ರಭಕ್ತಿಯ ಪರಿಚಯ ಮಾಡುತ್ತವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.